ಪ್ರಧಾನಿ ಧ್ಯಾನಕ್ಕೆ ಕುಳಿತ ಬೆನ್ನಲ್ಲೇ, ಕನ್ಯಾಕುಮಾರಿಯಲ್ಲಿ 33 ವರ್ಷಗಳ ಹಿಂದೆ ಇದ್ದ ಮೋದಿ ಫೋಟೋ ವೈರಲ್

ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿಯುತ್ತಿದ್ದಂತೆ ಗುರುವಾರ ಸಂಜೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 45 ತಾಸುಗಳ ಧ್ಯಾನ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಅವರ 3 ದಶಕಗಳ ಹಿಂದಿನ ಫೋಟೋ ವೈರಲ್ ಆಗಿದೆ.

PM Narendra Modi meditate in Kanyakumari, his old photo at Vivekananda Rock Memorial goes viral gow

ನವದೆಹಲಿ (ಮೇ.31): ಪ್ರಧಾನಿ ಮೋದಿ ಧ್ಯಾನ ನಡೆಸಲು ಕನ್ಯಾಕುಮಾರಿಗೆ ಆಗಮಿಸಿರುವ ನಡುವೆಯೇ, 33 ವರ್ಷಗಳ ಹಿಂದಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಮೋದಿ ಧ್ಯಾನ ನಿರತರಾಗಿರುವ ಅದೇ ಸ್ಥಳದಲ್ಲಿ ನಿಂತಿರುವ ಹಳೆಯ ಪೋಟೋವದು. ಅದು 1991 ಡಿಸೆಂಬರ್ 11 ರಂದು ತೆಗೆದಿದ್ದ ಫೋಟೋ, ಆ ಸಮಯದಲ್ಲಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಿಂದ ಕಾಶ್ಮೀರದವರೆಗೆ ಬಿಜೆಪಿಯ ನಾಯಕ ಡಾ. ಮುರುಳಿ ಮನೋಹರ ಜೋಷಿ ನೇತೃತ್ವದಲ್ಲಿ ಏಕತಾ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಆ ಯಾತ್ರೆಯಲ್ಲಿ ಅಂದು ಸಾಮಾನ್ಯ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರು ಭಾಗವಹಿಸಿದ್ದರು.

ಫೋನ್‌ ಬಳಸಲು ಬಿಡದ ಪತಿಗೆ ನಿದ್ರಾ ಮಾತ್ರೆ ನೀಡಿ, ಮಂಚಕ್ಕೆ ಕಟ್ಟಿ ಹಾಕಿ ಕರೆಂಟ್ ಶಾಕ್ ಕೊಟ್ಟು ಹಿಂಸಿಸಿದ ಪತ್ನಿ!

2 ತಿಂಗಳಿನಿಂದ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ದೇಶದ ಉದ್ದಗಲಕ್ಕೂ ಎಡೆಬಿಡದೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರದಿಂದ ಮೂರು ದಿನಗಳ ಕಾಲ ಧ್ಯಾನದ ಮೊರೆ ಹೋಗಿದ್ದು, ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ  ಮೋದಿ ಧ್ಯಾನದಲ್ಲಿರುವ ಫೋಟೋಗಳು ವೈರಲ್ ಆಗಿದೆ. ಜೂ.1ರ ಕೊನೆಯ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬೀಳಲಿದೆ. ಜೂ1ರಂದು ಮಧ್ಯಾಹ್ನ 3 ಗಂಟೆಗೆ ಧ್ಯಾನ ಮುಗಿಸಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಮೇ 31ರಂದೇ ಪ್ರಜ್ವಲ್ ರೇವಣ್ಣ ಆಗಮನಕ್ಕೆ ಜ್ಯೋತಿಷಿಗಳು ಇಟ್ಟ ಮುಹೂರ್ತ, ಆರೋಪಿಗೀಗ ರಾಹು ದೆಸೆ!

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ತರಲು ಮತ್ತು ಸತತ ಮೂರನೇ ಬಾರಿ ಪ್ರಧಾನಿಯಾಗುವ ದಾರಿಯಲ್ಲಿ ಕಳೆದ 2 ತಿಂಗಳ ಅವಧಿಯಲ್ಲಿ ದೇಶವ್ಯಾಪಿ ಸುತ್ತಿದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ನೀತಿ ಸಂಹಿತೆಯಾದ ಘೋಷಣೆಯಾದ ನಂತರದ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಸ್ಟಾರ್‌ ಪ್ರಚಾರಕರಾಗಿ 76 ದಿನಗಳ ಅವಧಿಯಲ್ಲಿ ಒಟ್ಟು 206 ಕಾರ್ಯಕ್ರಮಗಳಲ್ಲಿ ಬಾಗಿಯಾಗಿದ್ದಾರೆ. ಇದರಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ರ್‍ಯಾಲಿ ಮತ್ತು ರೋಡ್‌ ಶೋ ಸೇರಿವೆ. ಇದೇ ಅವಧಿಯಲ್ಲಿ ಪ್ರಧಾನಿ 80ಕ್ಕೂ ಹೆಚ್ಚು ಮಾಧ್ಯಮಗಳಿಗೆ ಸಂದರ್ಶನ ನೀಡುವ ಮೂಲಕ ಈವರೆಗೆ ಯಾವುದೇ ಪ್ರಧಾನಿಯೂ ಮಾಡದ ಸಾಧನೆ ಮಾಡಿದ್ದಾರೆ.

ಪ್ರಧಾನಿ ಮೋದಿ ಕರ್ನಾಟಕದಲ್ಲಿ 11 ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇನ್ನು 80 ಲೋಕಸಭಾ ಕ್ಷೇತ್ರ ಹೊಂದಿರುವ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು (30) ಸ್ಥಳಗಳಲ್ಲಿ ಪ್ರಚಾರ ನಡೆಸಿದ್ದರೆ, ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಕೇವಲ ಐದು ಸ್ಥಳಗಳಲ್ಲಿ ಪ್ರಚಾರ ಮಾಡಿದ್ದಾರೆ.

Latest Videos
Follow Us:
Download App:
  • android
  • ios