Rahul gandhi's Favorite Politician: ‘ಬಿಜೆಪಿಯಲ್ಲಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ನನ್ನಿಷ್ಟದ ನಾಯಕ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಬಣ್ಣಿಸಿದ್ದಾರೆ.
-ಜೆನ್ ಝೀಗಳ ಜತೆ ವಿಡಿಯೋ ಸಂವಾದದಲ್ಲಿ ನುಡಿ
ನವದೆಹಲಿ (ಆ.8) ‘ಬಿಜೆಪಿಯಲ್ಲಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ನನ್ನಿಷ್ಟದ ನಾಯಕ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಬಣ್ಣಿಸಿದ್ದಾರೆ.
ಇನ್‌ಸ್ಟಾಗ್ರಾಂ(Instagram)ನಲ್ಲಿ ಯುವಜನತೆಗಾಗಿ ಆಯೋಜಿಸಿದ್ದ ‘ಆಸ್ಕ್ ಮಿ ಎನಿಥಿಂಗ್’(Ask me Anything) ಸಂವಾದದಲ್ಲಿ, ಅಮರೀಂದರ್ ಸಿಂಗ್(Amarindar Singh) ಅವರೊಂದಿಗಿನ ಒಡನಾಟದ ಕುರಿತು ಮಾತನಾಡಿದ ರಾಹುಲ್, ‘ನನಗೆ ಅವರೊಂದಿಗೆ ಉತ್ತಮ ಒಡನಾಟವಿದೆ, ಅವರು ತುಂಬಾ ಕೂಲ್ ಆಗಿರುತ್ತಾರೆ. ಅವರು ಮಿಲಿಟರಿ ಇತಿಹಾಸದ ತಜ್ಞರು. ಹಲೋ, ಅಂಕಲ್ ಅಮರೀಂದರ್’ ಎಂದು ಸ್ನೇಹಪೂರ್ವಕವಾಗಿ ನುಡಿದಿದ್ದಾರೆ.
ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಂಗ್, ‘ರಾಹುಲ್ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು ಸಂತೋಷ ತಂದಿದೆ. ಅವರು ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಜತೆ ನನ್ನ ಬಾಂಧವ್ಯ ಎಂದೆಂದಿಗೂ ಮುಂದುವರಿಯಲಿದೆ. ಆದರೆ ರಾಜಕೀಯವಾಗಿ ನಾನೆಂದಿಗೂ ಬಿಜೆಪಿಗೆ ಬದ್ಧ’ ಎಂದು ಸ್ಪಷ್ಟಪಡಿಸಿದ್ದಾರೆ.
ಅಮರೀಂದರ್ ಮೂಲತಃ ಕಾಂಗ್ರೆಸ್ ನಾಯಕರು. ಕೆಲ ವರ್ಷ ಹಿಂದೆ ಬಿಜೆಪಿ ಸೇರಿದ್ದರು.


