ದಿಟ್ಟ ಕ್ರಮವನ್ನು ಕೇಂದ್ರ ಸರ್ಕಾರ ಮತ್ತು ಸೇನೆ ಪಡೆ ತೆಗೆದುಕೊಂಡಿದೆ. ಇದು ಅನಿವಾರ್ಯ ಆಗಿತ್ತು. ಪಾಕಿಸ್ತಾನದ ಬೆಂಬಲಿತರು ಮಾಡಿದ್ದನ್ನ ಸಹಿಸಲು ಆಗಿಲ್ಲ ಎಂದು ಆಪರೇಷನ್ ಸಿಂಧೂರ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರು (ಮೇ.07): ದಿಟ್ಟ ಕ್ರಮವನ್ನು ಕೇಂದ್ರ ಸರ್ಕಾರ ಮತ್ತು ಸೇನೆ ಪಡೆ ತೆಗೆದುಕೊಂಡಿದೆ. ಇದು ಅನಿವಾರ್ಯ ಆಗಿತ್ತು. ಪಾಕಿಸ್ತಾನದ ಬೆಂಬಲಿತರು ಮಾಡಿದ್ದನ್ನ ಸಹಿಸಲು ಆಗಿಲ್ಲ ಎಂದು ಆಪರೇಷನ್ ಸಿಂಧೂರ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕೇಂದ್ರ ಮತ್ತು ಸೇನೆ ಏನೇ ನಿರ್ಧಾರ ಮಾಡಿದ್ರು ನಮ್ಮ ಬೆಂಬಲ ಇದೆ. ಈಗ ಪಾಕಿಸ್ತಾನ ಕೂಡಾ ಪ್ರತಿದಾಳಿ ಮಾಡುತ್ತೆ. ಇದಕ್ಕೆ ನಾವು ಸಜ್ಜಾಗಬೇಕು. ಆಪರೇಷನ್ ಸಿಂಧೂರ ಯಶಸ್ವಿಯಾಗಲಿ. ಹಿಂದೆ ಅನೇಕ ಸಮಯದಲ್ಲಿ ಇಂತಹ ದಾಳಿ ಮಾಡಿದ್ದೇವೆ. ಪಾಕಿಸ್ತಾನ ಇನ್ನು ಬುದ್ದಿ ಕಲಿತ್ತಿಲ್ಲ.ಹೀಗಾಗಿ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು. ಆಪರೇಷನ್ ಸಿಂಧೂರವನ್ನ ಸ್ವಾಗತ ಮಾಡ್ತೀನಿ ಎಂದರು.
ಪಾಕಿಸ್ತಾನ ಮುಂದೆ ಏನು ಮಾಡುತ್ತದೆ. ಅದಕ್ಕೆ ಉತ್ತರ ಕೊಡಬೇಕು. ಯುದ್ದ ಆಗಬಾರದು. ಆದರೆ ಅನಿವಾರ್ಯ ಬಂದರೆ ಸ್ವಾಭಿಮಾನದ ಪ್ರಶ್ನೆ, ಮರ್ಯಾದೆ ಪ್ರಶ್ನೆ ಬಂದರೆ ಯುದ್ದ ಆಗಬೇಕು. ಅಮಾಯಕರ ಜೀವ ಕಳೆದು ಹೋಗಿದೆ. ಇದಕ್ಕೆ ಇಂತಹ ಕ್ರಮ ಅನಿವಾರ್ಯ. ನಮ್ಮದು ಶಾಂತಿ ರಾಷ್ಟ್ರ. ಆದರೆ ಇಂತಹ ಸಮಯದಲ್ಲಿ ಯುದ್ದ ಬಿಟ್ಟು ಬೇರೆ ಏನು ದಾರಿ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ನಾವು ಶಾಂತಿ ಪ್ರಿಯರು. ಯುದ್ದದ ಉದ್ದೇಶ ಶಾಂತಿ ಸ್ಥಾಪನೆ ಅನ್ನೋದು. ನಮ್ಮದು ಶಾಂತಿಯುತ ದೇಶ. ಇಂತಹ ಸಮಯದಲ್ಲಿ ಕಷ್ಟ ಇದ್ದರು, ಇಷ್ಟ ಇದೆಯೋ ಇಲ್ಲವೋ ನಾವು ಒಟ್ಟಾಗಿ ಎದುರಿಸಬೇಕು ಎಂದು ತಿಳಿಸಿದರು.
ಆಪರೇಷನ್ ಸಿಂಧೂರ ಬೆನ್ನಲ್ಲೇ ರಾಜ್ಯದಲ್ಲಿ ಭದ್ರತಾ ಕ್ರಮ ಜಾರಿ: ಗೃಹ ಸಚಿವ ಪರಮೇಶ್ವರ್
ರೌಡಿ ಶೀಟ್ ತೆರೆದದ್ದು ಬಿಜೆಪಿ ಸರ್ಕಾರ: ಇತ್ತೀಚೆಗೆ ಹತ್ಯೆಗೀಡಾದ ಹಿಂದೂ ಸಂಘಟನೆ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಮೇಲೆ ರೌಡಿ ಹಾಳೆ ತೆರೆದದ್ದು ಬಿಜೆಪಿ ಸರ್ಕಾರ ಎನ್ನುವ ಅಂಶ ಇದೀಗ ಬಯಲಾಗಿದೆ. ಸುಹಾಸ್ ಶೆಟ್ಟಿ ಮೇಲೆ ರೌಡಿ ಶೀಟ್ ತೆರೆದ ಪೊಲೀಸ್ ಇಲಾಖೆ ಆದೇಶ ಪ್ರತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ‘ಎಕ್ಸ್’ನಲ್ಲಿ ಬಿಡುಗಡೆ ಮಾಡಿದ್ದಾರೆ.
ಯಡಿಯೂರಪ್ಪ ಸರ್ಕಾರದಲ್ಲಿ ರೌಡಿ ಪಟ್ಟ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಅವಧಿಯಲ್ಲಿ 2020ರ ಜೂ.18ರಂದು ಸುಹಾಸ್ ಶೆಟ್ಟಿಗೆ ಅಧಿಕೃತವಾಗಿ ರೌಡಿ ಪಟ್ಟ ನೀಡಲಾಗಿತ್ತು. ಅಂದಿನ ಮಂಗಳೂರು ಉತ್ತರ ವಿಭಾಗ ಎಸಿಪಿಯಾಗಿದ್ದ ಕೆ.ಯು. ಬೆಳ್ಳಿಯಪ್ಪ ಅವರು ಈ ಆದೇಶ ಹೊರಡಿಸಿದ್ದರು. ರೌಡಿ ಹಾಳೆ ತೆರೆಯುವ ಹೊತ್ತಿನಲ್ಲಿ ಸುಹಾಸ್ ಶೆಟ್ಟಿ ವಿರುದ್ಧ ನಾಲ್ಕು ಗಂಭೀರ ಕ್ರಿಮಿನಲ್ ಪ್ರಕರಣಗಳಿದ್ದವು. ಕೊಲೆ, ಕೊಲೆ ಯತ್ನ, ಗಲಾಟೆ, ದರೋಡೆ, ಕೋಮು ಸಂಘರ್ಷ ಆರೋಪದಡಿ ಆಗಿನ ಬಜ್ಪೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಅರ್. ನಾಯಕ್ ಅವರ ವರದಿ ಆಧಾರದಲ್ಲಿ ರೌಡಿಶೀಟ್ ಓಪನ್ ಮಾಡಲಾಗಿತ್ತು.
Operation Sindoor: ದಿಟ್ಟತನದ ಧೈರ್ಯ ತೋರಿದ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ರಾಘವೇಂದ್ರ
ಗುಂಡೂರಾವ್ ವಾಗ್ದಾಳಿ: ಸುಹಾಸ್ ಶೆಟ್ಟಿಯ ರೌಡಿ ಹಾಳೆಯ ಅಂದಿನ ಪೊಲೀಸ್ ಆದೇಶ ಪ್ರತಿಯನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿರುವ ಬಿಜೆಪಿ ನಾಯಕರ ಗಮನಕ್ಕೆ’ ಎನ್ನುವ ಶೀರ್ಷಿಕೆಯಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.


