Asianet Suvarna News Asianet Suvarna News

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ

ಕರ್ನಾಟಕದ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಎಂಬವರು ಗುರುವಾರ ಬರೋಬ್ಬರಿ 24 ಕೋಟಿ ರು. (12 ಮಿಲಿಯನ್‌ ದಿರಾಮ್‌) ಲಾಟರಿಯನ್ನ ಯುಎಇನಲ್ಲಿ ಗೆದ್ದಿದ್ದಾರೆ.

Shivamogga man wins Rs 24 crore lottery in UAE snr
Author
Bengaluru, First Published Mar 5, 2021, 9:40 AM IST

ದುಬೈ (ಮಾ.05): ಯುಎಇನಲ್ಲಿ ನೆಲೆಸಿರುವ ಕರ್ನಾಟಕದ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಎಂಬವರು ಗುರುವಾರ ಬರೋಬ್ಬರಿ 24 ಕೋಟಿ ರು. (12 ಮಿಲಿಯನ್‌ ದಿರಾಮ್‌) ಲಾಟರಿ ಗೆಲ್ಲುವ ಮೂಲಕ ಜಾಕ್‌ಪಾಟ್‌ ಹೊಡೆದಿದ್ದಾರೆ. 

ಕೃಷ್ಣಪ್ಪ ಅವರು ಕಳೆದ 15 ವರ್ಷದಿಂದ ಯುಎಇನಲ್ಲಿ ನೆಲೆಸಿದ್ದು, ಮೆಕಾನಿಕಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಫೆ.17ರಂದು ಕೃಷ್ಣಪ್ಪ 202511 ಸಂಖ್ಯೆಯ ಲಾಟರಿ ಟಿಕೆಟ್‌ ಅನ್ನು ಕೊಂಡುಕೊಂಡಿದ್ದರು. ಈ ಲಾಟರಿ ಕೃಷ್ಣಪ್ಪ ಅವರ ಅದೃಷ್ಟವನ್ನೇ ಬದಲಾಯಿಸಿದೆ.

‘ನೋವಾರ್ಟಿಸ್‌’ 16 ಕೋಟಿ ಲಾಟರಿಯಿಂದ ಜೀನ್‌ ಚಿಕಿತ್ಸೆ: ಮಗುವಿಗೆ ಮರುಜೀವ

ಗೆದ್ದ ಹಣದಲ್ಲಿ ತಮ್ಮ ತವರಿನಲ್ಲಿ ದೊಡ್ಡ ಮನೆಯನ್ನು ನಿರ್ಮಿಸುತ್ತೇನೆ ಮತ್ತು ಉಳಿದ ಹಣವನ್ನು ಇಬ್ಬರು ಮಕ್ಕಳ ಭವಿಷ್ಯಕ್ಕೆ ಮೀಸಲಿಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಕೃಷ್ಣಪ್ಪ ಅವರು ಕಳೆದ 3 ವರ್ಷಗಳಿಂದ ಪ್ರತಿ ತಿಂಗಳೂ ಲಾಟರಿ ಟಿಕೆಟ್‌ ಅನ್ನು ಖರೀದಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷ್ಣಪ್ಪ ಅವರು, ‘ಫಲಿತಾಂಶವನ್ನು ಆನ್‌ಲೈನ್‌ ಮೂಲಕ ನೇರಪ್ರಸಾರದಲ್ಲಿ ನೋಡುತ್ತಿದ್ದೆ. ಫಲಿತಾಂಶ ಘೋಷಣೆಯಾದಾಗ ನಂಬಲು ಸಾಧ್ಯವಾಗಲಿಲ್ಲ. ಲಾಟರಿ ಟಿಕೆಟ್‌ ಆಯೋಜಕರು ಪ್ರತಿ ಬಾರಿ ಟಿಕೆಟ್‌ ಕೊಂಡುಕೊಳ್ಳುವವರಿಗಾಗಿ ವಿಶೇಷ ಆಫರ್‌ ನೀಡಿದ್ದರಿಂದ ಈ ಬಾರಿ ಎರಡು ಟಿಕೆಟ್‌ ಖರೀದಿಸಿದ್ದೆ. ಅದರಲ್ಲಿ ಒಂದು ಟಿಕೆಟ್‌ ಜಾಕ್‌ಪಾಟ್‌ ಹೊಡೆದಿದೆ’ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios