Asianet Suvarna News Asianet Suvarna News

ಮಂಡ್ಯ ಉಪಚುನಾವಣೆ: ಅಂಬರೀಶ್ ದಾಖಲೆ ಮುರಿದ ಶಿವರಾಮೇಗೌಡ

ಮಂಡ್ಯ ಲೋಕಸಬಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್​ ಮೈತ್ರಿ ಅಭ್ಯರ್ಥಿ ಎಲ್​.ಆರ್​. ಶಿವರಾಮೇಗೌಡ ಗೆಲುವಿನತ್ತ ದಾಪುಗಾಲು ಇಟ್ಟಿದ್ದು, ಅಂಬರೀಶ್ ದಾಖಲೆ ಉಡೀಸ್ ಮಾಡಿದ್ದಾರೆ.

L R Shivarame Gowda breaks Ambareesh record of victory margin in Mandya
Author
Bengaluru, First Published Nov 6, 2018, 11:13 AM IST

ಮಂಡ್ಯ, [ನ.06]: ಕಾಂಗ್ರೆಸ್-ಜೆಡಿಎಸ್​ ಅಭ್ಯರ್ಥಿ ಎಲ್​.ಆರ್​. ಶಿವರಾಮೇಗೌಡ ಲೋಕಸಭಾ ಉಪಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳಿಗೂ ಹೆಚ್ಚು ಅಂತರ ಕಾಯ್ದಿರಿಸಿಕೊಂಡು ದಾಖಲೆಯ ಜಯದತ್ತ ದಾಪುಗಾಲಿಟ್ಟಿದ್ದಾರೆ.

ಮತ ಎಣಿಕೆಯ 8ನೇ ಸುತ್ತಿ ಮುಕ್ತಾಯದ ವೇಳೆಗೆ ಜೆಡಿಎಸ್ 2,66,806 ಮತ ಪಡೆದುಕೊಂಡರೆ, ಬಿಜೆಪಿ 1,02,470 ಮತಗಳಿಗೆ ಸಮಾಧಾನ ಪಟ್ಟುಕೊಂಡಿದೆ.  ಈ ಮೂಲಕ ಶಿವರಾಮೇಗೌಡ ಅವರ ಗೆಲುವು ಬಹುತೇಕ ಖಚಿತವಾಗಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಅಂಬಿ ದಾಖಲೆ ಮುರಿದ ಶಿವರಾಮೇಗೌಡ

ಎಲ್​.ಆರ್​. ಶಿವರಾಮೇಗೌಡ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಂಬರೀಶ್ ಅವರ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.

1998ರಲ್ಲಿ ಅಂಬರೀಶ್ ಜಿ.ಮಾದೇಗೌಡ ಅವರನ್ನು ಭಾರಿ ಅಂತರದಿಂದ ಮಣಿಸಿದ್ದರು. ಆಗ ಜೆಡಿಎಸ್​ ಅಭ್ಯರ್ಥಿಯಾಗಿದ್ದ ಅಂಬರೀಶ್ 4,31,439 ಮತ ಪಡೆದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಮಾದೇಗೌಡ 2,50,916 ಮತ ಗಳಿಸಿದ್ದರು. 

ಬರೋಬ್ಬರಿ 1,80,523 ಮತಗಳ ಅಂತರದಿಂದ ಅಂಬರೀಶ್​ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರು. ಈ ಐತಿಹಾಸಿಕ ದಾಖಲೆ ಮುರಿಯುವತ್ತ ಶಿವರಾಮೇಗೌಡ ಹೆಜ್ಜೆ ಹಾಕಿದ್ದಾರೆ.

Follow Us:
Download App:
  • android
  • ios