ಬಿಎಂಟಿಸಿಯಿಂದ ನೌಕರರಿಗೆ ಮತ್ತೊಂದು ಅಸ್ತ್ರ : 50 ಆದವರಿಗೆ ಕಾದಿದ್ಯಾ ಶಾಕ್..?

ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದ್ದು ಇದೀಗ  ಬಿಎಂಟಿಸಿ ಸಿಬ್ಬಂದಿ ಮೇಲೆ ಮತ್ತೊಂದು ಅಸ್ತ್ರ ಪ್ರಯೋಗಿಸಲು ಇಲಾಖೆ ಮುಂದಾಗಿದೆ. 

BMTC Asks Medical Certificate For Above 50 Age Employees snr

 ಬೆಂಗಳೂರು (ಏ.10): ಕಳೆದ ನಾಲ್ಕು ದಿನದಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು ಇದೀಗ  ನೌಕರರ ಮೇಲೆ ಮತ್ತೊಂದು ಬಿಎಂಟಿಸಿ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ.
ತರಬೇತಿ ನೌಕರರ ಬಳಿಕ ನೌಕರರಿಗೂ ಶಾಕ್ ನೀಡಿದೆ. 

ಕಾನೂನು ಅಸ್ತ್ರ ಪ್ರಯೋಗಿಸಿದ ಬಿಎಂಟಿಸಿ  55 ವರ್ಷ ಮೇಲ್ಪಟ್ಟ  ನೌಕರರಿಗೆ ವೈದ್ಯಕೀಯ ಪ್ರಮಾಣ ಪತ್ರ  ಕಡ್ಡಾಯವಾಗಿ ನೀಡಬೇಕು ಎಂದು ಇಂದು ಸುತ್ತೋಲೆ ಹೊರಡಿಸಿದೆ.  
ಇನ್ನೆರಡು ದಿನದಲ್ಲಿ ವೈದ್ಯಕೀಯ ಮತ್ತು ದೇಹದಾರ್ಢ್ಯತೆ ಪ್ರಮಾಣ ಪತ್ರವನ್ನ ಸಂಸ್ಥೆಗೆ ನೀಡಬೇಕು ಎಂದು ಸೂಚನೆ ನೀಡಿದೆ. ಸೋಮವಾರದೊಳಗೆ ಪ್ರಮಾಣ ಪತ್ರ ನೀಡಲು ಡೆಡ್ ಲೈನ್ ನೀಡಿದೆ. 

ಸೋಮವಾರದೊಳಗೆ ವೈದ್ಯಕೀಯ ಪ್ರಮಾಣ ಪತ್ರ ನೀಡದಿದ್ದರೆ ನಿವೃತ್ತಿ ನೀಡುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದು,  ಏಪ್ರಿಲ್ 1 ನೇ ತಾರೀಖಿಗೆ 55 ವರ್ಷ ತುಂಬಿದವರ ಲಿಸ್ಟ್ ಬಿಡುಗಡೆ ಮಾಡಿದೆ. 

ಒಟ್ಟು ವಿವಿಧ ವಿಭಾಗದ 1772 ಜನರ ಲಿಸ್ಟ್ ಬಿಡುಗಡೆ ಮಾಡಿದ ಬಿಎಂಟಿಸಿ,  ಏಪ್ರಿಲ್ 12 ರೊಳಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕೆಂದು ಸೂಚನೆ ನೀಡಿದೆ. 

ಮುಳುಗುತ್ತಿರುವ ಹಡಗಿಗೆ ರಂಧ್ರ ತೋಡಬೇಡಿ: ಸಚಿವ ಅಶೋಕ್‌ ...

ತರಬೇತಿ ನೌಕರರ ವಿಚಾರ :  ತರಬೇತಿ ನೌಕರರನ್ನ ವಜಾಗೊಳಿಸಿರುವ ವಿಚಾರದ ಸಂಬಂಧ ಬಿಎಂಟಿಸಿ ಕಾನೂನು ಅಧಿಕಾರಿ ಟಿ.ವೆಂಕಟೇಶ್  ಪ್ರತಿಕ್ರಿಯಿಸಿದ್ದು,   ಎರಡು ವರ್ಷ ಬಿಎಂಟಿಸಿಯಲ್ಲಿ ತರಬೇತಿ ನೌಕರರು ಕೆಲಸ ಮಾಡಬೇಕು.  ಅವರು ತೃಪ್ತಿಕರವಾಗಿ ಕೆಲಸ ಮಾಡಿದ ನಂತರವೇ ಅವರನ್ನ ಖಾಯಂ ಮಾಡಿಕೊಳ್ಳಲಾಗುತ್ತದೆ. ನೌಕರರು ತರಬೇತಿ ನೌಕರರಿಗೆ ತಪ್ಪು ಸಂದೇಶ  ರವಾನಿಸಿದ್ದಾರೆ.  ಕೆಲವೊಂದು ನೌಕರರ ಮಾತು ಕೇಳಿ ತರಬೇತಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.  

ನೌಕರರು ಹಾಗೂ ತರಬೇತಿ ನೌಕರರು ಸಂಸ್ಥೆಗೆ ಖಾಯಂ ನೌಕರರಲ್ಲ.  ಈಗಾಗಲೇ 338 ತರಬೇತಿ ನೌಕರರನ್ನ ಕೆಲಸದಿಂದ ವಜಾಗೊಳಿಸಲಾಗಿದೆ.  ಈಗ ವಜಾಗೊಂಡಿರುವ ತರಬೇತಿ  ನೌಕರರು ಯಾವುದೇ ಕಾರಣಕ್ಕೂ ವಾಪಸ್ಸು ಬಂದು ಕೆಲಸ ಮಾಡಲು ಸಾಧ್ಯವಿಲ್ಲ.  ನಿಮಗೆ ಯಾರಾದರು ಮತ್ತೆ ಎಂದಿನಂತೆ ಕಾರ್ಯನಿರ್ವಹಿಸಬಹುದು ಎಂದಿದ್ದರೆ ಅದು ನಿಮಗೆ ಬಂದಿರುವ ತಪ್ಪು ಸಂದೇಶವಾಗಿದೆ ಎಂದು ತಿಳಿಸಿದರು.  

 ಕಾರ್ಮಿಕ ಕಾನೂನು ಹಾಗೂ ನ್ಯಾಯಲಯಗಳಲ್ಲಿ ನೌಕರರು ಅರ್ಜಿ ಸಲ್ಲಿಸಬಹುದು. ನಾವು ಕೂಡ ಸಂಸ್ಥೆಯ ವತಿಯಿಂದ ಅರ್ಜಿ ಸಲ್ಲಿಸುತ್ತೇನೆ. ಅಂತಿಮವಾಗಿ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು.  ನಿಮಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳುವ ನಾಯಕರು ಇವರ ಹಿಂದೆ ಇರುವುದಿಲ್ಲ. ನೌಕರರಿಗೆ ತೊಂದರೆಯಾದರೆ ಅದು ಅವರ ವೈಯಕ್ತಿಕ ವಿಚಾರ ಎಂದರು. 

Latest Videos
Follow Us:
Download App:
  • android
  • ios