ಬೆಂಗಳೂರು :  ಇತ್ತೀಚೆಗೆ ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಸೋಮವಾರ ಈಗಿರುವ ಡಿಸಿಪಿ ಹುದ್ದೆಯ ಜವಾಬ್ದಾರಿಯಿಂದ ಮುಕ್ತರಾದರು.

ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಯಲ್ಲಿದ್ದ ಅಣ್ಣಾಮಲೈ ಅವರು ಸೋಮವಾರ ಸಂಜೆ ನೂತನವಾಗಿ ಡಿಸಿಪಿ ಹುದ್ದೆಗೆ ನೇಮಕಗೊಂಡ ರೋಹಿಣಿ ಕಟೋಚ್‌ ಸಪೆಟ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇದರೊಂದಿಗೆ ಪೊಲೀಸ್‌ ಇಲಾಖೆಯಲ್ಲಿ ಅಣ್ಣಾಮಲೈ ಅವರ ಸೇವಾ ಪರ್ವವು ಸಹ ಕೊನೆಗೊಂಡಿತು. 

ಅಣ್ಣಾಮಲೈ ಅವರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿಲ್ಲ. ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಅವರ ರಾಜೀನಾಮೆ ಪತ್ರ ತಲುಪಿದ್ದು, ಇನ್ನೊಂದು ವಾರದಲ್ಲಿ ಅಂಗೀಕಾರದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿದು ಬಂದಿದೆ.