ಬಿಜೆಪಿ ವರಿಷ್ಠರು ಬಿಜೆಪಿಗರಿಗೆ ಸಿಗಲ್ಲ, ಜೆಡಿಎಸ್‌ನವರಿಗೆ ಹೇಗೆ ಸಿಗ್ತಾರೆ: ಕಾಲೆಳೆದ ಕಾಂಗ್ರೆಸ್
ರಾಜ್ಯ ಬಿಜೆಪಿ ನಾಯಕರನ್ನೇ ಭೇಟಿ ಮಾಡಲು ಒಪ್ಪದ ಬಿಜೆಪಿ ಹೈಕಮಾಂಡ್ ನಾಯಕರು ಜೆಡಿಎಸ್ ನಾಯಕರನ್ನು ನಿರಾಯಾಸವಾಗಿ ಭೇಟಿಯಾಗುತ್ತಾರೆ. ರಾಜ್ಯ ಬಿಜೆಪಿ ನಾಯಕರೂ ಎಚ್.ಡಿ. ಕುಮಾರಸ್ವಾಮಿ ಜತೆ ಹೋಗಿದ್ದರೆ ಹೈಕಮಾಂಡ್ ನಾಯಕರ ಭೇಟಿ ಸುಲಭವಾಗುತ್ತಿತ್ತು ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರ ಕಾಲೆಳೆದಿದೆ.
ಬೆಂಗಳೂರು (ಸೆ.22): ರಾಜ್ಯ ಬಿಜೆಪಿ ನಾಯಕರನ್ನೇ ಭೇಟಿ ಮಾಡಲು ಒಪ್ಪದ ಬಿಜೆಪಿ ಹೈಕಮಾಂಡ್ ನಾಯಕರು ಜೆಡಿಎಸ್ ನಾಯಕರನ್ನು ನಿರಾಯಾಸವಾಗಿ ಭೇಟಿಯಾಗುತ್ತಾರೆ. ರಾಜ್ಯ ಬಿಜೆಪಿ ನಾಯಕರೂ ಎಚ್.ಡಿ. ಕುಮಾರಸ್ವಾಮಿ ಜತೆ ಹೋಗಿದ್ದರೆ ಹೈಕಮಾಂಡ್ ನಾಯಕರ ಭೇಟಿ ಸುಲಭವಾಗುತ್ತಿತ್ತು ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರ ಕಾಲೆಳೆದಿದೆ.
ಈ ಬಗ್ಗೆ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, 'ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರೂ ಬಿಜೆಪಿ ಹೈಕಮಾಂಡ್ ನಾಯಕರು ಬಿಜೆಪಿ ರಾಜ್ಯ ನಾಯಕರನ್ನು ಭೇಟಿ ಮಾಡಲು ಒಪ್ಪಿಲ್ಲ. ಇದೀಗ ಜೆಡಿಎಸ್ ನಾಯಕರನ್ನು ಭೇಟಿಯಾಗಿದ್ದು ಎ-ಟೀಮ್‌ಗಿಂತ ಬಿ- ಟೀಮ್ ಮೇಲೆಯೇ ಪ್ರೀತಿ ಜಾಸ್ತಿಯೇ?' ಎಂದು ಪ್ರಶ್ನಿಸಿದೆ. ಇನ್ನು ರಾಜ್ಯ ಬಿಜೆಪಿ ನಾಯಕರು ಕುಮಾರಸ್ವಾಮಿ ಜತೆಗೆ ಹೋಗಿದ್ದರೆ ಹೈಕಮಾಂಡ್ ನಾಯಕರ ಭೇಟಿ ಸುಲಭವಾಗುತ್ತಿತ್ತು. ವಿರೋಧಪಕ್ಷದ ನಾಯಕನ ಆಯ್ಕೆ ಬಗ್ಗೆ ಆಗಲಾದರೂ ಚರ್ಚಿಸಬಹುದಿತ್ತು ಎಂದು ಕಾಲೆಳೆದಿದೆ.
ತಾಂತ್ರಿಕ ವಿಘ್ನ, ಆಸ್ತಿ ನೋಂದಣಿಗೆ ಭಾರಿ ರಶ್: ಕಾವೇರಿ-2 ಸರ್ವರ್ ಕ್ರ್ಯಾಶ್!
ಸೂಲಿಬೆಲೆ, ಸಿ.ಟಿ.ರವಿ ಸುಮ್ಮನಿದ್ದಿದ್ದೇಕೆ: ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್‌ಗೆ ಆತನೇ ಒಪ್ಪಿಕೊಂಡಂತೆ ಚೈತ್ರಾ ಕುಂದಾಪುರ ಅವರ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ. ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೂ ತಿಳಿದಿತ್ತಂತೆ. ಬಿಜೆಪಿ ಹೆಸರಿನಲ್ಲಿ ಮಹಾ ವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದ್ದಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಚೈನ್ ಚೈತ್ರ ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಿನಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ ಎಂದು ಟೀಕಿಸಿದೆ.
ಠಕ್ಕರ್ ನೀಡಲು ಕೈ ಸಿದ್ಧತೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿರುವಂತೆ, ಬಿಜೆಪಿ-ಜೆಡಿಎಸ್ ಮೈತ್ರಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದೆ. ಒಕ್ಕಲಿಗ ಪ್ರಾಬಲ್ಯದ 8 ಜಿಲ್ಲೆಗಳು ಸೇರಿದಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಗೆ ಠಕ್ಕರ್ ಕೊಟ್ಟು ಹೆಚ್ಚಿನ ಸ್ಥಾನಗಳನ್ನು ಪಡೆಯಲು ರಣತಂತ್ರ ರೂಪಿಸುತ್ತಿದೆ. ದೆಹಲಿಯಲ್ಲಿ ಸಂಸದ ಡಿ.ಕೆ.ಸುರೇಶ್ ಮನೆಯಲ್ಲಿ ಸಭೆ ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಅಮಿತ್ ಶಾ ಜೊತೆ ಇಂದು ‘ದಳ’ಪತಿಗಳ ಮೈತ್ರಿ ಚರ್ಚೆ?: ಹಾಸನ, ಮಂಡ್ಯ, ತುಮಕೂರು ಕ್ಷೇತ್ರ ಜೆಡಿಎಸ್‌ಗೆ?
ಒಕ್ಕಲಿಗ ಪ್ರಾಬಲ್ಯದ 8 ಜಿಲ್ಲೆಗಳು ಸೇರಿದಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವಿಗೆ ಅನುಸರಿಸಬೇಕಾದ ತಂತ್ರಗಳ ಕುರಿತು ಚರ್ಚೆ ನಡೆಸಿದರು. ಮಂಡ್ಯ, ಹಾಸನ ಸೇರಿ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗ ಮತಗಳು ಚದುರದಂತೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು?. ಉಳಿದ ಕಡೆ ಇತರ ಪ್ರಬಲ ಸಮುದಾಯದ ಮತಗಳನ್ನು ಸೆಳೆಯಲು ಯಾವ ತಂತ್ರ ರೂಪಿಸಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಬಿಜೆಪಿಯಲ್ಲಿ ಯಾರು ಅಸಮಾಧಾನಗೊಂಡಿದ್ದಾರೆ?. ಜೆಡಿಎಸ್ ನಲ್ಲಿ ಯಾರು ಅಸಮಾಧಾನಗೊಂಡಿದ್ದಾರೆ? ಎಂದು ಪತ್ತೆ ಹಚ್ಚಲು ಯಾರಿಗೆ ಹೊಣೆ ವಹಿಸಬೇಕು?.