ರಾಯಚೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ 2 ಎಕರೆ ಹೊಲ ಗಿಫ್ಟ್: ಗ್ರಾ.ಪಂ. ಸದಸ್ಯನ ಆಹ್ವಾನ
ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರೇ ಬರಬೇಕು
ಸಿದ್ದರಾಮಯ್ಯ ಅಭಿಮಾನಿ ಶರಣು ಕಡ್ಡೋಣಿ ಆಹ್ವಾನ
ಸಿದ್ದರಾಮಯ್ಯ ಸಿಂಧನೂರು ಅಥವಾ ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸಬೇಕು
ರಾಯಚೂರು (ಜ.30): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಯಚೂರು ಅಥವಾ ಸಿಂಧನೂರು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದಲ್ಲಿ ಅವರ ಚುನಾವಣಾ ಕಾರ್ಯಕ್ಕಾಗಿ ತನ್ನ ಬಾಗಕ್ಕೆ ಇರುವ 2 ಎಕರೆ ಹೊಲವನ್ನು ಮಾರಾಟ ಮಾಡಿ ಹಣವನ್ನು ಕೊಡುವುದಾಗಿ ಲಿಂಗಸಗೂರು ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಗೂ ಸಂದೇಶವನ್ನಯ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಈಗ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರ ಕುರಿತ ಈ ವೀಡಿಯೋ ಮತ್ತು ಪೋಸ್ಟರ್ ವೈರಲ್ ಆಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳಿಂದ ವಿಧಾನಸಭಾ ಚುನಾಣೆಯಲ್ಲಿ ಸ್ಪರ್ಧಿಸಲು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ. ಕಳೆದ ಬಾರಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಬಾದಾಮಿಯಲ್ಲಿ ಜಯಗಳಿಸಿದ್ದರು. ಆದರೆ, ಈ ಬಾರಿ ಬಾದಾಮಿ ಕ್ಷೇತ್ರ ದೂರವಾಗುತ್ತದೆ ಎಂದು ಕೋಲಾರದಲ್ಲಿ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ. ಈ ಹಿಂದೆ ಬೆಂಗಳೂರಿನ ಚಾಮರಾಜಪೇಟೆ, ಮೈಸೂರಿನ ವರುಣಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಕ್ಷೇತ್ರ ಹುಡುಕಾಟ ಮಾಡಿದ್ದರು. ಇತ್ತೀಚೆಗೆ ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಅಂತಿಮವಾಗಿ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಈಗ ಯುವಕನೊಬ್ಬ ರಾಯಚೂರು ಅಥವಾ ಸಿಂಧನೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ.
Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ
ರಾಯಚೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಬೇಕಂತೆ: ರಾಜ್ಯದಲ್ಲಿ ರಾಯಚೂರು ಜಿಲ್ಲೆ ಅಭಿವೃದ್ಧಿಯಿಂದ ತೀವ್ರವಾಗಿ ವಂಚಿತವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಸಿಂಧನೂರು ಮತ್ತು ರಾಯಚೂರು ನಗರದಿಂದ ಸ್ಪರ್ಧೆ ಮಾಡಬೇಕು. ನಾನು ಲಿಂಗಸಗೂರು ವಿಧಾನಸಭಾ ಕ್ಷೇತ್ರದವನಾಗಿದ್ದು, ಇಲ್ಲಿ ಎಸ್‌ಸಿ ಮೀಸಲಾತಿ ಇರುವುದರಿಂದ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲು ಆಗುವುದಿಲ್ಲ. ಹೀಗಾಗಿ, ನೆರೆಹೊರೆ ಕ್ಷೇತ್ರಗಳಾದ ರಾಯಚೂರು ಅಥವಾ ಸಿಂಧನೂರಿನಿಂದ ಸ್ಪರ್ಧೆ ಮಾಡಬೇಕು. ಇಲ್ಲಿ ಕನಿಷ್ಠ 50 ಸಾವಿರ ಮತಗಳಿಂದ ಅವರು ಗೆಲ್ಲುತ್ತಾರೆ. ಆಗ ಇಡೀ ನಮ್ಮ ರಾಯಚೂರು ಜಿಲ್ಲೆ ಅಭಿವೃದ್ಧಿ ಆಗುತ್ತದೆ ಎಂದು ಯುವಕ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಫೇಸ್‌ಬುಕ್ ಪೇಜ್ ವೀಡಿಯೋ ವೈರಲ್: ಗ್ರಾ.ಪಂ. ಸದಸ್ಯನಿಂದ ರಾಯಚೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಆಹ್ವಾನ ನೀಡಿದ್ದಾನೆ. ಸಿದ್ದರಾಮಯ್ಯ ರಾಯಚೂರಿಗೆ ಬಂದು ಸ್ಪರ್ಧೆ ಮಾಡಿದರೆ, ತನ್ನ ಪಾಲಿನ ಎರಡು ಎಕರೆ ಜಮೀನು ಮಾರಾಟ ಮಾಡಿ ಚುನಾವಣೆ ಕೊಡಲು ಅಭಿಮಾನಿ ಸಿದ್ಧನಾಗಿದ್ದಾನೆ. ಸಿದ್ದರಾಮಯ್ಯ ಅಭಿಮಾನಿ ಶರಣು ಕಡ್ಡೋಣಿ ಆಹ್ವಾನ ನೀಡಿದ ವ್ಯಕ್ತಿಯಾಗಿದ್ದಾನೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಚಿಕ್ಕಹೊಸರೂರು ಗ್ರಾಮದ ಅಭಿಮಾನಿ ಆಗಿದ್ದಾನೆ. ಫೇಸ್‌ಬುಕ್ ನಲ್ಲಿ ಸಿದ್ದರಾಮಯ್ಯ ಗೆ ಆಹ್ವಾನಿಸಿದ ಮೆಸೇಜ್ ಎಲ್ಲೆಡೆ ವೈರಲ್ ಆಗುತ್ತಿದೆ.
Assembly election: ಫೆ.3ರಿಂದ ಡಿಕೆಶಿ, ಸಿದ್ದು ಪ್ರತ್ಯೇಕ ಯಾತ್ರೆ