Karnataka  By election ಫಲಿತಾಂಶದ ಬಗ್ಗೆ ರಾಜಕೀಯ ಮುಖಂಡರ ಪ್ರತಿಕ್ರಿಯೆ ಸಿಂದಗಿ ಬಿಜೆಪಿ ಗೆಲುವು, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವಿನ ಕುರಿತು ನಾಯಕರಮಾತು\

ಹುಬ್ಬಳ್ಳಿ(ನ.02): ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ(BJP) ಸೋಲು ಕಂಡ ಹಿನ್ನೆಲೆ ರಾಜಕೀಯ ಪ್ರಮುಖರು ಪ್ರತಿಕ್ರಿಯಿಸಿದ್ದಾರೆ. ಸಿಂದಗಿ ಉಪಚುನಾವನೆಯಲ್ಲಿ(By election) ಗೆಲುವು ಸಾಧಿಸಿದರೂ ಹಾನಗಲ್‌ನಲ್ಲಿ ಬಿಜೆಪಿ ಸೋಲನುಭವಿಸಿದೆ. ಈ ಬಗ್ಗೆ ಪ್ರಮುಖ ನಾಯಕರು ಪ್ರತಿಕ್ರಿಯಿಸಿದ್ದು ಹೀಗೆ.

ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಸೋಲು ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಅನ್ನುವುದು ಸಾಮಾನ್ಯ. ಇದು‌ ಮತದಾರರು ಕೊಟ್ಟಂತಹ ನಿರ್ಣಯ ಅದನ್ನು ನಾವು ಸ್ವಾಗತಿಸುತ್ತೇವೆ. ನಾವು ಎಲ್ಲಿ ಎಡವಿದ್ದೇವೆ ಅನ್ನುವುದನ್ನು ಪರಾಮರ್ಶೆ ಮಾಡಿಕೊಳ್ಳುತ್ತೇವೆ. ಈ ಬಾರಿ ಸೋಲು ಅನುಭವಿಸಿದ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ನಮ್ಮ ಅಭ್ಯರ್ಥಿ ಬಗ್ಗೆ ಅಪಸ್ವರ ಇತ್ತೋ ಏನೋ ಗೊತ್ತಿಲ್ಲ. ಹಾನಗಲ್ ಕ್ಷೇತ್ರದಲ್ಲಿ ನಮ್ಮನ್ನು ತಿರಸ್ಕರಿಸಿದ್ದಾರೆ. ಈ ಸೋಲನ್ನು ನಾವು ಒಪ್ಪಿ ಸ್ವಾಗತಿಸುತ್ತೇವೆ. ಪಕ್ಷ ಸೂಚಿಸಿದ ಅಭ್ಯರ್ಥಿ ಪರ ನಾವೆಲ್ಲ ಕೆಲಸ ಮಾಡಿದ್ದೇವೆ. ಮುಂದಿನ ಬಾರಿ ಗೆಲುವು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಇದು ಸಿಎಂಗೆ ಮುಖಭಂಗ ಅಲ್ಲ, ಸೋಲು ಗೆಲುವು ಸಾಮಾನ್ಯ ಎಂದಿದ್ದಾರೆ.

Karnataka By election: ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು: ಇದು ಎಚ್ಚರಿಕೆ ಗಂಟೆ ಎಂದ ಸಿದ್ದರಾಮಯ್ಯ

ಇದು ಸಿಎಂ ಗೆ ಸೋಲಲ್ಲ ಬಿಜೆಪಿಯ ಸೋಲು ಎಂಬ ಡಿಕೆಶಿ ಟ್ವೀಟ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿಯವರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಉತ್ಸಾಹದಿಂದ ಮಾತನಾಡುತ್ತಿದ್ದಾರೆ. ಸಿಂದಗಿಯಲ್ಲಿ ಅವರನ್ನು ಜನ ತಿರಸ್ಕರಿಸಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಎರಡೂ ಕ್ಷೇತ್ರದ ಜನರ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಉತ್ತಮ‌ ಸಂದೇಶ ನೀಡಲಿದ್ದೇವೆ ಎಂದಿದ್ದಾರೆ.

ರಾಮನಗರ: ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆ ಫಲಿತಾಂಶ ಹಿನ್ನೆಲೆ ರಾಮನಗರದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನಿಡಿದ್ದು ಎರಡು ಕ್ಷೇತ್ರದಲ್ಲಿ‌ಜೆಡಿಎಸ್ ಪಕ್ಷಕ್ಕೆ ಬಂದಂತ ಮತ ಕಾಂಗ್ರೆಸ್ ಪಕ್ಷ ಆಪಾದನೆಗೆ ಉತ್ತರ ಸಿಕ್ಕಿದೆ ಎಂದಿದ್ದಾರೆ. ಕಾರ್ಯಕರ್ತರ ಒತ್ತಾಸೆಗೆ ಅಭ್ಯರ್ಥಿ ನಿಲ್ಲಿಸಿದ್ದೆವು. ಸಿಂಧಗಿ ಕ್ಷೇತ್ರದಲ್ಲಿ ಮತ ಬೇಸರ ತಂದಿದೆ. ಸಿಂಧಗಿಯಲ್ಲಿ ಹಲವಾರು ಕಾರ್ಯಕ್ರಮ ಕೊಟ್ಟಿದ್ವಿ ಫಲಿತಾಂಶ ನಿರಾಸೆ ತಂದಿದೆ. ಕಾರ್ಯಕರ್ತರ ಗುರುತಿಸಲು ಗೊಂದಲವಾಗಿದೆ. ಸಾರ್ವತ್ರಿಕ ಚುನಾವಣೆಯೇ ಬೇರೆ ಉಪಚುವಾಣೆಯೇ ಬೇರೆ. ನನ್ನ ಗಮನ ಇರುವುದು 2023 ಕ್ಕೆ ಎಂದಿದ್ದಾರೆ.

ಪಕ್ಷವನ್ನ ತಳಮಟ್ಟದಿಂದ ತರುವ ನಿಟ್ಟಿನಲ್ಲಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದೇನೆ. ನಾವು ವಿಷಯ ಆಧಾರಿತವಾಗಿ ಹೋರಾಟ ಮಾಡುತ್ತೇವೆ. ಹಾನಗಲ್ ನಲ್ಲಿ ನಮಗೆ ಬೇಸ್ ಇರಲಿಲ್ಲ. ಆದರೆ ಮೊದಲೆಲ್ಲ ಸಿಂಧಗಿಯಲ್ಲಿ ಬಿಜೆಪಿಗೆ ಫೈಟ್ ಕೊಟ್ಟಿದ್ದು ನಾವೇ. ಮುಂದಿನ ಚುನಾವಣೆಗೆ ಪಕ್ಷ ಸಧೃಢ ಗೊಳಿಸಲು ಮುಂದಾಗಿದ್ದೇವೆ. 8 ನೇ ತಾರೀಕಿನಿಂದ ಸಭೆ ನಡೆಸುತ್ತೇವೆ. 8 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. 30 ಜಿಲ್ಲೆಯ ಕಾರ್ಯಕರ್ತರ ಜತೆ ಸಭೆ ಮಾಡುತ್ತೇವೆ ಎಂದಿದ್ದಾರೆ.

Karnataka By election: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ BJP ಗೆಲುವಿಗೆ ಕಾರಣವಾಗಿದ್ದೇನು ?

ಈ ಚುನಾವಣೆಯಲ್ಲಿ ಹಣ ದೊಡ್ಡ ಮಟ್ಟದಲ್ಲಿ ಬಿಂಬಿತವಾಗಿದೆ. ಆದರೆ ನಾವು ಯಾವ ಹಣ ಹಂಚಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳು ಹಣ ಹಂಚಿವೆ. ಉಪಚುನಾವಣೆ ನಡೆಯುವುದೇ ಹಣ ಬಲದಿಂದ. ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ. ಈ ಚುನಾವಣೆ ನನಗೆ ನಿರಾಸೆ ತಂದಿಲ್ಲ. ಅಭಿವೃದ್ಧಿ ಆದಾಗ ಮಾತನಾಡುತ್ತಾರೆ. ಆದರೆ ಜನರೇಷನ್ ಬದಲಾದಾಗ ಜನರು ಮರೆಯುತ್ತಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬಳ್ಳಾರಿ : ಬಳ್ಳಾರಿಯಲ್ಲಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದು ಉಪಚುನಾವಣೆ ಫಲಿತಾಂಶ ಮೂರು ಪಕ್ಷಕ್ಕೆ ಆಶ್ಚರ್ಯ ತಂದಿದೆ.
ನಾವು ಒಂದು ಗೆದ್ದಿದ್ದೇವೆ ಒಂದು ಸೋತಿದ್ದೆವೆ. ಎರಡು ಕ್ಷೇತ್ರ ಗೆಲ್ಲಬೇಕಿತ್ತು. ಸಿಂದಗಿ‌ ನಿರೀಕ್ಷೆ ಗೂ ಮೀರಿ ಫಲಿತಾಂಶ ಬಂದಿದೆ. ಹಾನಗಲ್ ದೊಡ್ಡ ಹಿನ್ನೆಡೆಯಾಗಿದೆ. ಎಲ್ಲಿ ಲೋಪ ದೋಷಯಾಗಿದೆ ಪರಿಶೀಲಿಸುತ್ತೇವೆ. ಮುಖ್ಯಮಂತ್ರಿ ಒಬ್ಬರೇ ಸೋಲಿಗೆ ಕಾರಣವಲ್ಲ ಸಾಮೂಹಿಕ ಸೋಲಿನ ಹೊಣೆ ಹೊರುತ್ತೇವೆ ಎಂದಿದ್ದಾರೆ.