ಬೆಂಗಳೂರು :  ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿರುವ ಲೋಕಸಭಾ ಹಾಗೂ ವಿಧಾನಸಭಾ ಉಪ ಚುನಾವಣೆಯಲ್ಲಿ ಇದೀಗ ಮೈತ್ರಿ ಪಕ್ಷಗಳಿಗೆ ಗೆಲುವು ಲಭ್ಯವಾಗಿದೆ. ರಾಜ್ಯದ ಐದು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಮೈತ್ರಿ ಪಕ್ಷಗಳ ಪಾಲಾಗಿವೆ. ಈ ಫಲಿತಾಂಶದಿಂದ ಮೖತ್ರಿ ಪಕ್ಷಗಳ ಸರ್ಕಾರಕ್ಕೆ ಇನ್ನಷ್ಟು ಬಲ ಸೇರಿದಂತಾಗಿದೆ. 

ಪ್ರಬಲ ಪೈಪೋಟಿಯ ಕ್ಷೇತ್ರವಾಗಿದ್ದ ಬಳ್ಳಾರಿಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 

 ಈ ಸಂಬಂಧ ಕಾಂಗ್ರೆಸ್ ಮುಖಂಡರು  ಜನರಿಗೆ ಏನು ಬೇಕೋ ಅದನ್ನು ಪಡೆಯುತ್ತಾರೆ.   ಉತ್ತಮ ಆಡಳಿತ ಹಾಗೂ ಪಾರದರ್ಶಕ ನಡೆಯನ್ನಷ್ಟೇ ಜನರು ಬಯಸುತ್ತಾರೆ ಎಂದು ಫಲಿತಾಂಶದ ಬಗ್ಗೆ ಹರ್ಷ ವಿಶ್ಲೇಷಣೆ ನೀಡಿದ್ದಾರೆ. 

ಅಲ್ಲದೇ ರಾಮಮಂದಿರ ನಿರ್ಮಾಣ ವಿಚಾರ ದಕ್ಷಿಣ ಭಾರತದ ಜನರ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಂದಿಗೂ ಕೂಡ ಜನರ ಭಾಗವಹಿಸುವಿಕೆ ಮುಖ್ಯವಾಗಿದ್ದು, ಈ ಚುನಾವಣಾ ಫಲಿತಾಂಶದಲ್ಲಿ ದೇಶಕ್ಕೆ ಸೂಚನೆಯೊಂದನ್ನು ನೀಡಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.