ಮೇ 31ರಂದೇ ಪ್ರಜ್ವಲ್ ರೇವಣ್ಣ ಆಗಮನಕ್ಕೆ ಜ್ಯೋತಿಷಿಗಳು ಇಟ್ಟ ಮುಹೂರ್ತ, ಆರೋಪಿಗೀಗ ರಾಹು ದೆಸೆ!

ಪ್ರಜ್ವಲ್ ರೇವಣ್ಣ ಭಾರತಕ್ಕೆ ಹಿಂದಿರುಗಲು ಮೇ 31ರ ದಿನವನ್ನೇ ಏಕೆ ಆಯ್ಕೆ ಮಾಡಿಕೊಂಡರು ? ಏಕೆಂದರೆ, ಅದು ಜ್ಯೋತಿಷಿಗಳು ಇಟ್ಟುಕೊಟ್ಟಿದ್ದ ಮುಹೂರ್ತ!.

Astrologers set the time to Hassan MP Prajwal Revanna Return from Germany to Bengaluru gow

ಬೆಂಗಳೂರು (ಮೇ.31):  ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಹಿಂದಿರುಗಲು ಮೇ 31ರ ದಿನವನ್ನೇ ಏಕೆ ಆಯ್ಕೆ ಮಾಡಿಕೊಂಡರು ? ಏಕೆಂದರೆ, ಅದು ಜ್ಯೋತಿಷಿಗಳು ಇಟ್ಟುಕೊಟ್ಟಿದ್ದ ಮುಹೂರ್ತ!. ಪ್ರಜ್ವಲ್ ರೇವಣ್ಣರಿಗೆ ಈಗ ರಾಹು ದೆಸೆ ನಡೆಯುತ್ತಿದ್ದು ಅವರ ಟೈಂ ಸರಿಯಿಲ್ಲ. ಆದರೆ, ಮೇ 30ರ ಮಧ್ಯರಾತ್ರಿ ಅವರು ಬೆಂಗಳೂರಿಗೆ ಬಂದು ಶರಣಾದರೆ, ಶುಕ್ರವಾರದಂದು ಅವರನ್ನು ಎಸ್ಐಟಿ ವಿಚಾರಣೆಗೊಳಪಡಿಸುತ್ತದೆ. ಹಾಗೆ, ಅವರು ಶುಕ್ರವಾರವೇ ವಿಚಾರಣೆಗೊಳಪಟ್ಟರೆ ಅವರಿಗೆ ಉತ್ತಮ ಯೋಗವಿದ್ದು, ಶತ್ರುಗಳೂ ಮಿತ್ರರಾಗುವ ಯೋಗವಿದೆ ಎಂದು ಜ್ಯೋತಿಷಿಗಳು ಸಲಹೆ ಕೊಟ್ಟಿದ್ದು, ಅದರಂತೆಯೇ ಅವರು ಬೆಂಗಳೂರಿಗೆ ಬರುವ ದಿನಾಂಕವನ್ನು ನಿಗದಿಗೊಳಿಸಿದ್ದರು ಎಂದು ಹೇಳಲಾಗಿದೆ.

ಅಕ್ಷರಶಃ ಸ್ತಬ್ಧವಾಯ್ತು ಪ್ರಜ್ವಲ್ ಕ್ಷೇತ್ರ..ಪ್ರತಿಭಟನೆಯಲ್ಲಿ ಮಹಿಳಾ ಸಾಹಿತಿಗಳು..ಚಿಂತಕರು..ವೈದ್ಯರು ಭಾಗಿ!

ಶುಕ್ರವಾರದಂದು ವಿಚಾರಣೆಗೊಳಪಟ್ಟರೆ ಲಾಭ?
ಪ್ರಜ್ವಲ್ ಅವರ ಜನ್ಮ ದಿನದ ಕುಂಡಲಿಗೆ ಅನುಗುಣವಾಗಿ ನೋಡಿದಾಗ ಅವರು, ತುಲಾ ಲಗ್ನದಲ್ಲಿ ಜನಿಸಿದ್ದಾರೆ. ಅವರದ್ದು ಮಕರ ರಾಶಿ, ಉತ್ತರಾಷಾಧ ನಕ್ಷತ್ರ. ಅವರು ಜನಿಸಿದಾಗ ಸೂರ್ಯ ದೆಸೆಯಿತ್ತು. ಹಾಗಾಗಿ, ಅವರು ಸೂರ್ಯ ದೆಸೆಯವರು. ಈಗ ಅವರ ಜಾತಕದಲ್ಲಿ ರಾಹು ದೆಸೆಯಿದೆ. ಹಾಗಾಗಿ, ಅವರಿಗೆ ತೊಂದರೆಗಳು ಜಾಸ್ತಿ. ಗುರುವಾರ ಸಂಜೆಯಿಂದ (ಮೇ 30) ಅವರ ಜಾತಕದಲ್ಲಿನ ಗ್ರಹಗಳ ಸ್ಥಾನಮಾನದಲ್ಲಿ ಕೆಲವು ಪಲ್ಲಟಗಳು ಆಗುತ್ತವೆ. ಅದರಂತೆ, ಶುಕ್ರ ಗ್ರಹ, ರವಿ ಹಾಗೂ ಗುರು ಗ್ರಹಗಳು ವೃಷಭ ರಾಶಿಗೆ ಬರುತ್ತಾರೆ. ಅದರ ನೇರ ಪ್ರಭಾವ ಪ್ರಜ್ವಲ್ ಮೇಲಾಗಲಿದೆ.

ಪ್ರಜ್ವಲ್ ರೇವಣ್ಣ ಬಂಧನ ಆಯ್ತು, ಮುಂದೇನು? ಸ್ಟೆಪ್‌-ಬೈ-ಸ್ಟೆಪ್‌ ಮಾಹಿತಿ ಇಲ್ಲಿದೆ!

ಹಾಗಾಗಿ, ಅವರು ಗುರುವಾರ ಮಧ್ಯಾಹ್ನದ ನಂತರ ತಾವಿರುವ ಜಾಗದಿಂದ (ಜರ್ಮನಿಯ ಮ್ಯೂನಿಕ್) ಪ್ರಯಾಣ ಬೆಳೆಸಬೇಕು. ಗುರುವಾರ ರಾತ್ರಿ 12ರ ನಂತರ ಶುಕ್ರವಾರವೆಂದು ಪರಿಣಿಸಲ್ಪಡುವುದರಿಂದ ಅವರು ಶುಕ್ರವಾರವೇ ಬೆಂಗಳೂರಿಗೆ ಬರಬೇಕು. ಶುಕ್ರವಾರ ಬೆಳಗ್ಗೆ 10 ಗಂಟೆಯ ನಂತರವಷ್ಟೇ ಅವರು ಎಸ್ಐಟಿ ಮುಂದೆ ವಿಚಾರಣೆಗೆ ಬರಬೇಕು. ಆಗ ಸಮಯ ಸರಿಯಾಗಿರುತ್ತಾದ್ದರಿಂದ ಮುಂದೆ ನಡೆಯುವ ಎಲ್ಲಾ ಘಟನೆಗಳೂ ಪ್ರಜ್ವಲ್ ಅವರಿಗೆ ಒಳಿತಾಗಿಯೇ ಪರಿಣಿಸುತ್ತವೆ ಎಂದು ಜ್ಯೋತಿಷಿಗಳು, ಪ್ರಜ್ವಲ್ ಅವರ ಕುಟುಂಬಕ್ಕೆ ಸಲಹೆ ನೀಡಿದ್ದರೆಂದು ಹೇಳಲಾಗಿದೆ. ಅದೇ ಕಾರಣಕ್ಕಾಗಿಯೇ  35 ದಿನಗಳ ಬಳಿಕ  ಪ್ರಜ್ವಲ್ ಅವರು ಮೇ 31ರಂದು ಬೆಂಗಳೂರಿಗೆ ಬಂದಿದ್ದು, ಸದ್ಯ ಎಸ್‌ಐಟಿ ವಶದಲ್ಲಿರುವ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

ಶುಕ್ರವಾರ ಮುಂಜಾನೆ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿಳಿತಿದ್ದಂತೆ ಸಿಐಎಸ್‌ಎಫ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದರು. ಬಳಿಕ ಎಸ್‌ಐಟಿ ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣರನ್ನ ಹಸ್ತಾಂತರಿಸಿದರು. ಮಾಧ್ಯಮಗಳ ಕಣ್ಣುತಪ್ಪಿಸಿ ಮಾರ್ಗ ಬದಲಾಯಿಸಿ  ಸಿಐಡಿ ಕಚೇರಿಗೆ ಕರೆತರಲಾಯ್ತು. ಸದ್ಯ ಮೆಡಿಕಲ್‌ ಟೆಸ್ಟ್ ನಡೆದಿದೆ. ಪ್ರಾಥಮಿಕ ಹಂತದ ಹೇಳಿಕೆ ಪಡೆದ ಬಳಿಕ ಅವರನ್ನು ಕೋರ್ಟ್ ಗೆ ಹಾಜರುಪಡಿಸಿ ಬಳಿಕ ಮುಂದಿನ ಹಂತದ ವಿಚಾರಣೆ ನಡೆಸಲಿದ್ದಾರೆ. ಎರಡನೆಯದಾಗಿ ಸಂತ್ರಸ್ಥೆಯಿಂದ ಆರೋಪಿ ಗುರುತು ಪತ್ತೆಗಾಗಿ ಪ್ರಜ್ವಲ್ ಎದುರು ಸಂತ್ರಸ್ತೆಯನ್ನು ನಿಲ್ಲಿಸಿ ಪ್ರಶ್ನೆ ಕೇಳಲಿದೆ. ಬಳಿಕ ಸ್ಥಳ ಮಹಜರು ನಡೆಸಲಿದೆ.  ಅದಾದ ನಂತರ ಪ್ರಜ್ವಲ್ ರೇವಣ್ಣ ಮೊಬೈಲ್ ವಶಕ್ಕೆ ಪಡೆಯಲಿದ್ದಾರೆ. 

Latest Videos
Follow Us:
Download App:
  • android
  • ios