Asianet Suvarna News Asianet Suvarna News

ಪ್ರಧಾನಿ ಮೋದಿ ಮಾತಿಗೆ ಮರುಳಾಗಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಮಾವು ಬೆಳೆ ಕುಸಿದಾಗ, ನೆರೆ ಸಮಸ್ಯೆಯಾದಾಗ, ಮಳೆ ಹಾನಿಯಾದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿಲ್ಲ. ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಿಲ್ಲ. ಚುನಾವಣೆ ಪ್ರಚಾರಕ್ಕೆ ಕೋಲಾರ ಜಿಲ್ಲೆಗೆ ಭಾನುವಾರ ಬರುತ್ತಾರೆ ಭಾಷಣ ಮಾಡಿ ಟಾಟಾ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಹೇಳಿ ಹೋಗ್ತಾರೆ. 

Karnataka Election 2023 Former CM HD Kumaraswamy Slams On PM Narendra Modi gvd
Author
First Published Apr 30, 2023, 11:59 PM IST

ಮಾಲೂರು (ಏ.30): ಮಾವು ಬೆಳೆ ಕುಸಿದಾಗ, ನೆರೆ ಸಮಸ್ಯೆಯಾದಾಗ, ಮಳೆ ಹಾನಿಯಾದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿಲ್ಲ. ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಿಲ್ಲ. ಚುನಾವಣೆ ಪ್ರಚಾರಕ್ಕೆ ಕೋಲಾರ ಜಿಲ್ಲೆಗೆ ಭಾನುವಾರ ಬರುತ್ತಾರೆ ಭಾಷಣ ಮಾಡಿ ಟಾಟಾ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಹೇಳಿ ಹೋಗ್ತಾರೆ. ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತಿಗೆ ಜನತೆ ಮರುಳಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ವೈಟ್‌ ಗಾರ್ಡನ್‌ ಬಡಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಜಿ.ಇ.ರಾಮೇಗೌಡರ ಪರವಾಗಿ ಮತಯಾಚನೆ ಮಾಡಲು ತಾಲೂಕು ಜೆಡಿಎಸ್‌ ಪಕ್ಷದಿಂದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯರಗೋಳ್‌ ನೀರು ಬಳಸುತ್ತಿಲ್ಲ: ಕೆ.ಸಿ.ವ್ಯಾಲಿ ನೀರು ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಜನರ ಪ್ರಾಣಕ್ಕೆ ಆಪತ್ತು ತರಲಿದೆ. ನನ್ನ ಅಧಿಕಾರಾವಧಿಯಲ್ಲಿ ನಿರ್ಮಾಣಗೊಂಡ ಯರಗೋಳು ಯೋಜನೆಯ ಜಲಾಶಯ ತುಂಬಿದ ಮಳೆ ನೀರು ಉಪಯೋಗ ಮಾಡಿಕೊಳ್ಳದೆ ಇರುವ ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ರಾಜ್ಯದ ಜನರು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಗೆ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೊಮ್ಮೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪಂಚ​ರತ್ನ ಯೋಜ​ನೆ​ಗಳ ಅನುಷ್ಠಾನಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು: ಎಚ್‌.ಡಿ.​ದೇ​ವೇ​ಗೌಡ

ಇಲ್ಲಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿ ನನಗೆ ಪರಿಚಿತರೆ ಆದರೆ ಜಿ.ಇ.ರಾಮೇಗೌಡರಿಗೆ ಇರುವ ಸರಳತೆ ಯಾವ ಅಭ್ಯರ್ಥಿಗೂ ಇಲ್ಲ ತಾಲೂಕಿನಲ್ಲಿ ಕಳೆದ ಹತ್ತಾರು ವ?Üರ್‍ಗಳಿಂದ ಆರೋಗ್ಯ ಶಿಕ್ಷಣ ಸಾಮಾಜಿಕವಾಗಿ ಬಡ ಜನರ ಸೇವೆ ಮಾಡುತ್ತಿರುವ ಜಿ.ಇ.ರಾಮೇಗೌಡ ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಇಲ್ಲಿನ ಮತದಾರರು ತಾಲೂಕಿನ ಅಭಿವೃದ್ಧಿ ಹಾಗೂ ಜನರ ಕಷ್ಟ ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಸೇವೆ ಮಾಡಲು ಜಿ.ಇ.ರಾಮೇಗೌಡರನ್ನು ಬೆಂಬಲಿಸಿ ಆಶೀರ್ವಾದ ಮಾಡಿದರೆ ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಹಕಾರವಾಗುತ್ತದೆ ಎಂದರು.

ಜೆಡಿಎಸ್‌ ಸೋಲಿಸಲು ಬಿಜೆಪಿ- ಕಾಂಗ್ರೆಸ್‌ ಒಳಒಪ್ಪಂದ: ಎಚ್‌.ಡಿ.ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಸದಸ್ಯ ಚೌಡರೆಡ್ಡಿ, ಜೆಡಿಎಸ್‌ ಉಪಾಧ್ಯಕ್ಷ ಜಮೀರ್‌ ಅಹಮದ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬೂರು ಶಂಕರಗೌಡ, ಕಾರ್ಯದರ್ಶಿ ಎಚ್‌.ವಿ.ಚಂದ್ರಶೇಖರ್‌ ಗೌಡ, ರಶ್ಮಿರಾಮೇಗೌಡ, ವಕ್ಕಲೇರಿ ರಾಮು, ಅಲ್ಪಸಂಖ್ಯಾತ ಮುಖಂಡ ಅಲಿಂ ಉಲ್ಲಾಖಾನ್‌, ತಾಲೂಕು ಜೆಡಿಎಸ್‌ ಪಕ್ಷದ ಅಧ್ಯಕ್ಷ ಬಲ್ಲಳ್ಳಿ ನಾರಾಯಣಸ್ವಾಮಿ, ನಗರಾಧ್ಯಕ್ಷ ಎಂ.ಕೆ.ಆನಂದ್‌, ತಾಪಂ ಮಾಜಿ ಅಧ್ಯಕ್ಷ ತ್ರಿವರ್ಣ ರವಿ, ಜಿ.ಪಂ ಮಾಜಿ ಸದಸ್ಯ ಎಚ್‌.ವಿ.ಶ್ರೀನಿವಾಸ್‌ ಮತ್ತಿತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios