Asianet Suvarna News Asianet Suvarna News

ಅಮಿತ್ ಶಾ ಜೊತೆ ಇಂದು ‘ದಳ’ಪತಿಗಳ ಮೈತ್ರಿ ಚರ್ಚೆ?: ಹಾಸನ, ಮಂಡ್ಯ, ತುಮಕೂರು ಕ್ಷೇತ್ರ ಜೆಡಿಎಸ್‌ಗೆ?

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ‘ದಳ’ಪತಿಗಳು ಶುಕ್ರವಾರ ಭೇಟಿಯಾಗುವ ಸಾಧ್ಯತೆ ಇದೆ. 

JDS leaders alliance discussion with Amit Shah on sep 22 gvd
Author
First Published Sep 22, 2023, 5:23 AM IST

ನವದೆಹಲಿ (ಸೆ.22): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ‘ದಳ’ಪತಿಗಳು ಶುಕ್ರವಾರ ಭೇಟಿಯಾಗುವ ಸಾಧ್ಯತೆ ಇದೆ. ಪೂರ್ವನಿಗದಿಯಂತೆ ಗುರುವಾರವೇ ಈ ಭೇಟಿ ನಡೆಯಬೇಕಿದ್ದರೂ ಮಹಿಳಾ ಮೀಸಲಾತಿ ವಿಧೇಯಕ ಮಂಡನೆ ಹಿನ್ನೆಲೆಯಲ್ಲಿ ಸಂಸತ್‌ ಅಧಿವೇಶನ ತಡರಾತ್ರಿ ವರೆಗೂ ಮುಂದುವರಿದ ಕಾರಣ ಅನಿವಾರ್ಯವಾಗಿ ಈ ಭೇಟಿ ಸಾಧ್ಯವಾಗಲಿಲ್ಲ.

ಈ ಮಧ್ಯೆ, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಅವರು ದೇವೇಗೌಡರ ಮನೆಗೆ ಭೇಟಿ ನೀಡಿ ಕೆಲಕಾಲ ಮೈತ್ರಿ ವಿಚಾರವಾಗಿ ಸಮಾಲೋಚನೆ ನಡೆಸಿದರು. ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಕುರಿತು ಈ ವೇಳೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶಾ ಅವರ ಭೇಟಿಗೂ ಮುನ್ನ ಸೀಟು ಹಂಚಿಕೆ ಕುರಿತು ಸ್ಪಷ್ಟತೆ ಪಡೆಯುವ ಉದ್ದೇಶದಿಂದ ಈ ಭೇಟಿ ನಡೆದಿದೆ ಎಂದು ಹೇಳಲಾಗಿದೆ. ಈ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುವ ಬಿಜೆಪಿ ಪ್ರಸ್ತಾಪಕ್ಕೆ ಬಹುತೇಕ ಜೆಡಿಎಸ್‌ನಿಂದಲೂ ಗ್ರೀನ್‌ ಸಿಗ್ನಲ್‌ ಸಿಗುವ ನಿರೀಕ್ಷೆ ಇದೆ.

ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್‌ ದುರಹಂಕಾರದ ಮಾತುಗಳನ್ನಾಡುತ್ತಿದೆ: ಅಶ್ವತ್ಥನಾರಾಯಣ

ಎಚ್‌ಡಿಡಿ ಮನೆಯಲ್ಲಿ ಸಭೆ: ಇದಕ್ಕೂ ಮುನ್ನ ಸಪ್ಧರ್‌ಗಂಜ್‌ನಲ್ಲಿರುವ ದೇವೇಗೌಡರ ನಿವಾಸದಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ಸಾ.ರಾ.ಮಹೇಶ್‌, ನಿಖಿಲ್ ಕುಮಾರಸ್ವಾಮಿ ಅವರು ಕೆಲಕಾಲ ಸಮಾಲೋಚನೆ ನಡೆಸಿದರು. ಮೈತ್ರಿಯ ರೂಪುರೇಷೆ ಹೇಗಿರಬೇಕು, ಶಾ ಅವರ ಜತೆಗೆ ಮೈತ್ರಿಗೆ ಸಂಬಂಧಿಸಿ ಯಾವ ಯಾವ ವಿಚಾರ ಪ್ರಸ್ತಾಪಿಸಬೇಕು, ಯಾವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕೇಳಬೇಕು ಎಂಬ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆಯಿತೆನ್ನಲಾಗಿದೆ.

Follow Us:
Download App:
  • android
  • ios