ಕುವೈತ್(ಅ. 08)  ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಿರುವ ಕೆ. ಅಣ್ಣಾಮಲೈ ಪ್ರಧಾನಿ ನರೇಂದ್ರ  ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಇದು ಭಾರತದಲ್ಲ..ಕುವೈತ್ ನಲ್ಲಿ.  ಇತ್ತೀಚೆಗೆ ಕುವೈತ್ ಪ್ರವಾಸ ಕೆಐಗೊಂಡಿದ್ದ ಅಣ್ಣಾಮಲೈ ಭಾಷಣ ಮಾಡುತ್ತ ಮೋದಿ ಅವರನ್ನು ಶ್ಲಾಘಿಸಿದರು.

ಕರ್ನಾಟಕವನ್ನು ಮೆಚ್ಚಿ ಕನ್ನಡದಲ್ಲಿಯೇ ಮಾತನಾಡಿದ ಅಣ್ಣಾಮಲೈ ಮೋದಿ ಅವರುತೆಗೆದುಕೊಂಡ ಕ್ರಮಗಳಿಂದ ದೇಶ ಹೇಗೆ ಬದಲಾಗುತ್ತಿದೆ ಎಂಬುದನ್ನು ವಿವರಿಸುತ್ತ ಹೋದರು. ಕರ್ನಾಟಕದ ಜನರು ನೀಡುವ ಮರ್ಯಾದೆ ಮತ್ತು ಗೌರವವನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡರು.

ಕರುನಾಡ ಮಹಾಪ್ರವಾಹಕ್ಕೆ ಮರುಗಿದ್ದ ಅಣ್ಣಾಮಲೈ

ರಾಜಕಾರಣಿ ಮತ್ತು ಪೊಲೀಸ್ ಅಧಿಕಾರಿಯನ್ನು ಒಂದೇ ವೇದಿಕೆಗೆ ಯಾರೂ  ಕರೆಯುವುದಿಲ್ಲ. ಆದರೆ ಕರ್ನಾಟಕದ ಜನ ಕರೆಯುತ್ತಾರೆ. ನಮ್ಮ ಊರಿನಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಮ್ಮಲ್ಲಿ ಒಂದು ಸುನಾಮಿ ಬರುತ್ತಿದೆ. ಮೋದಿಯವರ ಅಭಿವೃದ್ಧಿಯ ಸುನಾಮಿ ಎಂದು ಬಣ್ಣಿಸಿದ್ದಾರೆ.

ಭಾರತದಲ್ಲಿ ಹೊಸ ಬಗೆಯ ರಾಜಕಾರಣ ಕಂಡುಬರುತ್ತಿದೆ. ಹೌಡಿ ಮೋಡಿ ಕಾರ್ಯಕ್ರಮದಲ್ಲಿ ಅದು ಅಮೆರಿಕದಂಥ ದೇಶ ಮೋದಿಯವರಿಗೆ ಕೊಟ್ಟ ಗೌರವ ದೇಶದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಐವತ್ತು ಸಾವಿರ ಜನರು ದೇಶವನ್ನು ಮೋದಿ ಅವರಿಗೆ ಕಾದು ಕುಳಿತರು. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್  ಅಪಾಯಿಂಟ್ ಮೆಂಟ್ ಪಡೆದುಕೊಳ್ಳೂವುದೇ  ಒಂದು ಸಾಹಸ.  ಹದಿನೈದು ವರ್ಷದ ಹಿಂದೆ ಅಮೆರಿಕದ ವೈಟ್ ಹೌಸ್  ಹೊರಗೆ ಪೋಟೋ ತೆಗೆಸಿಕೊಂಡಿದ್ದ ವ್ಯಕ್ತಿ ಇಂದು ಅದೇ ದೇಶದಲ್ಲಿ ಅತಿ ಗಣ್ಯವಾಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದಾರೆ ಎಂದು ವ್ಯಾಖ್ಯಾನಿಸಿದರು.

ಅಣ್ಣಾಮಲೈ ರಾಜೀನಾಮೆ ಕೊಟ್ಟು ಹೊರನಡೆಯಲೇನು ಕಾರಣ?

ವಿದೇಶಗಳಲ್ಲಿ ಸಿಗುತ್ತಿರುವ ಎಲ್ಲ ಸೌಲಭ್ಯಗಳು ಇನ್ನು ಎರಡು ವರ್ಷದಲ್ಲಿ ನಮ್ಮ ದೇಶದಲ್ಲಿಯೇ ಸಿಗಲಿದೆ.  ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಲೇ ಇವೆ. ಅಣ್ಣಾ ಮಲೈ ತಮ್ಮ ಹನ್ನೊಂದು ನಿಮಿಷದ ಭಾಷಣದಲ್ಲಿ ಹೀಗೆ ಅನೇಕ ವಿಚಾರಗಳನ್ನು ಉಲ್ಲೇಖ ಮಾಡಿದರು.,

ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: