ದೇವೇಗೌಡರು ಸಿಎಂ ಆಗಿ 5 ವರ್ಷ ಇದ್ರಾ? ಪ್ರಧಾನಿಯಾಗಿ 5 ವರ್ಷ ಅಧಿಕಾರ ಮಾಡಿದ್ರಾ? ಅವರ ನೇತೃತ್ವದ ಸರ್ಕಾರ ಇದ್ದಾಗಲೇ 5 ವರ್ಷ ಆಡಳಿತ ಮಾಡಿಲ್ಲ. ಇನ್ನೂ ಬೇರೆಯವರು ಸರ್ಕಾರ ಮಾಡಿದ್ರೆ ಸುಮ್ಮನೆ ಇರ್ತಾರಾ, ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕಿತ್ತು ಹಾಕುತ್ತೇವೆ ಅಂತಾರೆ ಎಂದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ 

ಚನ್ನಪಟ್ಟಣ(ನ.10): ಎಚ್.ಡಿ.ದೇವೇಗೌಡ ಅವರ ನೇತೃತ್ವದ ಸರ್ಕಾರವೇ 5 ವರ್ಷ ಇರಲಿಲ್ಲ. ಇನ್ನು ಬೇರೆಯವರ ಸರ್ಕಾರ ಪೂರ್ಣಾವಧಿ ಪೂರೈಸಲು ಬಿಡ್ತಾರಾ. ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕಿತ್ತುಹಾಕುತ್ತೇವೆ ಅಂತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಸಿಎಂ ಆಗಿ 5 ವರ್ಷ ಇದ್ರಾ? ಪ್ರಧಾನಿಯಾಗಿ 5 ವರ್ಷ ಅಧಿಕಾರ ಮಾಡಿದ್ರಾ? ಅವರ ನೇತೃತ್ವದ ಸರ್ಕಾರ ಇದ್ದಾಗಲೇ 5 ವರ್ಷ ಆಡಳಿತ ಮಾಡಿಲ್ಲ. ಇನ್ನೂ ಬೇರೆಯವರು ಸರ್ಕಾರ ಮಾಡಿದ್ರೆ ಸುಮ್ಮನೆ ಇರ್ತಾರಾ, ಅದಕ್ಕೆ ಕಾಂಗ್ರೆಸ್‌ ಸರ್ಕಾರ ಕಿತ್ತುಹಾಕುತ್ತೇವೆ ಅಂತಾರೆ ಎಂದರು. 

ನನ್ನಣ್ಣ 23ನೇ ವಯಸ್ಸಲ್ಲೇ ದೇವೇಗೌಡರ ವಿರುದ್ಧ ತೊಡೆ ತಟ್ಟಿದ್ದರು: ಡಿ.ಕೆ.ಸುರೇಶ್

ಗೌಡರಿಗೆ ಅವರದ್ದೇ ಸರ್ಕಾರದ ಮೇಲೆ ನಂಬಿಕೆ ಇರ್ಲಿಲ್ಲ. ಅವರ ಅವಧಿಯಲ್ಲಿ ಶಾಸಕರು ಮನೆಗೆ ಹೋದ್ರೆ ಈ ಸರ್ಕಾರ 2 ವರ್ಷ ಇರಲ್ಲ ಅನ್ನುತ್ತಿದ್ದರು ಎಂದರು.