Karnataka By election: ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು: ಇದು ಎಚ್ಚರಿಕೆ ಘಂಟೆ ಎಂದ ಸಿದ್ದರಾಮಯ್ಯ
- ಹಾನಗಲ್‌ನಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು
- ಗೆಲುವಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತು
ಹಾನಗಲ್(ನ.02): ಹಾನಗಲ್‌ನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದು, ಹೇಗಾದರೂ ಗೆಲ್ಲಬೇಕೆನ್ನುವ ಬಿಜೆಪಿ ನಿರೀಕ್ಷೆಯನ್ನು ಹುಸಿ ಮಾಡಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾನಗಲ್ ಕ್ಷೇತ್ರದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಗೆಲುವಿನ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ದೊಡ್ಡ ಅಂತರದಲ್ಲಿ ಸೋತಿದ್ದೇವೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ ಮೂರನೇ ಸ್ಥಾನದಲ್ಲಿತ್ತು. ಈಗ ಎರಡನೇ ಸ್ಥಾನಕ್ಕೆ ಬಂದಿದ್ದೇ ಅದೇ ಸಮಾಧಾನ, ಆದ್ರೆ ಸೋಲು ಸೋಲೇ ಎಂದಿದ್ದಾರೆ.
ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ನಡೆದಿದೆ.
Karnataka By Election: ಹಾನಗಲ್‌ನಲ್ಲಿ BJP ಸೋಲಿಗೆ ಕಾರಣವಾಗಿದ್ದೇನು ?
ಹಾನಗಾಲ್ ಕ್ಷೇತ್ರದಲ್ಲಿ ಮಾನೆ 13 ಸಾವಿರ ಲೀಡ್ ಇದೆ ಅಂತ ಹೇಳಿದ್ದಾರೆ. ಹಾನಗಲ್ ನಿರೀಕ್ಷಿತ ಫಲಿತಾಂಶ ಬಂದಿದೆ.
ನಮ್ಮ ಅಭ್ಯರ್ಥಿ ಪರ ಒಳ್ಳೆಯ ಅಭಿಪ್ರಾಯವಿತ್ತು. ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನವಿತ್ತು. ಸಿಎಂ ಬೊಮ್ಮಾಯಿ ಸೇರಿದಂತೆ ಡಜನ್ ಮಂತ್ರಿಗಳು ಅಲ್ಲಿ ಹೋಗಿ ಪ್ರಚಾರ ಮಾಡಿದರೂ ಫಲ ನೀಡಿಲ್ಲ. ಅದನ್ನ ಅವರ ಪ್ರತಿಷ್ಠೆ ತಗೆದುಕೊಂಡು ಹಣ ಹಂಚಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಆದರೂ ನಾವು ಗೆದ್ದಿದ್ದೇವೆ ಎಂದಿದ್ದಾರೆ.
ನಾನು ಇದನ್ನ ದಿಕ್ಸೂಚಿ ಅಂತ ಹೆಳೋದಿಲ್ಲ. ಆದರೆ ಒಂದು ಎಚ್ಚರಿಕೆ ಗಂಟೆಯನ್ನು ಭಾರಿಸಿದ್ದಾರೆ. ಕರ್ನಾಟಕದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಅಂತ ಗೊತ್ತಾಗಿದೆ ಎಂದಿದ್ದಾರೆ ಸಿದ್ದರಾಮಯ್ಯ. ಇಡೀ ದೇಶದ 15 ಭಾಗದಲ್ಲಿ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಅವರು ಹೇಳಿದ್ದಾರೆ.
Karnataka By election: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ BJP ಗೆಲುವಿಗೆ ಕಾರಣವಾಗಿದ್ದೇನು ?
ಜೆಡಿಎಸ್ ಅಲ್ವಾಸಂಖ್ಯಂತ ಅಭ್ಯರ್ಥಿಗಳನ್ನ ಹಾಕಿದ ತಕ್ಷಣ ಗೆಲ್ಲೋದಕ್ಕೆ ಸಾಧ್ಯವಿಲ್ಲ ಅಂತ ನಾನು ಮೊದಲೇ ಹೇಳಿದ್ದೆ.
ಕೋಮುವಾದಿ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಡ್ಯಾಪಾಸಿಟ್ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ನಾನು ಹಾನಗಲ್ ಕ್ಷೇತ್ರದ ಅಳಿಯ ಅಂತ ಹೇಳಿಕೊಂಡಿದ್ದರು. ಜನ ಅದಕ್ಕೆಲ್ಲಸೊಪ್ಪು ಹಾಕಿಲ್ಲ ಎಂದಿದ್ದಾರೆ.
ಸಿಂದಗಿ (Sindagi) ಮತ್ತು ಹಾನಗಲ್ ಉಪಚುನಾವಣೆ (Hanagal By Election) ಮತದಾನ ಶನಿವಾರ ನಡೆದಿತ್ತು. ಮತದಾರ ತನ್ನ ನಿರ್ಣಯವನ್ನು ಮತಯಂತ್ರಗಳಲ್ಲಿ ಭದ್ರಪಡಿಸಿದ ನಂತರ ಗೆಲುವಿನ ಕುರಿತ ಕುತೂಹಲ ಹೆಚ್ಚಾಗಿತ್ತು. ಅ.30ರಂದು ನಡೆದ ಉಪಚುನಾವಣೆಯ ಫಲಿತಾಂಶ (By Election Result) ನ.2ರಂದು ಪ್ರಕಟವಾಗಿದೆ.
ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ (BY Election) ಮತ ಎಣಿಕೆ ಇಂದು ನಡೆದಿದ್ದು, ರಾಜಕೀಯ ಪಕ್ಷಗಳ ನಾಯಕರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿತ್ತು. ಅಂತೂ ಭಾರೀ ಕುತೂಹಲದ ಮಧ್ಯೆ ಸಿಂದಗಿಯಲ್ಲಿ ಕಮಲ ಅರಳಿದೆ. ಆದರೆ ಸಾಕಷ್ಟು ಪ್ರಯತ್ನಗಳ ನಂತರವೂ ಹಾನಗಲ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
ಸಿಂದಗಿ (Sindagi) ಉಪ ಚುನಾವಣೆ (By election) ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿತ್ತು. ಮತಯಂತ್ರಗಳನ್ನು ಬಿಗಿ ಭದ್ರತೆಯೊಂದಿಗೆ ವಿಜಯಪುರ (Vijayapura) ನಗರದಲ್ಲಿರುವ ಸೈನಿಕ ಶಾಲೆಯ ಒಡೆಯರ್ ಹೌಸ್‌ನ ಸ್ಟ್ರಾಂಗ್ ರೂಂನಲ್ಲಿ (Strong Room) ಇಡಲಾಗಿತ್ತು. ಅದೇರೀತಿ ಹಾನಗಲ್ ಕ್ಷೇತ್ರದ ಮತಯಂತ್ರಗಳು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (Govt Engineering College) ಇರಿಸಲಾಗಿತ್ತು. ಎರಡೂ ಕಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿತ್ತು.