ಪ್ರಶಾಂತ್ ಕಿಶೋರ್ ಆಡಿಯೋ ವೈರಲ್: ಮೋದಿ ಮೋಡಿ, ಬಿಜೆಪಿ ಎದುರು ಮಂಡಿಯೂರಿತಾ ಟಿಎಂಸಿ?
ಪಶ್ಚಿಮ ಬಂಗಾಳದಲ್ಲಿ ಮೋದಿ ಮೋಡಿ| ವೈರಲ್ ಆಯ್ತು ಟಿಎಂಸಿ ಚುನಾವಣಾ ತಂತ್ರಗಾರನ ಆಡಿಯೋ| ಇಡೀ ಆಡಿಯೋ ಬಹಿರಂಗಪಡಿಸಿ ಎಂದು ಚಾಲೆಂಜ್ ಹಾಕಿದ ಪ್ರಶಾಂತ್ ಕಿಶೋರ್
ಕೋಲ್ಕತ್ತಾ(ಏ.10): ಹತ್ತು ವರ್ಷಗಳ ಹಿಂದೆ 34 ವರ್ಷ ಹಳೆಯ ಎಡಪಂಥೀಯರ ಭದ್ರಕೋಟೆ ಕೆಡವಿದ್ದ ಮಮತಾ ಬ್ಯಾನರ್ಜಿ ಸೋಲುತ್ತಾರಾ? ಸದ್ಯ ಈ ಪ್ರಶ್ನೆ ಪಶ್ಚಿಮ ಬಂಗಾಳ ಮಾತ್ರವಲ್ಲ ಇಡೀ ದೇಶಾದ್ಯಂತ ಭಾರೀ ಚರ್ಚೆ ಹುಟ್ಟಿಸಿದೆ. ಪಶ್ಚಿಮ ಬಂಗಾಳ ಚುನಾವಣೆ ಸಂಬಂಧ ಟಿಎಂಸಿಯ ಚುನಾವಣಾ ತಂತ್ರಗಾರ ನಡೆಸಿದ್ದಾರೆನ್ನಲಾದ ಚಾಟ್ ಬಹಿರಂಗಗೊಂಡಿದ್ದು, ಈ ಮಾತುಗಳಿಗೆ ಮತ್ತಷ್ಟು ಬಲ ತುಂಬಿದೆ. ಈ ಚಾಟಿಂಗ್ ಮಮತಾ ಬ್ಯಾನರ್ಜಿಗೆ ಆತಂಕ ಸೃಷ್ಟಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಟಿಎಂಸಿ ಒಂದು ಆಂತರಿಕ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಬಿಜೆಪಿ ಗೆಲುವಿನ ನಗೆ ಬೀರುವ ಸುಳಿವು ಲಭಿಸಿತ್ತು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಬ್ಗಗೆ ಟ್ವೀಟ್ ಕೂಡಾ ಮಾಡಿದ್ದು, ಪ್ರಶಾಂತ್ ಕಿಶೋರ್ ಕ್ಲಬ್ ಹೌಸ್‌ನಲ್ಲಿ ಮಾತುಕತೆ ನಡೆಸುತ್ತಿದ್ದರು, ಆದರೆ ಅವರಿಗೆ ತಮ್ಮ ಈ ಚಾಟ್ ವೈರಲ್ ಆಗುತ್ತದೆ ಎಂಬ ವೈರಲ್ ಆಗುತ್ತದೆ ಎಂಬ ಊಹೆಯೂ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ
ಆದರೆ ಪ್ರಶಾಂತ್ ಕಿಶೋರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತನ್ನ ಈ ಮಾತುಕತೆಯ ಸಂಪೂರ್ಣ ಆಡಿಯೋ ಬಹಿರಂಗಪಡಿಸಿ. ಹೀಗೆ ಆಯ್ದ ಭಾಗವನ್ನು ಮಾತ್ರ ರಿಲೀಸ್ ಮಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಏನಿದು ವಿಚಾರ?
ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಮಾಳವೀಯ ಕ್ಲಬ್ ಹೌಡ್‌ನ ಸಾರ್ವಜನಿಕ ಮಾತುಕತೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಟಿಎಂಸಿಯ ಆಂತರಿಕ ಸಮೀಕ್ಷೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ. ಟಿಎಂಸಿ ವಿರುದ್ಧ ಜನರಲ್ಲಿ Anti-incumbency ಹುಟ್ಟಿಕೊಂಡಿದೆ, ಜೊತೆಗೆ ದಲಿತರ ಮತ ಬಿಜೆಪಿ ಪರವಿರುವುದೇ ಇದಕ್ಕೆ ಕಾರಣ ಎಂದೂ ತಿಳಿಸಿದ್ದಾರೆ. ಬಹುಶಃ ಈ ಆಡಿಯೋ ಬಹಿರಂಗಗೊಳ್ಳಬಹುದೆಂದು ಪ್ರಶಾಂತ್ ಕಿಶೋರ್ ಅಂದಾಜಿಸಿರಲಿಲ್ಲ ಎಂದಿದ್ದಾರೆ.
ಇಷ್ಟೇ ಅಲ್ಲದೇ ಈ ಆಡಿಯೋದಲ್ಲಿ ಪ್ರಶಾಂತ್ ಕಿಶೋರ್ ಎಡಪಂಥೀಯರು, ಕಾಂಗ್ರೆಸ್ ಹಾಗೂ ಟಿಎಂಸಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಕೇವಲ ಮುಸಲ್ಮಾನರ ಮನವಿಯನ್ನಷ್ಟೇ ಆಲಿಸಿದ್ದಾರೆ. ಈ ವಿಚಾರವಾಗಿ ಜನರಲ್ಲಿ ಈ ಪಕ್ಷಗಳ ವಿರುದ್ಧ ಕೋಪವಿದೆ ಎಂದೂ ಹೇಳಿರುವುದು ಕೇಳಬಹುದಾಗಿದೆ. ಜೊತೆಗೆ ಬಂಗಾಳದಲ್ಲಿ ಪಿಎಂ ಮೋದಿ ಜನಪ್ರಿಯತೆ ಹೆಚ್ಚಿದ್ದು, ಇಡೀ ದೇಶವೇ ಅವರನಬ್ನು ಇಷ್ಟಪಡುತ್ತದೆ ಎಂಬುವುದನ್ನೂ ಚುನಾವಣಾ ತಂತ್ರಗಾರ ಒಪ್ಪಿಕೊಂಡಿದ್ದಾರೆ.