ಸೇನೆ ಇಂದು ಆಕ್ಷನ್ ಮಾಡಿದೆ. ಅದಕ್ಕೆ ನಮ್ಮ ಬೆಂಬಲ ಇದೆ. ದೇಶದ ಹಿತ ಕಾಪಾಡೋದಕ್ಕೆ ನಾವು ಒಂದಾಗಿ ಇರುತ್ತೇವೆ. ಇಡೀ ಸರ್ಕಾರ, ರಾಜ್ಯದ ಜನ ದೇಶದ ಜೊತೆ ಇರುತ್ತದೆ ಎಂದು ಸೇನೆಯಿಂದ ಆಪರೇಷನ್ ಸಿಂಧೂರ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು (ಮೇ.07): ಸೇನೆ ಇಂದು ಆಕ್ಷನ್ ಮಾಡಿದೆ. ಅದಕ್ಕೆ ನಮ್ಮ ಬೆಂಬಲ ಇದೆ. ದೇಶದ ಹಿತ ಕಾಪಾಡೋದಕ್ಕೆ ನಾವು ಒಂದಾಗಿ ಇರುತ್ತೇವೆ. ಇಡೀ ಸರ್ಕಾರ, ರಾಜ್ಯದ ಜನ ದೇಶದ ಜೊತೆ ಇರುತ್ತದೆ ಎಂದು ಸೇನೆಯಿಂದ ಆಪರೇಷನ್ ಸಿಂಧೂರ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಮಗೆ ಕೇಂದ್ರ ಗೃಹ ಇಲಾಖೆ, ರಕ್ಷಣಾ ಇಲಾಖೆಯಿಂದ ಅಡ್ವೈಸರಿ ಬಂದಿದೆ. ಯಾವ ರೀತಿ ಸಿವಿಲ್ ಡಿಫೆನ್ಸ್ ಮಾಡಬೇಕು ಅಂತ ಅಡ್ವೈಸರಿ ಬಂದಿದೆ. ಸಿದ್ದತೆ ಮಾಡಬೇಕು ಅಂತ ಕಳಿಸಿದೆ. ಅದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪವರ್ ಕೇಂದ್ರಗಳು, ನೀರಿನ ಪ್ರಮುಖ ಕೇಂದ್ರಗಳು , ಡ್ಯಾಮ್, ಏರ್ಪೋರ್ಟ್ ಪ್ರದೇಶಗಳಲ್ಲಿ ಭದ್ರತೆ ಹಾಕಿದ್ದೇವೆ. ಇಂಟಲಿಜೆನ್ಸ್ ವಿಂಗ್ ಗೆ ಎಚ್ಚರಿಕೆ ಇರಲು ಸೂಚನೆ ನೀಡಲಾಗಿದೆ. ಇಂಟಲಿಜೆನ್ಸ್ ಗೆ ಮಾಹಿತಿ ಕೊಡಲು, ಕೇಂದ್ರದ ಜೊತೆ ಸಂವಹನ ಸಾಧಿಸಲು ಸೂಚನೆ ನೀಡಲಾಗಿದೆ. ಮಾಕ್ ಡ್ರಿಲ್ ಮಾಡಲು ಸೂಚನೆ ಬಂದಿದೆ. ಸಂಜೆ 4 ಗಂಟೆಗೆ ಹಲಸೂರಿನಲ್ಲಿ ಇದನ್ನ ಮಾಡಲಾಗುತ್ತದೆ. ಇಡೀ ಜಿಲ್ಲೆಗೆ ಸೂಚನೆ ನೀಡಲಾಗಿದೆ. ಕೇಂದ್ರದ ಅಧೀನದಲ್ಲಿರೋ ಕೈಗಾರಿಕೆ, ಪ್ಲಾಂಟ್, ಗಳಿಗೆ ಕೇಂದ್ರ ಭದ್ರತೆ ಕೊಡುತ್ತದೆ ಎಂದು ತಿಳಿಸಿದರು.
Operation Sindoor: ದಿಟ್ಟತನದ ಧೈರ್ಯ ತೋರಿದ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ರಾಘವೇಂದ್ರ
ರಾಜ್ಯದ ಅಧೀನದಲ್ಲಿ ಇರೋ ಕಡೆ ನಾವು ಸೆಕ್ಯುರಿಟಿ ಕೊಡ್ತೀವಿ. ಬೆಂಗಳೂರಿನಲ್ಲಿ ಪೊಲೀಸರು ಎಚ್ಚರಿಕೆಯಿಂದ ಇರಲು ಸೂಚನೆ ಕೊಡಲಾಗಿದೆ. ಈಗಾಗಲೇ ಕರ್ನಾಟಕದಲ್ಲಿರೋ ಪಾಕಿಸ್ತಾನಗಳನ್ನ ವಾಪಸ್ ಕಳಿಸೋ ಕೆಲಸ ಆಗ್ತಿದೆ. ಬಾಕಿ ಇರೋರನ್ನ FRO ಜೊತೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಅವರಿಂದ ಮಾಹಿತಿ ಪಡೆದು ವಾಪಸ್ ಕಳಸೋ ಕೆಲಸ ಆಗುತ್ತದೆ. ರಾಯಚೂರು ಪ್ರತಿಭಟನಾ ಕಾರ್ಯಕ್ರಮ ರದ್ದು ಮಾಡಿದ್ದೇವೆ. ನಮಗೆ ದೇಶ ಮುಖ್ಯ. ದೇಶದ ಜೊತೆ ಕೈ ಜೋಡಿಸೋ ಕೆಲಸ ಮಾಡ್ತೀವಿ ಎಂದು ಪರಮೇಶ್ವರ್ ಹೇಳಿದರು.


