ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೊಪ್ಪ ಹೋಬಳಿಯಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶಾಸಕ ಸುರೇಶ್‌ಗೌಡ ಹಾಗೂ ಮುಖಂಡರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. 

ಮದ್ದೂರು (ಸೆ.19): ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೊಪ್ಪ ಹೋಬಳಿಯಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶಾಸಕ ಸುರೇಶ್‌ಗೌಡ ಹಾಗೂ ಮುಖಂಡರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ನಂತರ ಕಡೆಗಣಿಸಿರುವ ಬಗ್ಗೆ ಮುಖಂಡರು ಶಾಸಕ ಸುರೇಶ್‌ಗೌಡ ವಿರುದ್ಧ ದೂರು ನೀಡಿದರು.

ಕೊಪ್ಪ ಹೋಬಳಿಯಲ್ಲಿ ಹಿಂದಿನಿಂದಲೂ ಜೆಡಿಎಸ್‌ ಸಂಘಟನೆಗೆ ದುಡಿದ ಹಿರಿಯ ನಾಯಕರನ್ನು ಶಾಸಕ ಸುರೇಶ್‌ಗೌಡ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಡೆಗಣಿಸುತ್ತಿದ್ದಾರೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೋಬಳಿಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಮುಖಂಡರನ್ನು ಸಮಧಾನ ಪಡಿಸಿದ ನಿಖಿಲ್‌, ಹೋಬಳಿ ಮುಖಂಡರು ಹಾಗೂ ಶಾಸಕ ಸುರೇಶ್‌ಗೌಡರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಶೀಘ್ರದಲ್ಲೆ ಉಭಯ ನಾಯಕರ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Mandya: ಡಿ.ಕೆ.ಶಿವಕುಮಾರ್‌​-ನಿಖಿಲ್‌ ಕುಮಾರಸ್ವಾಮಿ ಪರಸ್ಪರ ಮುಖಾಮುಖಿ

ಮಂಡ್ಯ ಜಿಲ್ಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮದಿಂದ 6 ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರು ಆಯ್ಕೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮತ್ತೊಮ್ಮೆ ಜೆಡಿಎಸ್‌ ಗೆಲ್ಲುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಆಶೀರ್ವಾದ ಮಾಡಲು ಶ್ರಮಿಸಬೇಕು ಎಂದರು. ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಾಧ್ಯಕ್ಷ ಚಿಕ್ಕೋನಹಳ್ಳಿ ತಮ್ಮಯ್ಯ, ತಾಪಂ ಉಪಾಧ್ಯಕ್ಷ ಎಚ್‌ .ಡಿ.ರಾಮಚಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಆಬಲವಾಡಿ ಸುರೇಶ್‌, ಮುಖಂಡರಾದ ಕೋಟಿ ರಾಮಲಿಂಗಯ್ಯ, ಮಲ್ಲಿಗೆರೆ ರಮೇಶ್‌ ಇದ್ದರು.

2023ನೇ ಚುನಾವಣೆ ನಮ್ಮ ಪಾಲಿಗೆ ಕೊನೆಯ ಚುನಾವಣೆ: ಮುಂಬರುವ 2023ನೇ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆಯ ಚುನಾವಣೆ ಎನ್ನುವ ಮೂಲಕ ನಿಖಿಲ್‌ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಕುಣಿಗಲ್‌ ತಾಲೂಕು ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯದಲ್ಲಿ ತಾಲೂಕು ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮುಂದಿನ 25 ವರ್ಷಗಳ ಕಾಲ ಜೆಡಿಎಸ್‌ ಹೊಸ ಅಧ್ಯಾಯ ಪ್ರಾರಂಭಿಸಬೇಕು ಎಂದ ಅವರು ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. 

ಬಿಜೆಪಿಯಿಂದ ಕರ್ನಾಟಕ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ: ಡಿ.ಕೆ.ಶಿವಕುಮಾರ್‌

ನಮ್ಮ ತಂದೆ ಉಳಿದಿದ್ದೆ ಹೆಚ್ಚು ಎಂದ ನಿಖಿಲ್‌ ಅವರು ನಮ್ಮ ತಂದೆಯನ್ನು ಉಳಿಸಿರುವುದು ಆ ಭಗವಂತ. ನಿಮ್ಮೆಲ್ಲರ ಆಶೀರ್ವಾದದಿಂದ ರೈತರ ಜೀವನವನ್ನು ಹಸನಗೊಳಿಸಬೇಕು. ಹೀಗಾಗಿ ಕುಮಾರಣ್ಣನಿಗೆ ಏನು ಆಗಬಾರದು ಎಂಬ ಕಾರಣದಿಂದ ಅವರ ಆರೋಗ್ಯ ಸುಧಾರಣೆಗಾಗಿ ಹೆಣ್ಣು ಮಕ್ಕಳು ಮನೆಗಳಲ್ಲಿ ದೀಪ ಹಚ್ಚಿದ್ದಾರೆ ಎಂದರು. ದೇವೇಗೌಡರಿಗೆ 89 ವರ್ಷ ವಯಸ್ಸಾಗಿದೆ. ಕಳೆದ ಎರಡೂವರೆ ತಿಂಗಳಿಂದ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳಲಿಲ್ಲ. ಹಲವು ಕಾರ್ಯಕರ್ತರಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಯಾಗಿತ್ತು ಎಂದ ಅವರು ದೇವೇಗೌಡರು ನಮ್ಮ ಜೊತೆ ನೂರಾರು ವರ್ಷಗಳ ಕಾಲ ಬದುಕುತ್ತಾರೆ ಎಂದರು.