Asianet Suvarna News Asianet Suvarna News

ಶ್ರೀರಾಮುಲುಗೆ ಅವರ ಕೋಟೆಯಲ್ಲೇ ಡಿಕೆಶಿ ಡಿಚ್ಚಿ ಕೊಟ್ಟಿದ್ದು ಹೇಗೆ?

ಉಪಚುನಾವಣೆ ಫಲಿತಾಂಶ ಹೊರಬಂದಿದ್ದು ಶಿವಮೊಗ್ಗ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಗೆ ಬಹುದೊಡ್ಡ ನಷ್ಟ ಆಗಿದ್ದು ದೋಸ್ತಿಗಳೂ ನಿರೀಕ್ಷೆಗೂ ಮೀರಿ ಲಾಭ ಮಾಡಿಕೊಂಡಿದ್ದಾರೆ.

Karnataka By Election 2018 the real cause behind  Bellary congress victory
Author
Bengaluru, First Published Nov 6, 2018, 11:48 AM IST

ಬೆಂಗಳೂರು(ನ.05) ಕುತೂಹಲ ಕೆರಳಿಸಿದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು  ಭರ್ಜರಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಖಾತೆ ತೆರೆಯುವ ಸಾಧ್ಯತೆ ಹೆಚ್ಚಾಗಿದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಹಣಾಹಣಿ ಇತ್ತು ಎಂದು ಭಾವಿಸಲಾಗಿತ್ತು. ಆದರೆ ಬೆಂಗಳೂರನ್ನು ರಾಜಕಾರಣದ ಕೇಂದ್ರ ಮಾಡಿಕೊಂಡಿದ್ದ ಉಗ್ರಪ್ಪ ದೂರದ ಬಳ್ಳಾರಿ ಮೂಲಕ ಲೋಕಸಭೆ ಪ್ರವೇಶ ಮಾಡಿದ್ದಾರೆ.  ದಾಖಲೆ ರೀತಿಯಲ್ಲಿ  4, 06, 367 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಜೆ. ಶಾಂತ 2, 45, 257 ಮತಗಳನ್ನು ಪಡೆದು ಸೋಲಿಗೆ ಶರಣಾಗಿದ್ದಾರೆ.

ಮಂಡ್ಯ ಉಪಚುನಾವಣೆ: ಅಂಬರೀಶ್ ದಾಖಲೆ ಮುರಿದ ಶಿವರಾಮೇಗೌಡ

ಇದನ್ನು ಬಿಜೆಪಿ ಮತ್ತು ದೋಸ್ತಿಗಳ ನಡುವಿನ ಹೋರಾಟ ಎನ್ನುವುದಕ್ಕಿಂತ ಶ್ರೀರಾಮಲು ಮತ್ತು ಡಿಕೆಶಿ ನಡುವಿನ ಹೋರಾಟ ಎಂದು ಭಾವಿಸಲಾಗಿತ್ತು.  ಇಲ್ಲಿ ಡಿಕೆಶಿ ಜಯಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.

ಸಿದ್ದರಾಮಯ್ಯ ಪುತ್ರನ ಸಾವಿಗೆ ಬಗ್ಗೆ ಜನಾರ್ದನ ರೆಡ್ಡಿ ಹೀಗಾ ಮಾತಾಡೋದು?

ಕಾಂಗ್ರೆಸ್ ಪ್ರಚಾರ ಮಾಡಿದ ರೀತಿ, ಜನಾರ್ದನ ರೆಡ್ಡಿ ಅವರ ಸಿದ್ದರಾಮಯ್ಯ ಪುತ್ರ ಹೇಳಿಕೆ, ಕಾಂಗ್ರೆಸ್ ಬಳಿ ಅತಿ ಹೆಚ್ಚಿನ ಶಾಸಕರು ಇರುವುದು, ಇಡೀ ಸರಕಾರವೇ ಬಳ್ಳಾರಿಯ ಪ್ರಚಾರದಲ್ಲಿ ಭಾಗಿಯಾಗಿದ್ದು ದೋಸ್ತಿಗಳಿಗೆ ಲಾಭ ತಂದುಕೊಟ್ಟಿದೆ.

ಶ್ರೀರಾಮುಲು ಅವರೊಬ್ಬರನ್ನೇ ನೆಚ್ಚಿಕೊಂಡಿದ್ದು, ಮತ್ತೆ ರೆಡ್ಡಿ ಕುಟುಂಬಕ್ಕೆ ಸಂಬಂಧಿಸಿದ್ದವರೆ ಅಭ್ಯರ್ಥಿಯಾಗಿದ್ದು, ಬಿಜೆಪಿ ನಾಯಕರ ನಿರ್ಲಕ್ಷ್ಯತನ ಬಿಜೆಪಿಯ ಬಳ್ಳಾರಿಯ ಸೋಲಿಗೆ ಕಾರಣವಾಗಿದೆ.

 

Follow Us:
Download App:
  • android
  • ios