ಫೋನ್ ಬಳಸಲು ಬಿಡದ ಪತಿಗೆ ನಿದ್ರಾ ಮಾತ್ರೆ ನೀಡಿ, ಮಂಚಕ್ಕೆ ಕಟ್ಟಿ ಹಾಕಿ ಕರೆಂಟ್ ಶಾಕ್ ಕೊಟ್ಟು ಹಿಂಸಿಸಿದ ಪತ್ನಿ!
ಮೊಬೈಲ್ ಫೋನ್ ಬಳಸುವುದನ್ನು ನಿರಾಕರಿಸಿದ್ದಕ್ಕಾಗಿ ಪತ್ನಿ ತನ್ನ ಪತಿಯನ್ನು ಕಟ್ಟಿ ಹಾಕಿ ವಿದ್ಯುತ್ ಶಾಕ್ ನೀಡಿರುವ ಘಟನೆ ಉತ್ತರ ಪ್ರದೇಶದದಲ್ಲಿ ನಡೆದಿದೆ.
ಉತ್ತರ ಪ್ರದೇಶ (ಮೇ.31): ಆಕೆಗೆ ಮೊಬೈಲ್ ನಲ್ಲೇ ಮುಳುಗಿರುವ ಕೆಟ್ಟ ಚಟ. ಇದನ್ನು ನೋಡಿದ ಗಂಡ ಬೇಸತ್ತು ಹೋಗಿ ಹಲವು ಬಾರಿ ಪತ್ನಿಗೆ ಬುದ್ಧಿವಾದ ಹೇಳಿದ್ದ. ಆದರೂ ಆಕೆ ಯಾವುದನ್ನೂ ಕೇಳಿಸಿಕೊಳ್ಳದೇ ದಿನವಿಡೀ ಮೊಬೈಲ್ ನಲ್ಲೇ ಮುಳುಗಿರುತ್ತಿದ್ದಳು. ಪತ್ನಿಯನ್ನು ಹೇಗಾದರೂ ಮಾಡಿ ಮೊಬೈಲ್ ಚಟದಿಂದ ಬಿಡಿಸಬೇಕೆಂದು ಪತಿ ಮೊಬೈಲ್ ಕಸಿದುಕೊಂಡು ಮೊಬೈಲ್ ಬಳಕೆ ಬೇಡ ಎಂದು ಹೇಳಿದ ಅಷ್ಟೇ ಪತ್ನಿ ರಣಚಂಡಿಯಾದಳು! ನಂತರ ನಡೆದ ಕಥೆಯೇ ಬೇರೆ.
ಉತ್ತರ ಪ್ರದೇಶದ ಮೈನ್‌ಪುರಿಯಿಂದ ಈ ಆಘಾತಕಾರಿ ಘಟನೆ ನಡೆದಿದ್ದು ಮೊಬೈಲ್ ಫೋನ್ ಬಳಸುವುದನ್ನು ನಿರಾಕರಿಸಿದ್ದಕ್ಕಾಗಿ ಪತಿಗೆ 33ರ ಹರೆಯದ ಪತ್ನಿಯೊಬ್ಬಳು ವಿದ್ಯುತ್ ಶಾಕ್ ನೀಡಿದ್ದಾಳೆ. ಆಕೆ ಫೋನ್‌ನಲ್ಲಿ ಹೆಚ್ಚು ಸಮಯ ಕಳೆದ ಕಾರಣ ಎಷ್ಟು ತಿಳಿ ಹೇಳಿದರೂ ಗಮನವೇ ಕೊಡದ್ದಕ್ಕೆ ಬೇಸತ್ತ ಪತಿ ಆಕೆಯ ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಗಂಡನಿಗೆ ನಿದ್ದೆ ಬರುವ ಮದ್ದು ನೀಡಿ, ಕೈಕಾಲಗಳನ್ನು ಮಂಚಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಗಂಡನಿಗೆ ಹಿಗ್ಗಾಮುಗ್ಗಾ ಹೊಡೆದು ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದಾಳೆ.
ಕೇಸಿಂದ ಮಗನ ಬಚಾವ್ ಮಾಡಲು ತನ್ನ ರಕ್ತವನ್ನೇ ನೀಡಿದ್ದ ಪುಣೆ ಬಾಲಕನ ತಾಯಿ!
ದಂಪತಿಯ 14 ವರ್ಷದ ಮಗ ತನ್ನ ತಂದೆಯನ್ನು ಉಳಿಸಲು ಪ್ರಯತ್ನಿಸಿದಾಗ, ಅವನಿಗೂ ಆಕೆ ಥಳಿಸಲಾಗಿದೆ. ಹಲ್ಲೆಗೊಳಗಾದ ಪ್ರದೀಪ್ ಸಿಂಗ್ 2007 ರಲ್ಲಿ ಔರೈಯಾ ಎಂಬ ಪ್ರದೇಶದಿಂದ ದಿವಾನ್ ಸಿಂಗ್ ಎಂಬವರ ಮಗಳು ಬೇಬಿ ಯಾದವ್ ಅವರನ್ನು ವಿವಾಹವಾಗಿದ್ದನು.
ನನ್ನ ಹೆಂಡತಿ ಮೊಬೈಲ್ ಫೋನ್‌ನಲ್ಲಿ ಪ್ರತಿದಿನ ಯಾರೊಂದಿಗಾದರೂ ಮಾತನಾಡುತ್ತಿದ್ದಳು. ನಾನು ಅದನ್ನು ವಿರೋಧಿಸಿದೆ ಮತ್ತು ಅವಳ ಕುಟುಂಬಕ್ಕೆ ತಿಳಿಸಿದ್ದೇನೆ. ಅವರ ಕೋರಿಕೆಯ ಮೇರೆಗೆ ನಾನು ಅವಳ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದೆ. ಇದರಿಂದ ಕುಪಿತಳಾದ ಆಕೆ ನನ್ನನ್ನು ಹಾಗೂ ನಮ್ಮ ಮಗನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ ಕ್ರಿಕೆಟ್ ಬ್ಯಾಟ್‌ನಿಂದ ನನಗೆ ಹೊಡೆದಿದ್ದಾಳೆ, ನನ್ನ ತಲೆ ಮತ್ತು ದೇಹಕ್ಕೆ ತೀವ್ರ ಗಾಯಗಳಾಗಿವೆ. ವಿದ್ಯುತ್ ಶಾಕ್ ನೀಡಿದ್ದಾಳೆ. ಬಿಡಿಸಲು ಬಂದ ಮಗನಿಗೂ ಥಳಿಸಿದ್ದಾಳೆ. ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಭಾರತದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ 78 ಸಾವಿರ ಕೋಟಿ ರೂ ಅನಾಥ!
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ಪತಿ ಪ್ರದೀಪ್ ಸಿಂಗ್ ಅನ್ನು ಸದ್ಯ ಸಫಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿರುವ ಪತಿ, ಪತ್ನಿಯ ಮೊಬೈಲ್ ಗೀಳಿನ ಬಗ್ಗೆ ವಿವರಿಸಿದ್ದಾನೆ. ಪೊಲೀಸರು ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ), 328 (ಅಪರಾಧ ಮಾಡುವ ಉದ್ದೇಶದಿಂದ ವಿಷದ ಮೂಲಕ ಗಾಯಗೊಳಿಸುವುದು ಇತ್ಯಾದಿ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಿ ಮಹಿಳೆಯ ವಿರುದ್ಧ ದಾಖಲಿಸಲಾಗಿದೆ, ಅವರು ಮಹಿಳೆ ಪರಾರಿಯಾಗಿದ್ದಾಳೆ.