ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸುವಲ್ಲಿ ಸಿ.ಟಿ.ರವಿ ಪಾತ್ರವೂ ಇದೆ: ಹೆಚ್‌ಡಿಕೆ ಅಪ್ತ ಭೋಜೇಗೌಡ ಆರೋಪ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಯಲ್ಲಿ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಬಿಗ್ ಝೀರೋ ಎಂದು ವಿಧಾನಪರಿಷತ್‌ನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.

JDS Leader SL Bhojegowda Hits Back CT Ravi At Chikkamagaluru gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.09): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಯಲ್ಲಿ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಬಿಗ್ ಝೀರೋ ಎಂದು ವಿಧಾನಪರಿಷತ್‌ನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ದೂರ ಇಟ್ಟರೆ ಬಿಜೆಪಿ 40 ಸ್ಥಾನಕ್ಕೆ ಹೋಗಲಿದೆ. ಈ ಭಯ ಬಿಜೆಪಿಗೆ ಕಾಡುತ್ತಿದೆ ಎಂದರು.

ಸಿ.ಟಿ.ರವಿಗೆ ಟಾಂಗ್: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು, ನನಗೆ ವೋಟ್ ಕೊಡಿ ಎಂದು ಕೇಳಿದ್ರಿ, ಅವರನ್ನು ಜೈಲಿಗೆ ಕಳುಹಿಸುವಲ್ಲಿ ನಿಮ್ಮ ಪಾತ್ರವೂ ಇದೆ. ಇದನ್ನು ಲಿಂಗಾಯಿತ ಸಮುದಾಯ ಮರೆತಿಲ್ಲ ಎಂದು ಶಾಸಕ ಸಿ.ಟಿ. ರವಿ ಅವರಿಗೆ ಟಾಂಗ್ ಕೊಟ್ಟರು.ಯಡಿಯೂರಪ್ಪರವರ ಆರೋಗ್ಯ ಸರಿ ಇಲ್ಲ, ಅವರಿಗೆ ನಡೆದಾಡಲು ಆಗೋದಿಲ್ಲ, ಕಿವಿಗೆ ಕೇಳಿಸುವುದಿಲ್ಲ ಎಂದು ಕೋರ್ ಕಮಿಟಿ ಗಮನಕ್ಕೆ ತಂದು ಹುನ್ನಾರ ನಡೆಸಿ ಅವರನ್ನು ಕೆಳಗೆ ಇಳಿಸಲಾಯಿತು ಎಂದ ಅವರು, ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡದೆ ಹೋಗಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗುತಿತ್ತು ಎಂದರು. ವಯಸ್ಸಾಗಿದೆ ಎಂಬ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಲಾಯಿತು. ಈಗ ಪ್ರಚಾರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಹಾಗಾದರೆ ಈಗ ಅವರಿಗೆ ವಯಸ್ಸು ಆಗಿಲ್ಲವೇ.

ಗಂಡ ಹೆಂಡತಿ ನಡುವೆ ಅನೈತಿಕ ಸಂಬಂಧಕ್ಕೆ ಗಲಾಟೆ: ಮನೆ ಬಳಿ ಹೋಗಿ ಎರಡನೇ ಹೆಂಡತಿ ಸೀಮಂತ ವೇಳೆ ಹೊಡೆದಾಟ

ಕುಮಾರಸ್ವಾಮಿ ಮಾಸ್ ಲೀಡರ್: ಈ ರಾಜ್ಯದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಮಾಸ್ ಲೀಡರ್ ಎಂದರು. ಇತ್ತೀಚೆಗೆ ಇಲ್ಲಿನ ಹುಲಿಕೆರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು ಮಾತನಾಡುವಾಗ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಲಾಸ್ಟ್ ಎಲೆಕ್ಷನ್ ಅಂದಿದ್ರು, ನಿಮಗೆ ಈ ಹುದ್ದೆ, ವಯಸ್ಸು ಹಾಗೆಯೇ ಇರೋದಿಲ್ಲ, ಮುಂದೊಂದು ದಿನ ಹುದ್ದೆಯೂ ಹೋಗುತ್ತೆ, ವಯಸ್ಸು ಕೂಡ ಆಗುತ್ತೆ, ಜವಬ್ದಾರಿಯಿಂದ ಮಾತನಾಡಬೇಕು ಎಂದು ಕಿವಿ ಮಾತು ಹೇಳಿದರು.

ಏರ್ಪೋರ್ಟ್ ಪ್ರಯಾಣಿಕರೇ ಈ ಸ್ಟೋರಿ ಓದಲೇಬೇಕು: ಫೆಬ್ರವರಿ 17ರವರೆಗೆ ಏರ್ ಶೋ ಹಿನ್ನೆಲೆ ಸಂಚಾರ ದಟ್ಟಣೆ

ಸಿ.ಟಿ.ರವಿ ಗುಣಕ್ಕೂ ಮಾತಿಗೂ ಹೋಲಿಕೆ ಆಗೋದಿಲ್ಲ: ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಿ.ಟಿ.ರವಿ ಹೇಳಿದ್ದಾರೆ. ಅವರಿಗೆ ಇದರ ಅರ್ಥ ಗೊತ್ತಿಲ್ಲ, ಈ ಮಾತನ್ನು ಹೇಳಲು ಅವರಿಗೆ ನೈತಿಕತೆ ಇಲ್ಲ, ನಿಮ್ಮ ಗುಣಕ್ಕೂ ಮಾತಿಗೂ ಹೋಲಿಕೆ ಆಗೋದಿಲ್ಲ, ನಿಮಗಿಂತ ನಮ್ಮ ನಾಲಿಗೆ  ಹರಿತವಾಗಿದೆ, ನಾವು ಕೂಡ ಜೋರಾಗಿ ಮಾತನಾಡುತ್ತೇವೆ. ಈ ಸಮಾಜ ನಮ್ಮ ನಡವಳಿಕೆಯನ್ನು ನೋಡುತ್ತಾರೆ ಎಂದು ಕಿವಿ ಮಾತು ಹೇಳಿದರು. ರಾಜಕೀಯ ಕ್ಷೇತ್ರದಲ್ಲಿ ಇರುವುದರಿಂದ ಟೀಕೆಗಳನ್ನು ರಾಜಕೀಯವಾಗಿಯೇ ಎದುರಿಸಬೇಕು, ವೈಯಕ್ತಿಕ ವಿಷಯಗಳನ್ನು ಟೀಕೆ ಮಾಡುವುದನ್ನು ಕೈಬಿಡಿ, ಬೇರೆಯವರಿಗೆ ತೇಜೋವಧೆ ಮಾಡಬೇಡಿ ಎಂದ ಅವರು, ಸಿ.ಟಿ.ರವಿ ಅವರು ಆರ್‌ಎಸ್ಎಸ್ ಧ್ಯೆಯೋದ್ದೇಶಗಳನ್ನು ಗಾಳಿಗೆ ತೂರಿ ಎಳ್ಳು ನೀರು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

Latest Videos
Follow Us:
Download App:
  • android
  • ios