Asianet Suvarna News Asianet Suvarna News

Karnataka By election: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ BJP ಗೆಲುವಿಗೆ ಕಾರಣವಾಗಿದ್ದೇನು ?

  • ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ (BY Election) ಮತ ಎಣಿಕೆ(Vote counting)
  • ಬಿಜೆಪಿ (BJP) ಗೆಲುವಿಗೆ, ಕಾಂಗ್ರೆಸ್(Congress) ಸೋಲಿಗೆ ಕಾರಣವಾಗಿದ್ದೇನು ?
Sindagi Byelection Reasons for BJP winning in assembly constituency dpl
Author
Bangalore, First Published Nov 2, 2021, 12:04 PM IST

ಸಿಂದಗಿ(ನ.02): ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ (BY Election) ಮತ ಎಣಿಕೆ ಇಂದು ನಡೆದಿದ್ದು, ರಾಜಕೀಯ ಪಕ್ಷಗಳ ನಾಯಕರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿತ್ತು. ಅಂತೂ ಭಾರೀ ಕುತೂಹಲದ ಮಧ್ಯೆ ಕಮಲ ಅರಳಿದ್ದು ಈಗ ಗೆಲುವಿಗೆ ಯಾವ್ಯಾವ ಅಂಶಗಳು ಕಾರಣವಾದವು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

  • ಮುಖ್ಯವಾಗಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಭೂಸನೂರು ಪರ ಭಾರೀ ಅನುಕಂಪದ ಅಲೆ ಇತ್ತು.
  • ಕಡಿಮೆ ಅಂತರದಲ್ಲಿ ಸೋತಿದ್ದ ಕಾರಣ ಗೆಲ್ಲಬೇಕಾಗಿತ್ತು ಎಂಬ ಭಾವನೆ ಗಟ್ಟಿಯಾಗಿತ್ತು.
  • ಕ್ಷೇತ್ರದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಪ್ರಭಾವ ಬೀರಿದೆ.
  • ಕ್ಷೇತ್ರದ ಪ್ರಮುಖ ಲಿಂಗಾಯತ ಸಮೂದಾಯದ ಮತಗಳು ವರ್ಗಾವಣೆ ಆಗದಂತೆ ತಡೆಯುವಲ್ಲಿ ಬಿಜೆಪಿ ಸಫಲವಾಗಿರುವುದು ಗೆಲುವಿನ ಓಟಕ್ಕೆ ಹೆಚ್ಚಿನ ಶಕ್ತಿ ತುಂಬಿದೆ.

ಬೈಎಲೆಕ್ಷನ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

  • ಜೆಡಿಎಸ್ ಅಭ್ಯರ್ಥಿ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಗೆ ಹೋಗದಂತೆ ತಡೆದಿರುವುದು ಕೂಡಾ ಇಲ್ಲಿ ಬಿಜೆಪಿ ಗೆಲುವಿಗೆ ನೆರವಾಗಿದೆ.
  • ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸಚಿವರನ್ನು ನೇಮಿಸಿ ಕಾರ್ಯತಂತ್ರ ರೂಪಿಸಲಾಗಿತ್ತು.
  • ಶಾಸಕರು ಮತ್ತು ಜಿಲ್ಲಾ ನಾಯಕರು ಗ್ರಾಮಗಳಲ್ಲೇ ವಾಸ್ತವ್ಯ ಹೂಡಿ ಮನವೊಲಿಕೆ ಮಾಡಿದ್ದರು.
  • ಕ್ಷೇತ್ರದ ಅಭಿವೃದ್ಧಿಗೆ ಆಡಳಿತಾರೂಢ ಪಕ್ಷವನ್ನು ಬೆಂಬಲಿಸುವ ಮನಸ್ಥಿತಿಗೆ ಬಂದ ಮತದಾರರ ಯೋಚನೆಗಳು ಈ ಗೆಲುವಿನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
  • ಜೆಡಿಎಸ್ ನಿಂದ ಪಕ್ಷಾಂತರಗೊಂಡ ಕೈ ಅಭ್ಯರ್ಥಿಯನ್ನು ಒಪ್ಪಿಕೊಳ್ಳಲು ಮತದಾರರು ಹಿಂದೇಟು ಹಾಕಿರುವುದು ಗೋಚರಿಸಿದೆ.
  • ಬಿಜೆಪಿ ನಾಯಕರ ಸಂಘಟಿತ ಪ್ರಚಾರ ಮತ್ತು ಸಿಂದಗಿ ಕ್ಷೇತ್ರದ ಅಭಿವೃದ್ಧಿಯ ವಿಚಾರ ಪ್ರಚಾರ ಮಾಡಿದ್ದು ಇಲ್ಲಿ ಗೆಲುವಿಗೆ ನೆರವಾಗಿದೆ.
  • ಹಿಂದುಪರ ಸಂಘಟನೆಗಳು ತೆರೆಮರೆಯಲ್ಲಿ ನಡೆಸಿದ ಪ್ರಚಾರದಿಂದಾಗಿ ಹಿಂದು ಮತಗಳ ಕ್ರೋಢಿಕರಣವಾಗಿದೆ.

ಸಿಂದಗಿಯಲ್ಲಿ ಕಾಂಗ್ರೆಸ್ ಸೋಲಲು ಕಾರಣಗಳೇನೇನು ?

  • ಕಳೆದ ಬಾರಿ ಸೋತಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಭೂಸನೂರು ಪರ ಅನುಕಂಪ ಸೃಷ್ಟಿಯಾಗಿರುವುದು ಕಾಂಗ್ರೆಸ್‌ಗೆ ಈ ಬಾರಿ ಕಂಟಕವಾಗಿ ಪರಿಣಮಿಸಿದೆ.
  • ಕ್ಷೇತ್ರದಲ್ಲಿ ಫಲ ನೀಡದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಚಾರ ಬಿಜೆಪಿ ಪ್ರಚಾರ ಮೀರಿಸುವಲ್ಲಿ ವಿಫಲವಾಗಿದೆ.
  • ಪ್ರಮುಖ ಲಿಂಗಾಯತ ಗಾಣಿಗ ಸಮೂದಾಯದ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
  • ಕ್ಷೇತ್ರದ ಅಭಿವೃದ್ಧಿ ವಿಚಾರ ಮರೆತು ವೈಯಕ್ತಿಕ ಟೀಕೆ ಟಿಪ್ಪಣೆಗಳಿಗೆ ಆದ್ಯತೆ ನೀಡಿ ಪ್ರಚಾರ ಮಾಡಿದ್ದು ಮತದಾರರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿಲ್ಲ.
  • ಅಭಿವೃದ್ಧಿಗಾಗಿ ಆಡಳಿತ ಪಕ್ಷವನ್ನು ಬೆಂಬಲಿಸುವ ಮನಸ್ಥಿತಿಗೆ ಬಂದ ಸಿಂದಗಿ ಮತದಾರು ಬಿಜೆಪಿಯತ್ತ ವಾಲಿದ್ದಾರೆ.
  • ಜೆಡಿಎಸ್ ನಿಂದ ಅಶೋಕ್ ಮನಗೂಳಿ ಪಕ್ಷಾಂತರಗೊಂಡರೂ, ಕಾರ್ಯಕರ್ತರು ಕಾಂಗ್ರೆಸ್ ಗೆ ಬರದಿರುವುದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ.

ಹಾನಗಲ್, ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್: ಅಭ್ಯರ್ಥಿಗಳಿಗೆ ಖಡಕ್ ಸೂಚನೆ ಕೊಟ್ಟ ಚುನಾವಣಾ ಆಯೋಗ

ಸಿಂದಗಿ ಉಪಚುನಾವಣೆ ಫಲಿತಾಂಶ

ಅಂತಿಯ ಫಲಿತಾಂಶ
ಕಾಂಗ್ರೆಸ್ - 62680
ಬಿಜೆಪಿ -  93865
ಜೆಡಿಎಸ್ - 4353
ಬಿಜೆಪಿ 31185 ಮಗತಗಳ ಅಂತರದಲ್ಲಿ ಗೆಲುವು

ನಿರೀಕ್ಷೆ ರೀತಿಯಲ್ಲಿ ಮತದಾರರ ಮನೆ ಮನೆ ತಲುಪುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಫೇಲ್ ಆಗಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡಿದ ಬಳಿಕ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣ ಬದಲಾಗಿದ್ದು ಕಂಬಳಿ ರಾಜಕೀಯದ ಹೇಳಿಕೆ ಮತಗಳಿಕೆಯಲ್ಲಿ ನಿರೀಕ್ಷಿತ ಮಟ್ಟದ ಪ್ರಭಾವ ಬೀರದಿರುವುದು ಸೋಲಿಗೆ ಕಾರಣವಾಗಿದೆ. ಸಿಎಂ ತವರು ಕ್ಷೇತ್ರ ಹಾನಗಲ್ ನಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದ್ದು ಇನ್ನು 9 ಸುತ್ತಿನ ಮತದಾನ ಎಣಿಕೆ ಬಾಕಿ ಇದೆ.

ಉಪಚುನಾವಣೆ ನಡೆದಿದ್ದೇಕೆ?

ಸಿಂದಗಿಯಲ್ಲಿ ಜೆಡಿಎಸ್‌(JDS) ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರು ನಿಧನರಾಗಿದ್ದರು. ಹಾಗಾಗಿ ಸಿಂದಗಿಯಲ್ಲಿ ಉಪಚುನಾವಣೆ ನಡೆದಿದೆ. ವಿಜಯಪುರ ಸಿಂದಗಿ ವಿಧಾನಸಭಾ ಕ್ಷೇತ್ರ ಹಿರಿಯ ಶಾಸಕ, ಜೆಡಿಎಸ್‌ ನಾಯಕರಾಗಿದ್ದ ಎಂ ಸಿ ಮನಗೂಳಿ(85) ಜನವರಿ 12ರಂದು ಕೊನೆಯುಸಿರೆಳೆದಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮನಗೂಳಿಯನ್ನು ಜನವರಿ 9ರಂದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 1 ಗಂಟೆಗೆ ನಿಧನರಾಗಿದ್ದರು.

ಸಿಂದಗಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದರೂ ಸಿಗದ ಫಲ:

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಉಪ ಚುನಾವಣೆ ಹಿನ್ನೆಲೆ ವಾಸ್ತವ್ಯ ಹೂಡಿದರೂ ಮತದಾರ ಕೈಹಿಡಿದಿಲ್ಲ. ಕ್ಷೇತ್ರವನ್ನ ಉಳಿಸಿಕೊಳ್ಳಲು ಹತ್ತಕ್ಕೂ ಹೆಚ್ಚು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಜೆಡಿಎಸ್ ವರಿಷ್ಠರು ಸುದ್ದಿಯಾಗಿದ್ದರು.

ನೀರಾವರಿ ಸಚಿವರಾಗಿದ್ದಾಗ ಸಿಂದಗಿ ತಾಲ್ಲೂಕಿನ ಸುತ್ತಮುತ್ತಲ ಭಾಗಕ್ಕೆ ನೀರು ಹರಿಸಿದ್ದ ದೇವೇಗೌಡ ಇದನ್ನೇ ಚುನಾವಣಾ ಪ್ರಚಾರದ ವೇಳೆ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಜೊತೆಗೆ ಮನಗೂಳಿ ಕುಟುಂಬದ ಜೊತೆಗಿನ ಒಡನಾಟವನ್ನೂ ಪ್ರಚಾರ ಸಂದರ್ಭ ಮೆಲುಕು ಹಾಕಿದ್ದರು.

ಎಂ.ಸಿ ಮನಗುಳಿ ಸಾವಿನ ಅನುಕಂಪ ವರ್ಕೌಟ್ ಆಗಬಹುದೆಂಬ ಲೆಕ್ಕಾಚಾರದಲ್ಲಿ ಮತಯಾಚನೆ ಮಾಡಿದರೂ ಮತದಾರ ಜೆಡಿಎಸ್ ಕೈಹಿಡಿದಿಲ್ಲ. ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿಯನ್ನ ಕಳೆದುಕೊಂಡಿದ್ದು ಕೇವಲ 4353 ಮತಗಳನ್ನ ಮಾತ್ರ ಪಡೆದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸಮಬಲದ ಪೈಪೋಟಿಯನ್ನ ಕೊಡಲಾಗದೆ ಜೆಡಿಎಸ್ ಹೀನಾಯ ಸೋಲುಕಂಡಿದೆ.

ಸಿಂದಗಿ (Sindagi) ಮತ್ತು ಹಾನಗಲ್‌ ಉಪಚುನಾವಣೆ (Hanagal By Election) ಮತದಾನ ಶನಿವಾರ ನಡೆದಿತ್ತು. ಮತದಾರ ತನ್ನ ನಿರ್ಣಯವನ್ನು ಮತಯಂತ್ರಗಳಲ್ಲಿ ಭದ್ರಪಡಿಸಿದ ನಂತರ ಗೆಲುವಿನ ಕುರಿತ ಕುತೂಹಲ ಹೆಚ್ಚಾಗಿತ್ತು. ಅ.30ರಂದು ನಡೆದ ಉಪಚುನಾವಣೆಯ ಫಲಿತಾಂಶ (By Election Result) ನ.2ರಂದು ಪ್ರಕಟವಾಗಿದೆ.

ಸಿಂದಗಿ (Sindagi) ಉಪ ಚುನಾವಣೆ (By election) ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿತ್ತು. ಮತಯಂತ್ರಗಳನ್ನು ಬಿಗಿ ಭದ್ರತೆಯೊಂದಿಗೆ ವಿಜಯಪುರ (Vijayapura) ನಗರದಲ್ಲಿರುವ ಸೈನಿಕ ಶಾಲೆಯ ಒಡೆಯರ್‌ ಹೌಸ್‌ನ ಸ್ಟ್ರಾಂಗ್‌ ರೂಂನಲ್ಲಿ (Strong Room) ಇಡಲಾಗಿತ್ತು. ಅದೇರೀತಿ ಹಾನಗಲ್‌ ಕ್ಷೇತ್ರದ ಮತಯಂತ್ರಗಳು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (Govt Engineering College) ಇರಿಸಲಾಗಿತ್ತು. ಎರಡೂ ಕಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿತ್ತು.

Follow Us:
Download App:
  • android
  • ios