ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ದೋಸ್ತಿ ಸರಕಾರ ಗೆಲುವಿನ ನಗೆ ಬೀರಿದ್ದು ಬಿಜೆಪಿಗೆ ಮುಖಭಂಗವಾಗಿದೆ. ರಾಮನಗರದಿಂದ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ದೇವೇಗೌಡರ ಕುಟುಂಬದ ಮತ್ತೊಬ್ಬರು ವಿಧಾನಸಭೆ ಪ್ರವೇಶ ಮಾಡಿದ್ದಾರೆ.

ಬೆಂಗಳೂರು(ನ.06) ರಾಜ್ಯ ವಿಧಾನಸಭೆಗೆ ಅನಿತಾ ಕುಮಾರಸ್ವಾಮಿ ಮತ್ತೊಮ್ಮೆ ಪ್ರವೇಶ ಮಾಡಿದ್ದಾರೆ. ಈ ಮೂಲಕ ಕುಟುಂಬ ರಾಜಕಾರಣದ ಆರೋಗಳ ನಡುವೆಯೂ ಗೌಡರ ಕುಟುಂಬದ ಮತ್ತೊಬ್ಬರು ಜನರ ಪ್ರೀತಿಯಿಂದಲೇ ವಿಧಾನಸಭೆ ಪ್ರವೇಶ ಮಾಡಿದ್ದಾರೆ.

ಇನ್ನು ನಿಖಿಲ್ ಮತ್ತು ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆಗೆ ತಾಲೀಮು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ  ದಂಪತಿ  ಸಮೇತರಾಗಿ ಕುಮಾರಸ್ವಾಮಿ ವಿಧಾನಸಭೆ ಪ್ರವೇಶ ಮಾಡಲಿದ್ದಾರೆ.

ಸಿಎಂ ಗಿಂತ ಪತ್ನಿ ಸಿರಿವಂತೆ : ಅನಿತಾ ಕುಮಾರಸ್ವಾಮಿ ಆಸ್ತಿ ಮೊತ್ತವೆಷ್ಟು..?

 ದೇವೇಗೌಡರು ಹಾಸನ ಕ್ಷೇತ್ರದಿಂದ ಮತ್ತೊಂದು ಅವಧಿಗೆ ಸ್ಪರ್ಧೆ ಮಾಡುವುದು ಪಕ್ಕಾ.  ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ಮೈಸೂರು ಹಾಗೂ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರನ್ನು ಮಂಡ್ಯ ಇಲ್ಲವೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸತ್ತಿಗೆ ಕಳುಹಿಸಲು ರಾಜಕೀಯ ತಂತ್ರಗಾರಿಕೆ ಸಹ ನಡೆದಿದೆ.

ಎಚ್‌.ಡಿ.ಕುಮಾರಸ್ವಾಮಿ-ಮುಖ್ಯಮಂತ್ರಿ

ಎಚ್‌.ಡಿ.ರೇವಣ್ಣ- ಲೋಕೋಪಯೋಗಿ ಸಚಿವ

ಅನಿತಾ ಕುಮಾರಸ್ವಾಮಿ-ರಾಮನಗರ ಶಾಸಕಿ