ದೇವೇಗೌಡರ ಕುಟುಂಬವನ್ನು ಖರೀದಿಸುತ್ತೇನೆ ಎಂದರೆ ಅರ್ಥವೇನು? ಖರೀದಿಗೆ ಪಾಕಿಸ್ತಾನದಿಂದ ಹಣ ಬಂದಿದೆಯಾ? ಒಕ್ಕಲಿಗ ಸಮುದಾಯ ಅಥವಾ ಇಡೀ ಹಿಂದುಗಳನ್ನು ಖರೀದಿಸುವ ಹುನ್ನಾರ ನಡೆಯುತ್ತಿದೆಯೇ? ನಾವು ಅರಬ್‌ನಿಂದ ಬಂದವರಲ್ಲ. ಈ ರೀತಿ ಮಾತನಾಡುವವರನ್ನು ಇಟ್ಟುಕೊಂಡ ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇಲ್ಲ: ವಿಪಕ್ಷ ನಾಯಕ ಆರ್.ಅಶೋಕ್ 

ಚನ್ನಪಟ್ಟಣ(ನ.12): ದೇವೇಗೌಡರ ಕುಟುಂಬವನ್ನೇ ಕೊಂಡುಕೊಳ್ಳುವ ಬಗ್ಗೆ ಮಾತನಾಡುವ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಧೈರ್ಯ ಇದ್ದರೆ ಚನ್ನಪಟ್ಟಣಕ್ಕೆ ಬರಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡಿ ಮಾತನಾಡಿ, ದೇವೇಗೌಡರ ಕುಟುಂಬವನ್ನು ಖರೀದಿಸುತ್ತೇನೆ ಎಂದರೆ ಅರ್ಥವೇನು? ಖರೀದಿಗೆ ಪಾಕಿಸ್ತಾನದಿಂದ ಹಣ ಬಂದಿದೆಯಾ? ಒಕ್ಕಲಿಗ ಸಮುದಾಯ ಅಥವಾ ಇಡೀ ಹಿಂದು ಗಳನ್ನು ಖರೀದಿಸುವ ಹುನ್ನಾರ ನಡೆಯುತ್ತಿದೆಯೇ? ನಾವು ಅರಬ್‌ನಿಂದ ಬಂದವರಲ್ಲ. 

ಆರ್‌.ಅಶೋಕ್ ಹೇಳಿಕೆಗೆ ತಲೆಯೂ ಇಲ್ಲ, ಬಾಲವೂ ಇಲ್ಲ: ಸಚಿವ ಚಲುವರಾಯಸ್ವಾಮಿ

ಈ ರೀತಿ ಮಾತನಾಡುವವರನ್ನು ಇಟ್ಟುಕೊಂಡ ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇಲ್ಲ. ದೇವಸ್ಥಾನಗಳನ್ನು ವಕ್ಫ್‌ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಜಮೀರ್ ತಾಕತ್ತಿದ್ದರೆ ಚನ್ನಪಟ್ಟಣಕ್ಕೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.