ಪ್ರಧಾನಿ ಮೋದಿ ಅವರಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಬಿಎಸ್‌ವೈ ಹೆಸರು ಮರೆತ್ರಾ ಸಿಎಂ ಬೊಮ್ಮಾಯಿ
ನಾನು ಬಯಸಿ ಸಿಎಂ ಆಗಿಲ್ಲ, ನರೇಂದ್ರ ಮೋದಿ ಅವರಿಂದ ನಾನು ಸಿಎಂ ಆಗಿದ್ದೇನೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹೆಸರೇ ಮರೆತಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ಫೆ.09): ನಾನು ಬಯಸಿ ಸಿಎಂ ಆಗಿಲ್ಲ, ನರೇಂದ್ರ ಮೋದಿ ಅವರಿಂದ ನಾನು ಸಿಎಂ ಆಗಿದ್ದೇನೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹೆಸರೇ ಮರೆತಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಆಕ್ರೋಶಭರಿತವಾಗಿ ಭಾಷಣ ಆರಂಭಿಸಿದ ಸಿಎಂ ಎಸ್ಸಿ ಎಸ್ಟಿಗಳಿಗೆ ಮೀಸಲಾತಿ ನೀಡಲಾಗಿದೆ.
ಇದು ಕಲಿಯುಗದಲ್ಲಿ ಇದೊಂದು ಪರಿವರ್ತನೆ ಆಗುತ್ತದೆ. ಏಕಲವ್ಯ ಹೇಗೆ ಹೆಬ್ಬೆಟು ಕೊಟ್ಟ ಹಾಗೇ ಪ್ರಸಂಗ ಬಂದ್ರೆ ನಾನು ಅಂತಹ ತ್ಯಾಗ ಮಾಡುತ್ತೇನೆ. ಈಗಾಗಲೇ ಹೊಸ ಮೀಸಲಾತಿ ನೀತಿ ಜಾರಿಗೆ ಬರಲಿದೆ. ಅದರ ಆದೇಶ ಪ್ರತಿಯನ್ನ ಸ್ವಾಮೀಜಿ ಗೆ ತೊರಿಸಿದ್ದೇವೆ. ಮೀಸಲಾತಿ ವಿಚಾರ ಒಂಬತ್ತನೇ ಪರಿಚ್ಛೇದ ದಲ್ಲಿ ಸೇರಿಸುವ ಪ್ರಕ್ರಿಯೇ ಆರಂಭವಾಗಿದೆ. ಪರಿಶಿಷ್ಟರಿಗೆ 75 ಯೂನಿಟ್ ವಿದ್ಯುತ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ಮೇಲೆ ಪ್ರಧಾನಿಗೆ ಅಪಾರ ಗೌರವವಿದೆ.
ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸುವಲ್ಲಿ ಸಿ.ಟಿ.ರವಿ ಪಾತ್ರವೂ ಇದೆ: ಹೆಚ್‌ಡಿಕೆ ಅಪ್ತ ಭೋಜೇಗೌಡ ಆರೋಪ
ರಾಷ್ಟ್ರಪತಿಯಂತ ಹುದ್ದೆಯನ್ನ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮುರವರಿಗೆ ನೀಡಿದ್ದಾರೆ. ನಾನು ಒಂದು ರೀತಿ ವಾಲ್ಮೀಕಿ ಸಮಾಜ ನನ್ನ ಸಮಾಜ ಇದ್ದಂತೆ. ನನ್ನ ಜೀವನದ ಕೊನೆಯ ಉಸಿರು ಇರುವ ತನಕ ವಾಲ್ಮೀಕಿ ಸಮಾಜದ ಹಿತಕ್ಕಾ ಕೆಲ್ಸಾ ಮಾಡುತ್ತೇನೆ ಎಂದರು ವಾಲ್ಮೀಕಿ ಜಾತ್ರೆಗೆ ಒಂದು ದೊಡ್ಡ ಶಕ್ತಿ ಬಂದಿದ್ದು, ವಾಲ್ಮೀಕಿ ಸಮಾಜವನ್ನ ಯಾರು ಅಲಿಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ, ವಿಜಯ ನಗರದ ಸಾಮ್ರಾಜ್ಯವನ್ನ ರಕ್ಷಣೆ ಮಾಡಿದ್ದು ವಾಲ್ಮೀಕಿ ಸಮಾಜದ ಹಕ್ಕಬುಕ್ಕರವರು, ಹೈದರಾಲಿಗೆ ಸೈನ್ಯ ಹಿಮ್ಮೆಟ್ಟಿಸಿ ಬುದ್ದಿ ಕಲಿಸಿದ್ದು ಮದರಕರಿನಾಯಕ. ವಾಲ್ಮೀಕಿ ಅಂದ್ರೆ ಪರಿವರ್ತನೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು: ನಮಗೆ ಬೇರೆಯವರ ರೀತಿ ಮಾತಿನಲ್ಲಿ ಮರಳು ಮಾಡಲು ಬರುವುದಿಲ್ಲ, ಏಕಲವ್ಯನ ರೀತಿ ಕೆಲಸ ಮಾಡಲು ನಾವು ಸಿದ್ದರಿದ್ದೇವೆ, ನೀವು ಮೊದಲನೇ ಹೆಜ್ಜೆಯೇ ಇಡಲಿಲ್ಲ ಇನ್ನು ಮೀಸಲಾತಿ ಎಲ್ಲಿಂದ ಕೊಡ್ತೀರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಮೀಸಲಾತಿ ವಿಚಾರವಾಗಿ ತಿರುಗೇಟು ನೀಡಿದರು. ನೀವು ಇದ್ದಾಗ ಮೀಸಲಾತಿ ಹೆಚ್ಚಳ ಮಾಡಿದ್ರೆ ಇಷ್ಟೋತ್ತಿಗೆ ಷಡ್ಯೂಲ್ 9ಗೆ ಸೇರಿಸಬಹುದಿತ್ತು. ಜನವರಿ 10 ರಿಂದ ಮುಂಬರುವ ದಿನಗಳಲ್ಲಿ ಶಿಕ್ಷಣದಲ್ಲಿ ಮೀಸಲಾತಿ ನೀಡಲು ಆದೇಶ ಮಾಡಿದ್ದೇನೆ.
ಗಂಡ ಹೆಂಡತಿ ನಡುವೆ ಅನೈತಿಕ ಸಂಬಂಧಕ್ಕೆ ಗಲಾಟೆ: ಮನೆ ಬಳಿ ಹೋಗಿ ಎರಡನೇ ಹೆಂಡತಿ ಸೀಮಂತ ವೇಳೆ ಹೊಡೆದಾಟ
ಬರುವ ದಿನಗಳಲ್ಲಿ ನೇಮಕಾತಿಗಳು ಹೊಸಾ ಮೀಸಲಾತಿಯಿಂದ ಆಗುತ್ತದೆ, ಮೀಸಲಾತಿ ಅಷ್ಟೇ ಅಲ್ಲ, ಪ್ರತ್ಯೇಕ ಇಲಾಖೆ ಮಾಡಿ ಎಂದರು. ವಾಲ್ಮೀಕಿ ಪ್ರತ್ಯೇಕ ಇಲಾಖೆ ಮಾಡುವ ನಿರ್ಧಾರವನ್ನು ನಾವು ಮಾಡಿದ್ದೆವೆ ಎಂದರು ಇನ್ನು ಸುದೀಪ್ ನಮ್ಮ ಹುಡುಗ ಈ ಸಮಾಜದ ಆಶಾಕಿರಣ. ನಿಮಗೆ ಸುದೀಪ್ ನನಗೆ ಅವನು ದೀಪು ಎಂದು ನೆರೆದಿದ್ದ ಪ್ರೇಕ್ಷಕರಿಗೆ ಸುದೀಪ್ ಕುರಿತು ನೆನಪು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ತಮಗೆ ನೀಡಿದ ಬೆಳ್ಳಿ ಗಧೆಯನ್ನು ವಾಲ್ಮೀಕಿ ಶ್ರೀಗಳಿಗೆ ವಾಪಸ್ ನೀಡಿದರು.