Asianet Suvarna News Asianet Suvarna News

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಮಾರ್ಗದಲ್ಲಿ 24 ಗಂಟೆ ಸಂಚಾರ: ತುಸು ನಿರಾಳ, ಮುಂದಿದೆ ಕಳವಳ!

ಹೆಚ್ಚು ಕಡಿಮೆ ಕಳೆದ ಒಂದು ತಿಂಗಳಿಂದ ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿ ಪದೇ ಪದೆ ಬಂದ್ ಆಗುತ್ತಿದ್ದ ಹಾಸನ-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ಸಂಚಾರ ಮೊದಲಿನ ಸ್ಥಿತಿಗೆ ಮರಳಿದೆ.
 

24 hours open on shiradi ghat route of National Highway 75 gvd
Author
First Published Aug 7, 2024, 9:12 PM IST | Last Updated Aug 8, 2024, 9:53 AM IST

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ (ಆ.07): ಹೆಚ್ಚು ಕಡಿಮೆ ಕಳೆದ ಒಂದು ತಿಂಗಳಿಂದ ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿ ಪದೇ ಪದೆ ಬಂದ್ ಆಗುತ್ತಿದ್ದ ಹಾಸನ-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ಸಂಚಾರ ಮೊದಲಿನ ಸ್ಥಿತಿಗೆ ಮರಳಿದೆ. ಹೌದು! ರಾಷ್ಟ್ರೀಯ ಹೆದ್ದಾರಿ 75ರಲ್ಲೀಗ ದಿನದ 24 ಗಂಟೆಯೂ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 

ಶಿರಾಡಿ ಮಾರ್ಗದ ಹೆದ್ದಾರಿಯನ್ನು ನಾಲ್ಕು ಪಥವಾಗಿ ಅಗಲೀಕರಣ ಮಾಡಲು ಹಲವು ಕಡೆ ರಸ್ತೆ ಪಕ್ಕದ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕೊರೆಯಲಾಗಿದೆ.  ಅದರಲ್ಲೂ ದೊಡ್ಡತಪ್ಪಲು ಬಳಿ 90 ಡಿಗ್ರಿ ಮಾದರಿ ಗುಡ್ಡಗಳನ್ನು ನೇರವಾಗಿ ಭಾಗ ಮಾಡಿರುವುದು, ಇದರಿಂದ ಭೂಮಿ ಸಡಿಲವಾಗಿ ಪದೇ ಪದೆ ಗುಡ್ಡ ಕುಸಿಯಲು ಕಾರಣವಾಗಿದೆ ಎಂಬುದನ್ನು ಸ್ವತಃ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯರನ್ನು ಕಂಡರೆ ಬಿಜೆಪಿಯವರಿಗೆ ಭಯ: ಶಾಸಕ ಎ.ಆರ್.ಕೃಷ್ಣಮೂರ್ತಿ

ಮಳೆಯದ್ದೇ ದೊಡ್ಡ ಚಿಂತೆ: ಕಳೆದ ಎರಡು-ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಗಣನೀಯವಾಗಿ ಕಡಿಮೆಯಾಗಿದೆ.  ಹಾಗೆಯೇ ಭೂ ಕುಸಿತ ಪ್ರಮಾಣವೂ ತಗ್ಗಿದೆ. ಹಾಗಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಲಹೆ, ಮಾರ್ಗದರ್ಶನದ ಪಡೆದು ದಿನದ ೨೪ ಗಂಟೆಯೂ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ.ಎಂ.ಎನ್.ಶ್ರುತಿ ತಿಳಿಸಿದ್ದಾರೆ. ದೊಡ್ಡತಪ್ಪಲು ಬಳಿ ಭಾರೀ ಪ್ರಮಾಣದಲ್ಲಿ ಕುಸಿದಿದ್ದ ಗುಡ್ಡದ ಮಣ್ಣನ್ನು ಸಂಪೂರ್ಣ ತೆರವು ಮಾಡಲಾಗಿದೆ. 

ಹಾಗೆಯೇ ಆ ನಿರ್ದಿಷ್ಟ ಪ್ರದೇಶದಲ್ಲಿ ರಸ್ತೆಯನ್ನೂ ಕೊಂಚ ಅಗಲೀಕರಣ ಮಾಡಲಾಗಿದೆ. ಇದರಿಂದಾಗಿ ಎಲ್ಲಾ ವಾಹನಗಳೂ ಈ ಮೂಲಕವೇ ಸಂಚಾರ ಮಾಡಬಹುದು ಎಂದರು. ಕಣ್ಣಾಮುಚ್ಚಾಲೆ ಆಟದಂತೆ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದ ಕಾರಣ, ದೊಡ್ಡತಪ್ಪಲು ಬಳಿ ಪದೇ ಪದೆ ಭೂ ಕುಸಿತ ಉಂಟಾಗಿ, ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಹಲವು ವಾಹನಗಳ ಮೇಲೂ ಮಣ್ಣು ಕುಸಿದಿತ್ತು. ರಾತ್ರಿ ಕುಸಿದ ಮಣ್ಣನ್ನು ವಿಲೇವಾರಿ ಮಾಡಿದರೂ ಬೆಳಗ್ಗೆ ಮತ್ತೆ ಕುಸಿಯುತ್ತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. 

ವಿವಿಧ ವಾಹನ ಚಾಲಕರು ಮಾರ್ಗ ಮಧ್ಯೆಯೇ ನಿಂತು ವನವಾಸ ಅನುಭವಿಸಿದ್ದರು. ಎಷ್ಟೋ ಮಂದಿ ವಾಹನಗಳಲ್ಲೇ ಅಡುಗೆ ಮಾಡಿಕೊಂಡು ರಾತ್ರಿ-ಹಗಲು ಕಳೆದಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ವಾಹನ ಹೊರತು ಪಡಿಸಿ ಸಣ್ಣ ಸಣ್ಣ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇತ್ತೀಚೆಗೆ ಮಳೆಯ ಪ್ರಮಾಣ ಬಹುತೇಕ ಕಡಿಮೆಯಾಗಿರುವುದರಿಂದ ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. 

ಬೈಕ್‌ನಲ್ಲಿ ಬರುವ ವೇಳೆ ಸಿನಿಮಿಯ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಸಿಗ್ನಲ್‌ನಲ್ಲಿ ಹಿಡಿದ ಪೊಲೀಸ್ ಪೇದೆ!

ರಾತ್ರಿ-ಹಗಲು ಕಾರು, ಬಸ್ಸು ಸೇರಿ ಎಲ್ಲಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಂತರವೂ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ತಂಡ ಸ್ಥಳದಲ್ಲೇ ಇರಲು ಸೂಚಿಸಲಾಗಿದೆ. ಪೊಲೀಸ್ ಅಧಿಕಾರಿಗಳು, ಎನ್‌ಹೆಚ್‌ಎಐ ತಂಡ ಸಹ ದಿನದ ೨೪ ಗಂಟೆಯೂ ಸ್ಥಳದಲ್ಲಿದ್ದು, ಆಗು-ಹೋಗುಗಳ ಬಗ್ಗೆ ಗಮನ ಹರಿಸಲಿದೆ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಶೃತಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios