Asianet Suvarna News Asianet Suvarna News

ಭ್ರಷ್ಟ ಬಿಜೆಪಿಗರು ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಸ್ಪದ: ಶಾಸಕ ದರ್ಶನ್‌ ಧ್ರುವನಾರಾಯಣ್

ಬಿಜೆಪಿ ಸರ್ಕಾರದ ಅವಧಿಯಲ್ಲೇ ಪಿಎಸ್‌.ಐ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ನೀಟ್ ಹಗರಣ ಸೇರಿದಂತೆ ಅತಿ ಹೆಚ್ಚು ಹಗರಣಗಳು ನಡೆದಿವೆ. ಅಂತಹ ಭ್ರಷ್ಟ ಬಿಜೆಪಿಗರು ಇವತ್ತಿನ ದಿನ ರಸ್ತೆಯಲ್ಲಿ ನಿಂತು ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್ ಬಿಜೆಪಿ ವಿರುದ್ದ ಹರಿಹಾಯ್ದರು. 
 

It is ridiculous that corrupt BJP members are conducting a padayatre says darshan dhruvanarayana gvd
Author
First Published Aug 7, 2024, 9:47 PM IST | Last Updated Aug 8, 2024, 9:23 AM IST

ನಂಜನಗೂಡು (ಆ.07): ಬಿಜೆಪಿ ಸರ್ಕಾರದ ಅವಧಿಯಲ್ಲೇ ಪಿಎಸ್‌.ಐ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ನೀಟ್ ಹಗರಣ ಸೇರಿದಂತೆ ಅತಿ ಹೆಚ್ಚು ಹಗರಣಗಳು ನಡೆದಿವೆ. ಅಂತಹ ಭ್ರಷ್ಟ ಬಿಜೆಪಿಗರು ಇವತ್ತಿನ ದಿನ ರಸ್ತೆಯಲ್ಲಿ ನಿಂತು ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್ ಬಿಜೆಪಿ ವಿರುದ್ದ ಹರಿಹಾಯ್ದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜನಾಂದೋಲನ ಸಭೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

2023ರಲ್ಲಿ ಹಿಂಬಾಗಿಲಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿಜವಾದ ಹಗರಣಗಳು ನಡೆದಿರುವುದು, 2020ರ ಕೊರೋನಾ ಕಠಿಣ ಪರಿಸ್ಥಿತಿಯಲ್ಲಿ ಮಾಸ್ಕ್, ಪಿಪಿ ಕಿಟ್‌ ನಲ್ಲೂ ಕೂಡ ಬಿ.ಎಸ್. ಯಡಿಯೂರಪ್ಪ ಅವರು 40 ಸಾವಿರ ಕೋಟಿ ಹಗರಣ ನಡೆಸಿದ್ದಾರೆ. ಎಂಬುದನ್ನು ಸ್ವ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿಕೆ ನೀಡಿದ್ದಾರೆ. ಅಲ್ಲದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚಿನ ನಿಗಮಗಳ ಹಗರಣಗಳು ನಡೆದಿರುವುದು. ಅಂತಹ ಭ್ರಷ್ಟ ಬಿಜೆಪಿಗರು ರಸ್ತೆಯಲ್ಲಿ ನಿಂತು ಹೋರಾಟ ನಡೆಸುತ್ತಿರುವುದು ನಗೆಪಾಟಲು ಎಂದು ಲೇವಡಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಮಾರ್ಗದಲ್ಲಿ 24 ಗಂಟೆ ಸಂಚಾರ: ತುಸು ನಿರಾಳ, ಮುಂದಿದೆ ಕಳವಳ!

ಭೂಮಿ ಕಳೆದುಕೊಂಡವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲೇ, ಅವರದೇ ಪಕ್ಷದ ಮೂಡಾ ಅಧ್ಯಕ್ಷರು ಬದಲಿ ನಿವೇಶನ ನೀಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ? ಮೂಡಾ ನಿಗಮದಲ್ಲಿ ಅತಿ ಹೆಚ್ಚು ಜೆಡಿಎಸ್ ಮತ್ತು ಬಿಜೆಪಿಯವರೇ ಅಧ್ಯಕ್ಷರಾಗಿದ್ದಾರೆ. ಆದರೂ ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಶ್ನಿಸದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಶ್ನಿಸುವ ಹುನ್ನಾರವೇನಿದೆ? ಸಿದ್ದರಾಮಯ್ಯ ಅವರು ಸದಾ ಕಾಲ ದೀನ ದಲಿತರು, ರೈತರು, ಹಿಂದುಳಿದವರ ಪರವಾಗಿ ಕೆಲಸ ಮಾಡಿದ ಏಕೈಕ ನಾಯಕ ಅಲ್ಲದೆ ಕೊಟ್ಟ ಭರವಸೆಯನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದ ನಾಯಕ. ಅವರ ಜನಪ್ರಿಯತೆಯನ್ನು ಸಹಿಸದ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಬೇಕು ಎಂಬ ಹುನ್ನಾರದೊಂದಿಗೆ ಬಿಜೆಪಿಗರು ಮೈಸೂರು ಚಲೋ ಆಂದೋಲನ ಪ್ರಾರಂಭಿಸಿದ್ದಾರೆ.

ಅವರಿಗೆ ಸರಿಯಾದ ಪಾಠ ಕಲಿಸುವ ಮೂಲಕ ನಮ್ಮ ಭಾಗದ ಹೆಮ್ಮೆಯ ಮುಖ್ಯಮಂತ್ರಿಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಆದ್ದರಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇದೇ 9 ರಂದು ಜನಾಂದೋಲನ ಸಭೆಯನ್ನು ಏರ್ಪಡಿಸಲಾಗಿದೆ. ನಂಜನಗೂಡು ಕ್ಷೇತ್ರದಿಂದ 25 ಸಾವಿರ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಮೂಲಕ ಸಿದ್ದರಾಮಯ್ಯ ಪರವಾಗಿ ನಿಲ್ಲಬೇಕು ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್ ಮಾತನಾಡಿ, ಅಂದು ಮೈಸೂರು ಜಿಲ್ಲೆಯ ಎಲ್ಲ ಕ್ಷೇತ್ರಗಳಿಂದ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸೇರಿ ಜನಾಂದೋಲನ ಸಭೆ ನಡೆಸುವ ಮೂಲಕ ಬಿಜೆಪಿ ಹುನ್ನಾರಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ ಎಂದರು.

ಯುಜಿ ನೀಟ್: ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ, ಕೆಇಎ ಮೂಲಕವೇ ಹಂಚಿಕೆ

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠನಾಯಕ, ರಂಗಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಕೆ. ಮಾರುತಿ, ಲತಾ, ತಾಪಂ ಮಾಜಿ ಅಧ್ಯಕ್ಷ ನಾಗೇಶ್‌ ರಾಜ್, ಮುಖಂಡರಾದ ದಕ್ಷಿಣಮೂರ್ತಿ, ದೊರೆಸ್ವಾಮಿನಾಯಕ, ಎನ್.ಎಂ. ಮಂಜುನಾಥ್, ಮುದ್ದುಮಾದಶೆಟ್ಟಿ, ಪ್ರದೀಪ್‌ ಕುಮಾರ್, ಅಶೋಕ್, ಕಳಲೆ ರಾಜೇಶ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ಕೆಂಪಣ್ಣ ಇದ್ದರು.

Latest Videos
Follow Us:
Download App:
  • android
  • ios