ಗಂಡ ಹೆಂಡತಿ ನಡುವೆ ಅನೈತಿಕ ಸಂಬಂಧಕ್ಕೆ ಗಲಾಟೆ: ಮನೆ ಬಳಿ ಹೋಗಿ ಎರಡನೇ ಹೆಂಡತಿ ಸೀಮಂತ ವೇಳೆ ಹೊಡೆದಾಟ
ಅವರಿಬ್ಬರು ಹೆತ್ತವರು ನೋಡಿದ್ದವರನ್ನೇ ಒಪ್ಪಿ ಮದುವೆಯಾಗಿದ್ರು. ಮದುವೆಯ ಬಳಿಕ ಅವಳ ಮೇಲೆ ಇವನಿಗೆ ಇವಳ ಮೇಲೆ ಅವನಿಗೆ ಅನುಮಾನ ಶುರುವಾಗಿತ್ತು. ಸಪ್ತಪದಿಯ ಅರ್ಥ ತಿಳಿಯದ ಅವಿವೇಕಿಗಳಂತೆ ಕಿತ್ತಾಡಿ ದೂರವಾಗಿದ್ದರು.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಫೆ.09): ಅವರಿಬ್ಬರು ಹೆತ್ತವರು ನೋಡಿದ್ದವರನ್ನೇ ಒಪ್ಪಿ ಮದುವೆಯಾಗಿದ್ರು. ಮದುವೆಯ ಬಳಿಕ ಅವಳ ಮೇಲೆ ಇವನಿಗೆ ಇವಳ ಮೇಲೆ ಅವನಿಗೆ ಅನುಮಾನ ಶುರುವಾಗಿತ್ತು. ಸಪ್ತಪದಿಯ ಅರ್ಥ ತಿಳಿಯದ ಅವಿವೇಕಿಗಳಂತೆ ಕಿತ್ತಾಡಿ ದೂರವಾಗಿದ್ದರು. ಹುಡುಗನ ಮನೆಯಲ್ಲಿ ನಡೆದ ಅದೊಂದು ಶುಭಕಾರ್ಯ ಅನುಮಾನಕ್ಕೆ ಮದ್ದು ಅರೆದು ಕೈ ಕೈ ಮಿಲಾಯಿಸುವಂತಾಗಿತ್ತು.ನಗರದ ಬಾಗಲೂರು ನಿವಾಸಿ ಚೈತ್ರಾ ಮದುವೆಯಾಗಿದ್ದು, ಚಂದ್ರಲೇಔಟ್ ನಿವಾಸಿ ತೇಜಸ್ ಅನ್ನ. ಮದುವೆಯಾಗುವಾಗ ಇದ್ದ ಜೋಶ್ ಫಸ್ಟ್ ನೈಟ್‌ನಲ್ಲೇ ಹೋಯ್ತು ಅನ್ನೋ ಆರೋಪ ಪ್ರತ್ಯಾರೋಪಗಳು.
ನವ ದಂಪತಿಗಳಿಬ್ಬರಿಗೂ ಮದುವೆಗೂ ಮುನ್ನವೇ ಲವರ್ಸ್ ಇದ್ದರು ಅಕ್ರಮ ಸಂಬಂಧವಿತ್ತು ಅನ್ನೋ ಆರೋಪಗಳು. ಮದುವೆಯ ಬಳಸಿದ ಸಂಬಂಧ ಕೇಸ್‌ಗಳ ನಡುವೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ನಡುವೆ ತೇಜಸ್ ಮೊದಲ ಪತ್ನಿಯನ್ನು ಬಿಟ್ಟು ಲೇಖಶ್ರೀ ಎಂಬಾಕೆಯನ್ನು ಮದುವೆಯಾಗಿದ್ದ. ಆಕೆ ತುಂಬು ಗರ್ಭಿಣಿ. ಚಂದ್ರಲೇಔಟ್ ನಿವಾಸದಲ್ಲಿ ಸೀಮಂತ ಕಾರ್ಯ ನಡೆಯುತ್ತಿದೆ ಎಂಬ ವಿಚಾರ ಮೊದಲ ಪತ್ನಿ ಚೈತ್ರಗೆ ತಿಳಿಯುತ್ತೆ. ಚೈತ್ರ ಮಹಿಳಾ ಸಂಘಟನೆಯ ಸಹಾಯ ಪಡೆದು ತೇಜಸ್ ಮನೆಗೆ ಬಂದಿದ್ದಾಳೆ. ಅಷ್ಟೇ ಮನೆಯೇ ರಣಾಂಗಣವಾಗಿ ಪರಿವರ್ತನೆಯಾಗಿದೆ. ತನ್ನ ಪತಿ ನನಗೆ ಮೋಸ ಮಾಡಿದ್ದಾನೆ.
ಮಡಿಕೇರಿಯಲ್ಲಿ ಕಾವೇರಿ ವಸ್ತ್ರಸಿರಿ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ!
ಅದು ಸೀಮಂತ ಕಾರ್ಯವೇ ನನ್ನ ಮೇಲೆ ನನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಚೈತ್ರ ಮಾಡುತ್ತಿದ್ದಾರೆ. ಇನ್ನು ಇದೇನಪ್ಪಾ ಮೊದಲ ಪತ್ನಿ ಇದ್ದಾಳೆ. ಎರಡನೇ ಮದುವೆಯಾಗಿದ್ಯಾ. ಸೀಮಂತ ನಡೆಯುತ್ತಿದೆ ಅಂತ ತೇಜಸ್ ಕೇಳಿದ್ರೆ ಆತ ಚೈತ್ರ ಹೇಳೋದು ಸುಳ್ಳು. ಆಕೆಗೆ ಬಾಯ್ ಫ್ರೆಂಡ್ ಇದ್ದಾನೆ. ನಾನು ಹೆಂಡತಿ ಬೇಕು ಅಂತ ಕೋರ್ಟ್‌ಗೆ ಹೋಗಿದ್ದೆ. ನ್ಯಾಯಾಲಯದಲ್ಲಿ 40 ಲಕ್ಷ ಪರಿಹಾರ ಕೇಳಿದ್ಲು ಅಷ್ಟು ಕೊಡಲು ಸಾಧ್ಯವಿಲ್ಲ ಎಂದಿದ್ದೆವು. ಇದಕ್ಕೆ ತಂಗಿ ಮಗಳ ಬರ್ತ್ ಡೇ ಕಾರ್ಯಕ್ರಮ ಮಾಡುವ ವೇಳೆ ಏಕಾಏಕಿ ಮಹಿಳೆಯರು ರೌಡಿಪಟಾಲಂ ಜೊತೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಫೆ.10ರಂದು ಯಾದಗಿರಿಗೆ ಪ್ರಜಾಧ್ವನಿ ಯಾತ್ರೆ ಆಗಮನ: ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ 'ಸಿದ್ಧು' ಅಸ್ತ್ರ!
ತನ್ನ ಪತ್ನಿ ನನ್ನ ಮೇಲೆ ಮಾಡುತ್ತಿರುವ ಆರೋಪ ಸುಳ್ಳು ಎನ್ನುತ್ತಿದ್ದಾರೆ. ಇನ್ನು ಈ ಸೋಶಿಯಲ್ ಮೀಡಿಯಾದ ಇನ್ಸ್ಟಾ, ಫೇಸ್ಬುಕ್, ವಾಟ್ಸ್ ಅಪ್ ನಲ್ಲಿ ಸಿಕ್ಕಿರೋ ಎವಿಡೆನ್ಸ್ ಒಬ್ಬರ ಮೇಲೆ ಇನ್ನೋಬ್ಬರು ಅನುಮಾನ ಪಡಲು ಪುಷ್ಟಿ ನೀಡಿವೆ. ಸದ್ಯ ಚಂದ್ರಲೇಔಟ್ ಪೊಲೀಸರಿಗೆ ಚೈತ್ರ ಮತ್ತು ತೇಜಸ್ ತಂದೆ ಕೃಷ್ಣಪ್ಪ ದೂರನ್ನು ನೀಡಿದ್ದಾರೆ. ಅದೇನಾದ್ರು ಚಂದದ ಸಂಸಾರ ನಡೆಸಬೇಕಾದವರು ಜೀವನವನ್ನು ಹಾಳುಮಾಡಿಕೊಂಡಿರುವುದಲ್ಲದೇ ಪದೇ ಪದೇ ಕಿರಿಕ್ ಮಾಡಿಕೊಳ್ಳುತ್ತ ಠಾಣೆಯ ಮೆಟ್ಟಿಲೇರುತ್ತಿರೋದು ದುರಂತವೇ ಸರಿ.