ಕೈ-ತೆನೆ ದೋಸ್ತಿ ಎದುರು ಮಂಡಿಯೂರಿದ ಬಿಜೆಪಿ- Live Updates

ಬಿಜೆಪಿ ಭದ್ರ ಕೋಟೆ ಬಳ್ಳಾರಿಯಲ್ಲಿಯೇ ಶ್ರೀರಾಮುಲುಗೆ ಡಿಕೆಶಿ ಡಿಚ್ಚಿ ಹೊಡೆದಿದ್ದು ಹೇಗೆ?
ಮಂಡ್ಯದಲ್ಲಿ ಸೋತರೂ ಬಿಜೆಪಿ ಅಭ್ಯರ್ಥಿಯ ದಾಖಲೆ ಏನು?
ನಿರೀಕ್ಷೆಯಂತೆ ನಿರಾಯಾಸವಾಗಿ ಗೆದ್ದ ಅನಿತಾ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಕಷ್ಟ ಪಟ್ಟು ಗೆಲುವಿನ ಹಾದಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ
ಜಮಖಂಡಿಯಲ್ಲಿ ವರ್ಕ್ ಔಟ್ ಆದ ಅನುಕಂಪದ ಅಲೆ...ಇಲ್ಲಿದೆ ಸಂಪೂರ್ಣ ಮಾಹಿತಿ
ಗೆದ್ದ ಕಾಂಗ್ರೆಸ್ ಸೀಕ್ರೆಟ್ ಏನು?
ರಾಜ್ಯದಲ್ಲಿ ಬಿಜೆಪಿ ಇಲ್ಲದಂತೆ ಮಾಡುತ್ತೇವೆ: ದಿನೇಶ್ ಗುಂಡೂರಾವ್
ಕಾಂಗ್ರೆಸ್ ಬೆಂಬಲ ಗೆಲುವಿಗೆ ಕಾರಣ: ಅನಿತಾ
ರಾಮನಗರ ಉಪ ಚುನಾವಣೆ ಯಲ್ಲಿ ಭರ್ಜರಿ ಗೆಲುವು ತಂದಿರುವುದು ತುಂಬಾ ಸಂತಸ ತಂದಿದೆ. ಇಡೀ ರಾಜ್ಯದಲ್ಲೇ ಇಷ್ಟು ದೊಡ್ಡ ಅಂತರದಲ್ಲಿ ಗೆದ್ದ ಉದಾಹರಣೆ ಇಲ್ಲ. ಕ್ಷೇತ್ರದ ಜನತೆ ನಮ್ಮ ಕುಟುಂಬದ ಮೇಲೆ ಮೊದಲಿನಿಂದಲೂ ಇಟ್ಟಿರುವ ಅಭಿಮಾನದಿಂದ ಈ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಬೆಂಬಲ ನೀಡಿದ್ದು ಬಾರಿ ಅಂತರದ ಗೆಲುವಿಗೆ ಕಾರಣ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತೇವೆ.ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ.
-ಅನಿತಾ ಕುಮಾರಸ್ವಾಮಿ, ರಾಮನಗರ ಹೊಸ ಶಾಸಕಿ
ಗೌಡರ ಮನೆ ಮಂದಿ ಪೂರ್ತಿ ವಿಧಾನಸೌಧದಲ್ಲಿ
ಉಪ ಚುನಾವಣೆ ಫಲಿತಾಂಶ ಬಿಜೆಪಿಗೊಂದು ಪಾಠ: ಸಿ.ಟಿ.ರವಿ
ಇನ್ನೂ ಉಪ ಚುನಾವಣೆ ಫಲಿತಾಂಶದ ಘೋಷಣೆಗೂ ಮುನ್ನವೇ ಮಂಡ್ಯದಲ್ಲಿ ಬಿಜೆಪಿ ಸೋಲುಪ್ಪಿಕೊಂಡಿದ್ದ ಚಿಕ್ಕಮಗಳೂರು ಶಾಸಕರ ಸಿ.ಟಿ.ರವಿ ಈಗ ಪ್ರತಿಕ್ರಿಯೆಸಿದ್ದು ಹೀಗೆ.
ಬಿಜೆಪಿ ಪಾಠ ಕಲಿಯಲಿದು ಸಕಾಲ: ಪೂಜಾರಿ
ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ನಿರೀಕ್ಷೆಯನ್ನೂ ಮೀರಿ ಕಾಂಗ್ರೇಸ್- ಜೆಡಿಎಸ್ ಗೆಲುವು ಸಾಧಿಸಿದೆ. ಬಳ್ಳಾರಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಹಣದ ಹೊಳೆ ಹರಿಸಿದ್ದಾರೆ. ಹಣದ ದಂಧೆಯನ್ನು ತಡೆಯದಿದ್ದರೆ ಏರುಪೇರಾಗುತ್ತೆ ಅನ್ನೋ ಆತಂಕ ಇತ್ತು. ಆಳುವ ಪಕ್ಷ ತನ್ನೆಲ್ಲಾ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಶಿವಮೊಗ್ಗದ ಗೆಲುವು ಸಂತೋಷ ನೀಡಿದೆ. ನಮ್ಮ ಪಕ್ಷಕ್ಕೆ ಆತ್ಮಾವಲೋಕನ ಮಾಡಲು ಸಕಾಲ. ತಳಮಟ್ಟದಿಂದಲೇ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ. ಬಿಜೆಪಿ ಮುಂದಿನ ಪಾರ್ಲಿಮೆಂಟ್ ಚುನಾವಣೆ ಯಲ್ಲಿ ಹೆಚ್ವು ಸ್ಥಾನ ಗೆಲ್ಲುತ್ತೆ.
- ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ವಿಪಕ್ಷ ನಾಯಕ
ಗಣಿ ನಾಡಲ್ಲಿ ಧೂಳೀಪಟವಾದ ಕಮಲ
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುನ್ನವೇ ಬಿಜೆಪಿ ಗೆದ್ದಾಗಿದೆ ಎಂದು ಬೀಗುತ್ತಿದ್ದ ಪಕ್ಷಕ್ಕೆ ಬಿಗ್ ಶಾಕ್ ಬಳ್ಳಾರಿ ಫಲಿತಾಂಶ.
ಉಪ ಸಮರ ಫಲಿತಾಂಶ: ಮೈತ್ರಿಗೆ ಸಿಕ್ಕ ಗೆಲುವು
ಕೈ ಮತ್ತು ಜೆಡಿಎಸ್ ಮೈತ್ರಿ ಸರಕಾರ ಆರು ತಿಂಗಳಿಂದ ಸರ್ಕಾರ ನಡೆಸುತ್ತಿದೆ. ಜಮಖಂಡಿ ಯಲ್ಲಿ ಕಳೆದ ಬಾರಿ ಕೇವಲ 2 ಸಾವಿರ ಮತದಿಂದ ಗೆದ್ದಿದ್ದೆವು. ಈ ಬಾರಿ ಗೆಲುವಿನ ಅಂತರ 40 ಸಾವಿರ ದಾಟಿದೆ. ಇದು ಕಾಂಗ್ರೆಸ್, ಜೆಡಿಎಸ್ ಸರ್ಕಾರಕ್ಕೆ ಸಿಕ್ಕ ಜನಾದೇಶ. ಇದು ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕ ಮಾರ್ಕ್ಸ್.
- ಕೆ.ಸಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ
ಸಿದ್ದರಾಮಯ್ಯ ನೇತೃತ್ವದ ಒಗ್ಗಟ್ಟಿಗೆ ಗೆಲವು
ಇದು ಸಿದ್ಧರಾಮಯ್ಯ ನೇತ್ರತ್ವದಲ್ಲಿ ಒಗ್ಗಟ್ಟಿನಿಂದ ಬಂದ ಗೆಲವು. ಪರಮೇಶ್ವರ್ ಅವರ ಚುನಾವಣಾ ಉಸ್ತುವಾರಿಯೂ ಈ ಗೆಲುವಿಗೆ ಕಾರಣ. ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ಜಮಖಂಡಿಯ ಸಿದ್ದುನ್ಯಾಮಗೌಡರ ಅಭಿವೃದ್ಧಿ ಕೆಲಸದಿಂದ ಅವರ ಮಗ ಗೆಲುವು ಸಾಧಿಸಿದ್ದಾರೆ. ಬಿಜೆಪಿಯವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ, ಅವರ ವ್ಯರ್ಥ ಪ್ರಯತ್ನವನ್ನ ನಿಲ್ಲಿಸಲಿ. ವಿರೋಧ ಪಕ್ಷದಲ್ಲಿದ್ದು ಬಿಜೆಪಿ ಕಾರ್ಯನಿರ್ವಹಿಸಲಿ.
- ಎಂ.ಬಿ.ಪಾಟೀಲ್, ಕಾಂಗ್ರೆಸ್ ಮುಖಂಡ
ಮೈತ್ರಿ ಸರಕಾರದ ಗೆಲವಿದು: H. ವಿಶ್ವನಾಥ್
ಕರ್ನಾಟಕದ ಕಿರುಸಮರ ಮುಗಿದಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಗೆ ಮತದಾರ ಆಶೀರ್ವದಿಸಿದ್ದಾರೆ. ಮೈತ್ರಿ ಸರ್ಕಾರದ ಕಾರ್ಯಚಟುವಟಿಕೆಗೆ ರಾಜ್ಯದ ಜನ ಖುಷಿಪಟ್ಟಿದ್ದಾರೆ. ಕುಮಾರಸ್ವಾಮಿ ಯವರಿಗೆ ರಾಜ್ಯದ ಜನ್ರ ಬೆಂಬಲ ಸಿಕ್ಕಿದೆ. ದೇವೇಗೌಡ್ರ ಚಾಣಕ್ಯ ನಡುವಳಿಕೆಯಿಂದ ಗೆಲುವು ಸಾಧಿಸಿದೆ. ಗೌಡ್ರು ಬಳ್ಳಾರಿಯಲ್ಲಿ ನಡೆಸಿದ ಭಾಷಣ ಬಳ್ಳಾರಿ ಜನರ ಕಣ್ಣು ತೆರೆಸಿತ್ತು.ಇದ್ರ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಎಲ್ಲರ ಶ್ರಮ ಒಗ್ಗೂಡಿ ಮೈತ್ರಿಗೆ ಗೆಲುವು ಸಿಕ್ಕಿದೆ.
- ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ರಾಮನಗರಕ್ಕೆ ಮೊದಲ ಮಹಿಳಾ ಶಾಸಕಿ
ನಿರೀಕ್ಷೆಯಂತೆ ರಾಮನಗರದ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.
20ನೇ ಸುತ್ತು ಕೊನೆ ಸುತ್ತು ಮುಗಿಯುವ ಹೊತ್ತಿಗೆ ಅಭ್ಯರ್ಥಿಗಳು ಪಡೆದ ಮತಗಳು...
ಅನಿತಾ ಕುಮಾರಸ್ವಾಮಿ -125043
ಬಿಜೆಪಿ : 15906
ಅಂತರ : 109137
ನೋಟಾ: 2909
ಗಡಿ ನಾಡಲ್ಲೇ ರಾಮುಲುಗೆ ಡಿಚ್ಚಿ ಹೊಡೆದ ಡಿಕೆಶಿ
ಸೋಲಿಗೆ ನಾನೇ ಹೊಣೆ: ಶ್ರೀರಾಮುಲು
ಬಳ್ಳಾರಿಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರ ಬಿದಿದ್ದು, ಬಿಜೆಪಿ ಅಭ್ಯರ್ಥ ಸೋಲಿಗೆ ಶ್ರೀರಾಮುಲು ಅವರೇ ಹೊಣೆ ಹೊತ್ತಿದ್ದಾರೆ.

ಬಳ್ಳಾರಿಯಲ್ಲಿ ಕೈಗೆ ಗೆಲವು: ಶ್ರೀರಾಮುಲುಗೆ ಥ್ಯಾಂಕ್ಸ್ ಎಂದ ಡಿಕೆಶಿ
ಶಿವಮೊಗ್ಗಕ್ಕೆ ಬರಬೇಕು ಅಂತ ನಿನ್ನೆಯಿಂದ ಕರೆಬರುತ್ತಿದೆ. ಇವತ್ತು ಬಳ್ಳಾರಿಗೆ ಹೋಗಬೇಕೋ, ಬೇಡವೋ ಎಂದು ತೀರ್ಮಾನಿಸುತ್ತೇನೆ. ರಾಜಕಾರಣದಲ್ಲಿ ಕೊನೆ ಸುತ್ತಿನಲ್ಲಿ ಏನು ಬೇಕಾದ್ರೂ ಆಗಬಹುದು. ಯಾಕಂದ್ರೆ ನನಗೆ ಅನುಭವ ಇದೆ. ನನಗೆ ಬಳ್ಳಾರಿ ಚುನಾವಣೆ ಜವಾಬ್ದಾರಿ ಸಿಕ್ಕಿತ್ತು. ನನಗೆ ಅನೇಕ ಟೀಕೆ ಟಿಪ್ಪಣಿಗಳನ್ನೂ ಮಾಡಿದ್ದರು. ಮೂವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಶ್ರೀರಾಮುಲು ಅಣ್ಣನಿಗೆ ಮೊದಲಿಗೆ ಧನ್ಯವಾದ. ಈ ಚುನಾವಣೆ ಉತ್ತಮ ರೀತಿ ನಡೆಯಲು ಸಹಕರಿಸಿದ್ದಾರೆ. ನಮ್ಮಿಂದ ಕಾರ್ಯಕರ್ತರಿಗೆ ಯಾವುದೇ ತೊಂದರೆ ಆಗಬಾರದು. ಶಾಂತಕ್ಕ ಕೂಡ ಬಹಳ ಸೌಮ್ಯವಾಗಿ ಮತಯಾಚಿಸಿದ್ದಾರೆ. ಪಕ್ಷ ಭೇದ, ಜಾತಿ ಧರ್ಮ ಬಿಟ್ಟು ಮತದಾರರು ಸಹಕಾರ ನೀಡಿದ್ದಾರೆ. ಉಗ್ರಪ್ಪ ಅವರು ಪಾರ್ಲಿಮೆಂಟ್ ನಲ್ಲಿ ಉತ್ತಮ ಕೆಲಸ ಮಾಡಲಿದ್ದಾರೆ. ನಾನು ಗೆದ್ದಿದ್ದೇನೆ ಎಂದು ನಾನು ಹಿಗ್ಗಲ್ಲ. 5 ತಿಂಗಳ ಚುನಾವಣೆ ಆದರೂ ನಾವು ಅದನ್ನು ಎದುರಿಸಬೇಕು.
-ಡಿ.ಕೆ.ಶಿವಕುಮಾರ್
ಅಂಬಿ ದಾಖಲೆ ಮುರಿದ ಶಿವರಾಮೇಗೌಡ
ಹಣ ದರ್ಬಳಕೆ ಮಾಡಿಕೊಂಡು ಗೆಲವು
ಮೈತ್ರಿ ಸರ್ಕಾರದ ಹಣ ಬಲ, ಅಧಿಕಾರದ ದುರುಪಯೋಗದಿಂದ ಕಾಂಗ್ರೆಸ್- ಜೆಡಿಎಸ್ ಗೆದ್ದಿದೆ. ಜನರ ತೀರ್ಪು ನಾವು ಸ್ವಾಗತಿಸುತ್ತೇವೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಾಗುವುದು ಈ ಹಿಂದೆ ಗುಂಡ್ಲುಪೇಟೆ ಹಾಗೂ
ನಂಜನಗೂಡು ಫಲಿತಾಂಶಗಳು ಏನಾಯ್ತು? ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಯಾವ ಸರ್ಕಾರ ಅಧಿಕಾರದಲ್ಲಿರುತ್ತೋ ಅವರು ಅಧಿಕಾರ, ಹಣ ದುರ್ಬಳಕೆ ಮಾಡಿಕೊಂಡ ಗೆಲ್ಲುವುದು ಸಹಜ. ಈ ಫಲಿತಾಂಶ ಸಾರ್ವತ್ರಿಕ ಚುನಾವಣೆಯಲ್ಲಿ ಉಲ್ಟಾ ಆಗಲಿದೆ. ಫಲಿತಾಂಶದಿಂದ ಸಾರ್ವತ್ರಿಕ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಮಖಂಡಿಯಲ್ಲಿ ಇವಿಎಂ ಮಷಿನ್ ಗಳನ್ನ ಖಾಸಗಿ ವಾಹನಗಳಲ್ಲಿ ಸಾಗಿಸಲಾಗಿದೆ.ಈ ಬಗ್ಗೆ ಬಿಜೆಪಿ ಆಯೋಗಕ್ಕೆ ದೂರು ನೀಡಿದೆ.ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಮಾಡಿದ್ದೇವೆ.- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಶಿವಮೊಗ್ಗದಲ್ಲಿ ಹಣ ಬಲದ್ದೇ ಆಟ
ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮನೆಗೆ ಸಚಿವ ಹೆಚ್ ಡಿ ರೇವಣ್ಣ ಭೇಟಿ ನೀಡಿದ್ದಾರೆ.
ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಇದು ಸಹಜವಾಗಿ ಜನರ ತೀರ್ಪು ಮೈತ್ರಿ ಪಕ್ಷದ ಪರ ಇರೋದನ್ನು ತೋರಿಸಿದೆ. ಶಿವಮೊಗ್ಗದಲ್ಲಿ ಹಣ ಬಲ ವರ್ಕೌಟ್ ಆಗಿದೆ ಅಷ್ಟೆ. ಕುಮಾರಸ್ವಾಮಿ ಒಳ್ಳೆ ಆಡಳಿತ ಕೊಟ್ಟಿದ್ದಾರೆ. ಅದಕ್ಕೆ ಜನರ ತೀರ್ಪು ಇದಾಗಿದೆ. ಇನ್ನಾದ್ರೂ ಸಂಪೂರ್ಣ ಸಾಲಮನ್ನಕ್ಕೆ ಕೇಂದ್ರ ಸಹಕಾರ ನೀಡಬೇಕು.
- ಎಚ್.ಡಿ.ರೇವಣ್ಣ
ಬಳ್ಳಾರಿಯರಲ್ಲಿ ಜನಾರ್ದನ ರೆಡ್ಡಿಗೆ ಜನರೇ ಶಾಪ ನೀಡಿದ್ದಾರೆ
ಬಳ್ಳಾರಿಯ ಜನತಾ ಜನಾರ್ಧನರಿಗೆ ಧನ್ಯವಾದಗಳು.
— Siddaramaiah (@siddaramaiah) November 6, 2018
ಜನಾರ್ಧನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ.@INCKarnataka
ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿರುವ ಆನಂದ ನ್ಯಾಮಗೌಡ ಅವರಿಗೆ ಅಭಿನಂದನೆಗಳು. ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳು. #Jamakhandi@INCKarnataka
— Siddaramaiah (@siddaramaiah) November 6, 2018
ಬಳ್ಳಾರಿ ಅರ್ಥಪೂರ್ಣ ದೀಪಾವಳಿ
ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ.
— Siddaramaiah (@siddaramaiah) November 6, 2018
ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ.
ನಾಡಬಾಂಧವರಿಗೆ
ದೀಪಾವಳಿಯ ಶುಭಾಶಯಗಳು.@INCKarnataka




