ಪ್ರಧಾನಿ ಮೋದಿ ಕಳೆದ ಬುಧವಾರ ರಾಜ್ಯಕ್ಕೆ ಆಗಮಿಸಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನೋ ಗುಟ್ಟು ಹೇಳುತ್ತಿರುವಂತಹ ಫೋಟೋಗಳು ವೀಡಿಯೋಗಳು ಭಾರಿ ವೈರಲ್ ಆಗಿದ್ದವು. ಆದರೆ ಈಗ ಪಿಎಂ ತಮ್ಮ ಕಿವಿಯಲ್ಲಿ ಹೇಳಿದ್ದೇನು ಎಂಬುದನ್ನು ಸಿಎಂ ರಿವೀಲ್ ಮಾಡಿದ್ದಾರೆ.

ಮೋದಿ ಹೇಳಿದ ಗುಟ್ಟು ರಟ್ಟು ಮಾಡಿದ ಸಿಎಂ

ಮೈಸೂರು: ಪ್ರಧಾನಿ ಮೋದಿ ಕಳೆದ ಬುಧವಾರ ಅಂದರೆ ಏಪ್ರಿಲ್ 16ರಂದು ರಾಜ್ಯಕ್ಕೆ ಆಗಮಿಸಿದ್ದರು. ಆದಿಚುಂಚನಗಿರಿ ಮಠದ ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆಗಾಗಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನೋ ಗುಟ್ಟು ಹೇಳುತ್ತಿರುವಂತಹ ಫೋಟೋಗಳು ವೀಡಿಯೋಗಳು ಭಾರಿ ವೈರಲ್ ಆಗಿದ್ದವು. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಬಳಿ ಇಷ್ಟು ಗುಟ್ಟಾಗಿ ಏನು ಹೇಳಿರಬಹುದು ಎಂಬ ಕುತೂಹಲ ಅನೇಕರಲ್ಲಿ ಇತ್ತು. ಆದರೆ ಈಗ ಸಿಎಂ ಸಿದ್ದರಾಮಯ್ಯ ಜನರ ಕುತೂಹಲವನ್ನು ತಣಿಸಿದ್ದಾರೆ. ಮೋದಿ ತಮ್ಮ ಕಿವಿಯಲ್ಲಿ ರಹಸ್ಯವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿಯವರು ಮಹಿಳಾ ಮೀಸಲಾತಿ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂದು ನನ್ನ ಕಿವಿಯಲ್ಲಿ ಕೇಳಿದರು ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಹೇಳಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಹೇಳಿದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಶಾಸಕ ಹ್ಯಾರಿಸ್ ನಿವಾಸವೂ ಸೇರಿದಂತೆ 17 ಕಡೆಗಳಲ್ಲಿ ಇಡಿ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರ ನನಗೆ ಗೊತ್ತಿಲ್ಲ ಎಂದರು. ಪಂಚರಾಜ್ಯ ಚುನಾವಣೆ ವಿಚಾರ‌ ನಾನು ತಮಿಳುನಾಡಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಗೆಲ್ಲಬಹುದು. ಬಿಜೆಪಿಯವರು ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಗ್ಯಾರೆಂಟಿಗಳನ್ನ ನಕಲು ಮಾಡಿಕೊಂಡಿದ್ದಾರೆ. ನಮ್ಮ ಗ್ಯಾರೆಂಟಿಗಳನ್ನ ಮೊದಲು ಬಿಜೆಪಿ ವಿರೋಧ ಮಾಡುತ್ತಿತ್ತು. ಈಗ ಅದನ್ನ ಅವರೇ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಸತ್ತ ಮೇಲೆ ಸಿಕ್ಕಿಬಿದ್ದ ಕಿಲಾಡಿ ಪ್ರೇಮಿ: ಶವಸಂಸ್ಕಾರದ ವೇಳೆ ಇಬ್ಬರು ಪ್ರೇಯಸಿಯರ ಮಧ್ಯೆ 'ಗ್ರೇಟ್ ಫೈಟ್'

ಮಹಿಳಾ‌ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರುದ್ಧ ಇಲ್ಲ. ಆದರೆ ಕ್ಷೇತ್ರ ಪುನರ್‌ವಿಂಗಡಣೆ ವಿಚಾರವಾಗಿ ಮಾತ್ರ ನಮ್ಮ ತಕರಾರು ಇದೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಮೀಸಲಾತಿ ಜಾರಿಯ ಬದ್ಧತೆ ಬಿಜೆಪಿಗೆ ಇಲ್ಲ. ವಿಧೇಯಕದ ವಿಚಾರದಲ್ಲಿ ಸುಳ್ಳು ಹೇಳುತ್ತಾ ರಾಜಕಾರಣ ಮಾಡುತ್ತಿದೆ. 2023ರಲ್ಲಿ ಈ ಮೀಸಲಾತಿ ವಿಧೇಯಕ ಇತ್ತು. ಅದನ್ನು ಅವತ್ತೇ ಯಾಕೆ ಜಾರಿ ಮಾಡಬಾರದಿತ್ತು. ಈಗ ಕ್ಷೇತ್ರ ಪುನರ್ ವಿಗಂಡಣೆ ವಿಚಾರದಲ್ಲಿ ಯಾಕೆ ಅದನ್ನುನ್ನ ತಳಕು ಹಾಕಿದ್ರು. ಹೊಸ ಜನಗಣತಿ ಪ್ರಕಾರ ಕ್ಷೇತ್ರ ಪುನರವಿಂಗಡಣೆಯಾಗಬೇಕು. ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆ ಕ್ಷೇತ್ರ ಪುನರವಿಂಗಡಣೆಗೆ ಮುಖ್ಯ. ಹಳೇಯ ಜನಗಣತಿ ಪ್ರಕಾರ ಆದ್ರೆ ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿಯೇ ಇಲ್ಲ. ನಾವು ಇಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. ನಮಗೆ ಇಲ್ಲಿ ಇದರಿಂದ ಅನ್ಯಾಯ ಆಗಬಾರದು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಚಲಿಸುತ್ತಿದ್ದ ಬೊಲೆರೊಗೆ ಬೆಂಕಿ: ನಡುರಸ್ತೆಯಲ್ಲಿ ಬೊಲೆರೋ ಧಗಧಗ