ಮತದಾನ ವೇಳೆ ಹಿಂಸಾಚಾರ, ಸದ್ಯಕ್ಕೆ ಮುಗಿಯಲ್ಲ ಸಾರಿಗೆ ಮುಷ್ಕರ; ಏ.10ರ ಟಾಪ್ 10 ಸುದ್ದಿ!
ಪಶ್ಚಿಮ ಬಂಗಾಳದ 4ನೇ ಹಂತದ ಮತದಾನದ ವೇಳೆ ಹಿಂಸಾಚಾರ ನಡೆದಿದ್ದು, ನಾಲ್ವರು ಬಲಿಯಾಗಿದ್ದಾರೆ. ಟಿಎಂಸಿ ಗೆಲ್ಲಿಸಲು ರಣತಂತ್ರ ರೂಪಿಸಿದ ಪ್ರಶಾಂತ್ ಕಿಶೋರ್ ಆಡಿಯೋವನ್ನು ಬಿಜೆಪಿ ರಿಲೀಸ್ ಮಾಡಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಾರಿಗೆ ನೌಕರರ ಮುಷ್ಕರ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಕೊರೋನಾ ಪಾಸಿಟೀವ್ ಸೇರಿದಂತೆ ಏಪ್ರಿಲ್ 10ರ ಟಾಪ್ 10 ಸುದ್ದಿ ಇಲ್ಲಿವೆ.
ಮತದಾನದ ವೇಳೆ ಹಿಂಸಾಚಾರ: ಟಿಎಂಸಿ, ಬಿಜೆಪಿಗರ ಸಂಘರ್ಷ, ಗುಂಡಿನ ದಾಳಿಗೆ 4 ಬಲಿ!...
ಟಿಎಂಸಿ-ಬಿಜೆಪಿ-ಎಡರಂಗದ ನಡುವೆ ತ್ರಿಕೋನ ಹಣಾಹಣಿ ಏರ್ಪಟ್ಟಿರುವ ಪಶ್ಚಿಮ ಬಂಗಾಳದ 8 ಹಂತಗಳ ವಿಧಾನಸಭೆ ಚುನಾವಣೆ ಪೈಕಿ ಶನಿವಾರ 4ನೇ ಹಂತದ ಮತದಾನ ಆರಂಭವಾಗಿದೆ. ಆದರೀಗ ಈ ಮತದಾನ ಪ್ರಕ್ರಿಯೆಯ ನಡುವೆಯೇ ಟಿಎಂಸಿ, ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಗುಂಡಿನ ದಾಲಿಯೂ ನಡೆದಿದ್ದು, ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಪ್ರಶಾಂತ್ ಕಿಶೋರ್ ಆಡಿಯೋ ವೈರಲ್: ಮೋದಿ ಮೋಡಿ, ಬಿಜೆಪಿ ಎದುರು ಮಂಡಿಯೂರಿತಾ ಟಿಎಂಸಿ?...
ಹತ್ತು ವರ್ಷಗಳ ಹಿಂದೆ 34 ವರ್ಷ ಹಳೆಯ ಎಡಪಂಥೀಯರ ಭದ್ರಕೋಟೆ ಕೆಡವಿದ್ದ ಮಮತಾ ಬ್ಯಾನರ್ಜಿ ಸೋಲುತ್ತಾರಾ? ಸದ್ಯ ಈ ಪ್ರಶ್ನೆ ಪಶ್ಚಿಮ ಬಂಗಾಳ ಮಾತ್ರವಲ್ಲ ಇಡೀ ದೇಶಾದ್ಯಂತ ಭಾರೀ ಚರ್ಚೆ ಹುಟ್ಟಿಸಿದೆ. ಪಶ್ಚಿಮ ಬಂಗಾಳ ಚುನಾವಣೆ ಸಂಬಂಧ ಟಿಎಂಸಿಯ ಚುನಾವಣಾ ತಂತ್ರಗಾರ ನಡೆಸಿದ್ದಾರೆನ್ನಲಾದ ಚಾಟ್ ಬಹಿರಂಗಗೊಂಡಿದ್ದು, ಈ ಮಾತುಗಳಿಗೆ ಮತ್ತಷ್ಟು ಬಲ ತುಂಬಿದೆ. ಈ ಚಾಟಿಂಗ್ ಮಮತಾ ಬ್ಯಾನರ್ಜಿಗೆ ಆತಂಕ ಸೃಷ್ಟಿಸಿದೆ.
ಇಂದು ರಾತ್ರಿಯಿಂದ ರಾಜ್ಯದ 8 ನಗರದಲ್ಲಿ ಕೊರೋನಾ ಕರ್ಫ್ಯೂ!...
ಕೋವಿಡ್ ಎರಡನೇ ಅಲೆ ನಿಯಂತ್ರಣ ಸಂಬಂಧ ಶನಿವಾರದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿ ಪ್ರಾಯೋಗಿಕವಾಗಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಶುಕ್ರವಾರ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಇಂದಿರಾ ನಗರ ಗೂಂಡಾ: ದ್ರಾವಿಡ್ ಜಾಹಿರಾತು, ಜೊಮ್ಯಾಟೋಗೆ ಆಪತ್ತು..!...
ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಕಾಲೆಳೆಯಲು ಹೋಗಿ ಖ್ಯಾತ ಜೊಮ್ಯಾಟೋ ಕಂಪನಿ ಸಂಕಷ್ಟಕ್ಕೆ ಒಳಗಾದ ಅಪರೂಪದ ಘಟನೆ ನಡೆದಿದೆ.
ಬೆಳಗಾವಿ ಹುಡುಗನ ಪ್ರತಿಭೆಗೆ ಫಿದಾ: ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಮಾತಾಡಿದ ವಿಡಿಯೋ ವೈರಲ್!...
'ಸೂಪರ್ ಡ್ಯಾನ್ಸರ್' ಕಾರ್ಯಕ್ರಮದ ಆಡಿಶನ್‌ನಲ್ಲಿ ಬೆಳಗಾವಿ ಪ್ರತಿಭೆ ಕಂಡು ಮನಸಾರೆ ಹೊಗಳಿದ ಶಿಲ್ಪಾ ಶೆಟ್ಟಿ. ಕನ್ನಡದಲ್ಲಿ ಸ್ವಾಗತ ಮಾಡಿದ್ದು ಹೀಗೆ....
ಕೇಂದ್ರ ಸರ್ಕಾರಿ ನೌಕರ, ಪಿಂಚಣಿದಾರರಿಗೆ ಬಂಪರ್, DA, DR ಹೆಚ್ಚಳ!...
7ನೇ ವೇತನ ಆಯೋಗದ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಪರಿಣಾಮ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಇದೀಗ ಡಬಲ್ ಧಮಾಕ. ಹಬ್ಬಕ್ಕೂ ಮೊದಲೇ ನೌಕರರ ಪೂರ್ಣ ಡಿಎ, ಡಿಆರ್ ಹಾಗೂ ಇತರ ಸೌಲಭ್ಯ ನೀಡಲು ಕೇಂದ್ರ ಮುಂದಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ TVS ಆಟೋ ಸವಾರಿ ಅಭಿಯಾನ; ಬೆಂಗಳೂರಲ್ಲಿ ಚಾಲನೆ!...
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ TVS ಆಟೋ ಫಾರ್ ಇಂಪಾಕ್ಟ್ ಅಭಿಯಾನಕ್ಕೆ ಬೆಂಗಳೂರಲ್ಲಿ ಚಾಲನೆ ನೀಡಲಾಗಿದೆ. ಮೂರು ರಾಜ್ಯಗಳಲ್ಲಿ ಆಟೋ ಸವಾರಿ ಮೂಲಕ ಈ ಅಭಿಯಾನ ನಡೆಯಲಿದೆ.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (ಕೆ-ಸೆಟ್) ಪರೀಕ್ಷೆ ಮುಂದೂಡಿಕೆ...
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) ಮುಂದೂಡಿಕೆಯಾಗಿದೆ. ಈ ಬಗ್ಗೆ ಶನಿವಾರ ಅಧಿಕೃತ ಪ್ರಕಣೆ ಹೊರಬಿದ್ದಿದೆ.
ಬಿಎಂಟಿಸಿಯಿಂದ ನೌಕರರಿಗೆ ಮತ್ತೊಂದು ಅಸ್ತ್ರ : 50 ಆದವರಿಗೆ ಕಾದಿದ್ಯಾ ಶಾಕ್..?...
ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದ್ದು ಇದೀಗ ಬಿಎಂಟಿಸಿ ಸಿಬ್ಬಂದಿ ಮೇಲೆ ಮತ್ತೊಂದು ಅಸ್ತ್ರ ಪ್ರಯೋಗಿಸಲು ಇಲಾಖೆ ಮುಂದಾಗಿದೆ.
ಸಚಿವ ಶ್ರೀನಿವಾಸ ಪೂಜಾರಿಗೆ ಕೊರೋನಾ ಪಾಸಿಟಿವ್...
ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೊರೋನಾ ಸೋಂಕು ತಗುಲಿದೆ. ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.