Asianet Suvarna News Asianet Suvarna News

ಮತದಾನದ ವೇಳೆ ಹಿಂಸಾಚಾರ: ಟಿಎಂಸಿ, ಬಿಜೆಪಿಗರ ಸಂಘರ್ಷ, ಗುಂಡಿನ ದಾಳಿಗೆ 4 ಬಲಿ!

ಪಶ್ಚಿಮ ಬಂಗಾಳದಲ್ಲಿ ನಾಳ್ಕನೇ ಹಂತದ ಮತದಾನ| ಮತದಾನದ ನಡುವೆ ಗುಂಡಿನ ದಾಳಿ| ಗುಂಡಿನ ದಾಳಿಗೆ ನಾಲ್ವರು ಬಲಿ| ಮೊದಲ ಬಾರಿ ಮತದಾನ ಮಾಡಲು ಬಂದಿದ್ದಾತನ ಹತ್ಯೆ

Bengal polls 4 shot dead in Cooch Behar as BJP TMC workers clash pod
Author
Bangalore, First Published Apr 10, 2021, 12:47 PM IST

ಕೋಲ್ಕತ್ತಾ(ಏ.10): ಟಿಎಂಸಿ-ಬಿಜೆಪಿ-ಎಡರಂಗದ ನಡುವೆ ತ್ರಿಕೋನ ಹಣಾಹಣಿ ಏರ್ಪಟ್ಟಿರುವ ಪಶ್ಚಿಮ ಬಂಗಾಳದ 8 ಹಂತಗಳ ವಿಧಾನಸಭೆ ಚುನಾವಣೆ ಪೈಕಿ ಶನಿವಾರ 4ನೇ ಹಂತದ ಮತದಾನ ಆರಂಭವಾಗಿದೆ. ಆದರೀಗ ಈ ಮತದಾನ ಪ್ರಕ್ರಿಯೆಯ ನಡುವೆಯೇ ಟಿಎಂಸಿ, ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಗುಂಡಿನ ದಾಲಿಯೂ ನಡೆದಿದ್ದು, ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

 ಕೂಚ್ ಬೆಹಾರ್ ಜಿಲ್ಲೆಯ ಸೀತಾಳ್‌ಕುಚಿಯ ಮತಗಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಮತದಾರರು ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ದಾದವೇರ್ಪಟ್ಟಿದೆ. ಇದಾದ ಮರುಕ್ಷಣವೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಮೊದಲ ಬಾರಿ ಮತ ಚಲಾಯಿಸಲು ಬಂದಿದ್ದ ಯುವಕ 18 ವರ್ಷದ ಆನಂದ ಬರ್ಮನ್ ಸೇರಿ ಒಟ್ಟು ನಾಲ್ವರು ಹತ್ಯೆಗೀಡಾಗಿದ್ದಾರೆ.

ಪ್ರಶಾಂತ್‌ ಕಿಶೋರ್ ಆಡಿಯೋ ವೈರಲ್‌: ಮೋದಿ ಮೋಡಿ, ಬಿಜೆಪಿ ಎದುರು ಮಂಡಿಯೂರಿತಾ ಟಿಎಂಸಿ?

ಈ ಹಿಂಸಾಚಾರದ ನಡುವೆಯೂ ಬೆಳಗ್ಗೆ ಒಂಭತ್ತು ಗಂಟೆವರೆಗೆ ಶೇ 15.85ರಷ್ಟು ಮತದಾನವಾಗಿದೆ. ಇನ್ನು ಗುಂಡಿನ ದಾಳಿ ನಡೆಸಿದ್ದು ಯಾರು ಎಂಬ ಬಗ್ಗೆ ಈವರೆಗೂ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಹುಡುಕಾಟ ಮುಂದುವರೆಸಿದ್ದಾರೆ.

ನಾಲ್ಕನೇ ಹಂತದ ಮತದಾನ:

44 ಕ್ಷೇತ್ರಗಳಲ್ಲಿ ನಡೆಯಲಿರುವ ಮತದಾನದಲ್ಲಿ ಒಟ್ಟಾರೆ 1.15 ಕೋಟಿ ಮತದಾರರು ಚುನಾವಣಾ ಅಖಾಡದಲ್ಲಿರುವ 373 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಣಯಿಸಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 4ನೇ ಹಂತದ ಚುನಾವಣೆ: ಕೇಂದ್ರ ಸಚಿವ ಸೇರಿ 373 ಜನ ಕಣದಲ್ಲಿ!

ಸುಗಮ ಮತದಾನಕ್ಕಾಗಿ 15,940 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಿಆರ್‌ಪಿಎಫ್‌ನ 789 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪ್ರತಿಯೊಂದು ತುಕಡಿಗಳಲ್ಲಿ ಅಧಿಕಾರಿಗಳು ಸೇರಿದಂತೆ 100 ಸಿಬ್ಬಂದಿ ಇದ್ದಾರೆ.

Follow Us:
Download App:
  • android
  • ios