ಪಾಕಿಸ್ತಾನದ ಒಳಗೆ ಹೊಡೆಯಬಹುದು ಎಂದು ಎರಡನೇ ಬಾರಿ ತೋರಿಸಿಕೊಟ್ಟಿದ್ದಾರೆ ನಮ್ಮ ಕೆಚ್ಚೆದೆಯ ಮೋದಿ. ನಮ್ಮವರ 26 ಜನರನ್ನ ಕೊಂದಿದ್ರು. ಸಿಂಧೂರ ಅಳಸಿದ್ರು. ಆದರೆ ಈಗ ಅದೇ ಹೆಸರಿನಲ್ಲಿ ಆಪರೇಶನ್ ಮಾಡಿದ್ದಾರೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರು (ಮೇ.07): ಪಾಕಿಸ್ತಾನದ ಒಳಗೆ ಹೊಡೆಯಬಹುದು ಎಂದು ಎರಡನೇ ಬಾರಿ ತೋರಿಸಿಕೊಟ್ಟಿದ್ದಾರೆ ನಮ್ಮ ಕೆಚ್ಚೆದೆಯ ಮೋದಿ. ನಮ್ಮವರ 26 ಜನರನ್ನ ಕೊಂದಿದ್ರು. ಸಿಂಧೂರ ಅಳಸಿದ್ರು. ಆದರೆ ಈಗ ಅದೇ ಹೆಸರಿನಲ್ಲಿ ಆಪರೇಶನ್ ಮಾಡಿದ್ದಾರೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಬೇರೆ, ರಾಷ್ಟ್ರೀಯ ಕಾಂಗ್ರೆಸ್ ಬೇರೆ. ಖರ್ಗೆ ಸರ್ಕಾರದ ಪರ ಇದ್ದೇನೆ ಎನ್ನುತ್ತಾರೆ. ಕರ್ನಾಟಕ ಕಾಂಗ್ರೆಸ್ ಶಾಂತಿ ಶಾಂತಿ ಎನ್ನುತ್ತಿದ್ದಾರೆ. ಮಹಾತ್ಮಾ ಗಾಂಧಿ ಫೋಟೊ ಹಾಕಿ ಶಾಂತಿ ಹೇಳ್ತಾ ಇದ್ದಾರೆ.
ದಿನೇಶ್ ಗುಂಡೂರಾವ್ ಹೇಳಿದ್ದಾರೆ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಹೋರಾಟ ಮಾಡಿ ಇಲ್ಲ ಯುದ್ಧ ಬೇಡ ಅಂದಿದ್ದಾರೆ. ಕಾಂಗ್ರೆಸ್ ಲೆಕ್ಕದಲ್ಲಿ ಮರ್ಯಾದೆ ಎಂದರೆ ಏನು? ಕಾಂಗ್ರೆಸ್ ನಾಯಕರಿಗೆ ಏನು ಆಗಿದೆ ನಾವು ಪಾಕಿಸ್ತಾನ ತರ ಭಿಕ್ಷುಕ ರಾಷ್ಟ್ರ ಅಲ್ಲ. ಕಾಂಗ್ರೆಸ್ ಗೆ ನಾನು ಕೇಳ್ತೇನೆ. ಪಾಕಿಸ್ತಾನ ಪ್ರಧಾನಿ ದೆಹಲಿಗೆ ಬಂದು ಕುಳಿತರು ಆಗಲೂ ಶಾಂತಿ ಮಂತ್ರ ಪಠಿಸುತ್ತೀರಾ? ಕಾಂಗ್ರೆಸ್ ಗೆ ನೋವು. ಪಾಕಿಸ್ತಾನದ ಮೇಲೆ ಯುದ್ಧ ಆದರೆ ಇಲ್ಲಿರುವ ಮುಸ್ಲಿಂರ ಮತ ಕೈ ತಪ್ಪತ್ತೆ ಎನ್ನೋ ಭಯ ಎಂದು ಅಶೋಕ್ ವಾಗ್ದಾಳಿ ನಡಸಿದರು.
Operation Sindoor: ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಮಯ ಬಂದಿದೆ: ದಿನೇಶ್ ಗುಂಡೂರಾವ್
ರಾಜ್ಯದ ಜಾತಿ ಗಣತಿ ಗತಿ ಏನು: ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, 150 ಕೋಟಿ ರು. ವೆಚ್ಚದಲ್ಲಿ ಮಾಡಿದ ರಾಜ್ಯದ ಜಾತಿ ಗಣತಿ ವರದಿ ಏನಾಗಲಿದೆ ಎಂಬುದು ಜನತೆಯ ಪ್ರಶ್ನೆ. ಸಮೀಕ್ಷೆಯ ಗತಿ ಏನೆಂಬುದನ್ನು ಸಿಎಂ ಸಿದ್ದರಾಮಯ್ಯ ತಿಳಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಬ್ರಿಟಿಷರ ನಂತರ ಜವಹಾರ್‌ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಪ್ರಧಾನಿಯಾದರೂ ಕಾಂಗ್ರೆಸ್ ಜಾತಿ ಸಮೀಕ್ಷೆ ಮಾಡಲಿಲ್ಲ.
ಆಪರೇಷನ್ ಸಿಂಧೂರ ಬೆನ್ನಲ್ಲೇ ರಾಜ್ಯದಲ್ಲಿ ಭದ್ರತಾ ಕ್ರಮ ಜಾರಿ: ಗೃಹ ಸಚಿವ ಪರಮೇಶ್ವರ್
ಕಾಂಗ್ರೆಸ್‌ಗೆ ಅಂತಹ ಸಾಮಾನ್ಯ ಜ್ಞಾನ ಕೂಡ ಇಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾತಿ ಗಣತಿ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು ಎಂದು ಕಿಡಿಕಾರಿದರು. 2029 ಕ್ಕೆ ಮಹಿಳಾ ಮೀಸಲಾತಿ ತರಲಾಗುವುದು ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ಇದಕ್ಕೆ ಜನಗಣತಿ ಹಾಗೂ ಜಾತಿ ಸಮೀಕ್ಷೆ ನೆರವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಾಕಾರಣ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. 2015ರಲ್ಲಿ ಜಾತಿ ಗಣತಿ ಮಾಡಿ 10 ವರ್ಷಗಳ ನಂತರ ಅದನ್ನು ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಕಾಂಗ್ರೆಸ್ ಮೊದಲು ಯೋಚಿಸಬೇಕು. ದೇಶದಲ್ಲಿ ಜಾತಿ ಗಣತಿ ಮಾಡಲಾಗಿಲ್ಲವೆಂದು ಕಾಂಗ್ರೆಸ್ ಕ್ಷಮೆ ಕೋರಬೇಕು ಎಂದು ಹೇಳಿದರು.


