ವಿಷ್ಣುವರ್ಧನ್ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್; ಡೌಟ್ ಇದ್ರೆ ಇಲ್ನೋಡಿ!
ವಿಷ್ಣುವರ್ಧನ್ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎನ್ನಲು ಏನೂ ಸಮಸ್ಯೆ ಇಲ್ಲ. ತಮ್ಮ 37 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟೂ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ವಿಷ್ಣುವರ್ಧನ್, ಅತಿ ಹೆಚ್ಚು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ಸಾಹಸಸಿಂಹ..
ಕನ್ನಡದ ಮೇರು ನಟರಲ್ಲಿ ಒಬ್ಬರಾದ ಡಾ ವಿಷ್ಣುವರ್ಧನ್ (Vishnuvardhan) ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅದಕ್ಕೆ ಕಾರಣ, ಅವರು ಕನ್ನಡವನ್ನು ಹೊರತುಪಡಿಸಿ ಕೂಡ ಭಾರತದ ಹಲವು ಭಾಷೆಗಳಲ್ಲಿ ಅಭಿನಯಿಸಿರುವುದು. ನಾರ್ಥ್ ಹಾಗೂ ಸೌತ್ ಎರಡು ಕಡೆಗಳಲ್ಲಿ ವಿಷ್ಣುವರ್ಧನ್ ಅವರು ನಟಿಸಿ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಹೀಗಾಗಿ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎನ್ನಲು ಏನೂ ಸಮಸ್ಯೆ ಇಲ್ಲ.
ಇಂದು ಕನ್ನಡದ ಸಿನಿಮಾ ಹಲವು ಭಾಷೆಗಳಲ್ಲಿ ಬಿಡಗಡೆಯಾದರೆ ನಾವು ಅದನ್ನು ಪ್ಯಾನ್ ಇಂಡಿಯಾ ಮೂವಿ ಎನ್ನುತ್ತೇವೆ. ಅದರಂತೆ, ಹಲವು ಭಾಷೆಗಳಲ್ಲಿ ಅಭಿನಯಿಸಿದರೆ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುತ್ತೇವೆ. ಹಾಗೆ ನೋಡಿದರೆ, ಡಾ ವಿಷ್ಣುವರ್ಧನ್ ಅಂದೇ ಬರೋಬ್ಬರಿ ಐದು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಈ ಐದೂ ಭಾಷೆಗಳಲ್ಲಿ ನಟಿಸಿದ್ದಾರೆ. ಆಗ ಈ ಪದ ಪ್ರಯೋಗ ಇರಲಿಲ್ಲ ಅಷ್ಟೇ.
ಕಿಚ್ಚ ಸುದೀಪ್ ಮಾತಾಡಿದ ಹಳೆಯ ವೈರಲ್ ವಿಡಿಯೋ ಭಾರೀ ಮಜವಾಗಿದೆ ನೋಡಿ!
ನಟಿಯರಾದ ಶ್ರೀದೇವಿ, ಜಯಪ್ರದಾ ಲಕ್ಷ್ಮೀ ಸೇರಿದಂತೆ ಹಲವು ನಟಿಯರು ಕೂಡ ಪ್ಯಾನ್ ಇಂಡಿಯಾ ಸ್ಟಾರ್. ಏಕೆಂದರೆ ಹಲವು ನಟಿಯರು 4-5 ಭಾಷೆಗಳಲ್ಲಿ ನಟಿಸಿದ್ದಾರೆ. ಎಲ್ಲ ಕಡೆಗಳಲ್ಲಿಯೂ ಜನಪ್ರಿಯತೆ ಪಡೆದಿದ್ದಾರೆ. ಅವರನ್ನೂ ಕೂಡ ಪ್ಯಾನ್ ಇಂಡಿಯಾ ನಟಿಯರು ಎಂದೇ ಹೇಳಬೇಕು. ಇಂದಿನ ಶಬ್ದ ಬಳಕೆ 'ಪ್ಯಾನ್ ಇಂಡಿಯಾ' ಎಂಬುದಕ್ಕೆ ಅಂದು 'ಬಹುಭಾಷಾ ತಾರೆ' ಅಥವಾ 'ಬಹುಭಾಷಾ ನಟ, ನಟಿ' ಎಂದು ಕರೆಯುತ್ತಿದ್ದರು ಅಷ್ಟೇ. ಈ ಕಾರಣಕ್ಕೇ ನಟ ವಿಷ್ಣುವರ್ಧನ್ ಅವರು ಕನ್ನಡದ ಮೊಟ್ಟಮೊದಲ ಪ್ಯಾನ್ ಇಂಡಿಯಾ ಸ್ಟಾರ್.
ತಮ್ಮ 37 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟೂ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ವಿಷ್ಣುವರ್ಧನ್ ಅವರು ಅತಿ ಹೆಚ್ಚು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ನಟ, ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್ ಅವರು ಐದು ಭಾಷೆಗಳಲ್ಲಿ ನಟಿಸಿರುವ ಚಿತ್ರಗಳು ಯಾವವು ಗೊತ್ತೇ?
ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ವಿಷ್ಣುಗೆ ಬೈಯ್ದು ಕಳಿಸಿದ್ರು ಪಾರ್ವತಮ್ಮ; ಎಂಥಾ ಕರುಣಾಮಯಿ!
1. ಕನ್ನಡದಲ್ಲಿ ನಟ ವಿಷ್ಣುವರ್ಧನ್ ಬರೋಬ್ಬರಿ 206 ಚಿತ್ರಗಳಲ್ಲಿ ನಟಿಸಿದ್ದಾರೆ.
2. ತಮಿಳು ಚಿತ್ರಗಳು
ಅಲೈಗಳ್ (1973)
ಮಝೂಲೈ ಪಟ್ಟಾಲಂ (1980)
ಇಯೆಟ್ಟಿ (1985)
ಶ್ರೀ ರಾಘವೇಂದ್ರ (1985)
ವಿದುತಲೈ (1986)
ಪರುವರಾಗಂ (1987)
3. ಹಿಂದಿ ಚಿತ್ರಗಳು
ಈಕ್ ನಯಾ ಇತಿಹಾಸ್ (1981)
ಇನ್ಸ್‌ಪೆಕ್ಟರ್ ಧನುಷ್ (1991)
ಅಶಾಂತ್ (1993)
ಝೂಲಿಮ್ (1994)
4. ತೆಲುಗು ಚಿತ್ರಗಳು
ಸರ್ದಾರ್ ಧರ್ಮಣ್ಣ (1987)
ಒಕ್ಕಡು ಚಾಲು (2000)
5. ಮಲಯಾಳಂ ಚಿತ್ರಗಳು
ಅದಿಮಾ ಚಂಗಾಲ (1981)
ಕೌರವರ್ (1992)
ಹೀಗೆ ಬರೋಬ್ಬರಿ 5 ಭಾಷೆಗಳಲ್ಲಿ 1973ರಿಂದಲೇ 50 ವರ್ಷಗಳಿಗೂ ಮೊದಲೇ ನಟಿಸಿದ್ದರು ಡಾ ವಿಷ್ಣುವರ್ಧನ್. ಆಗ ಅವರನ್ನು ಬಹುಭಾಷಾ ನಟರು ಎಂದು ಕರೆದರೂ ಅದೊಂದು ಹೆಮ್ಮೆಯ ಸಂಗತಿ ಆಗಿರಲಿಲ್ಲ. ಅಂದಿನ ಟ್ರೆಂಡ್ ಹೇಗಿತ್ತು ಎಂದರೆ, ಅಂದು ನಾಯಕನಟರು ತಮ್ಮದೇ ಮಾತೃಭಾಷೆಯಲ್ಲಿ ಮಿಂಚುವುದು ಪ್ರತಿಷ್ಠೆ ಹಾಗೂ ಸ್ಟಾರ್‌ಗಿರಿ ಎಂದುಕೊಂಡಿದ್ದರು. ಆದರೆ ಇಂದು ಆ ಗ್ರಾಮರ್ ಬದಲಾಗಿದೆ. ಕನ್ನಡದ ನಟರೂ ಕೂಡ ಪೈಪೋಟಿಗೆ ಬಿದ್ದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ.
ಕ್ಯಾನ್ಸರ್ ಭಾದೆ ಬಗ್ಗೆ ಶಿವಣ್ಣ ಅಂತರಂಗದ ಮಾತು, ಎಂಥವರಿಗೂ ಕಣ್ಣೀರು ಬರದೇ ಇರದು!
ಕನ್ನಡದ ಸ್ಟಾರ್ ನಟರಾದ ಸುದೀಪ್, ಯಶ್, ಉಪೇಂದ್ರ, ಶಿವರಾಜ್‌ಕುಮಾರ್ ಹಾಗೂ ರಿಷಭ್ ಶೆಟ್ಟಿ ಇವರುಗಳಿಗಿಂತ ತುಂಬಾ ಮೊದಲೇ ನಟ ವಿಷ್ಣುವಧ್ನ್ ಬರೋಬ್ಬರಿ 5 ಭಾಷೆಗಳಲ್ಲಿ ಮಿಂಚಿದ್ದರು. ಹೀಗಾಗಿ ಅವರೇ ಕನ್ನಡದ ಮೊಟ್ಟಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂಬುದನ್ನು ಸಹಜವಾಗಿಯೇ ಎಲ್ಲರೂ ಒಪ್ಪುತ್ತಾರೆ. ಈ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಆಗುತ್ತಿವೆಯಾದರೂ ಅವು ಒಮ್ಮತಕ್ಕೆ ಹಾಗೂ ಪ್ರಚಾರಕ್ಕೆ ಬರುತ್ತಿಲ್ಲ ಅಷ್ಟೇ. ಆದರೆ, ಸತ್ಯ ಸಾಯುವುದಿಲ್ಲ, ಒಂದಲ್ಲ ಮತ್ತೊಂದು ದಿನ ಹೊರಗೆ ಬರಲೇಬೇಕು!