ಜಿಗಣೆಗಳು ವಿಶಿಷ್ಟ ಜೀವಿಗಳು. ಇವುಗಳಿಗೆ 32 ಮೆದುಳುಗಳು, 10 ಹೊಟ್ಟೆಗಳು ಮತ್ತು 300 ಹಲ್ಲುಗಳಿವೆ. ಜಿಗಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ನಮ್ಮ ಜೀವಜಗತ್ತು ಅತ್ಯಂತ ವಿಶಿಷ್ಟವಾದದ್ದು, ಇಂದೂ ಕೂಡ ನಮ್ಮ ಗಮನಕ್ಕೆ ಬರದ ಎಷ್ಟೋ ಜೀವಿಗಳಿವೆ. ಇನ್ನು ಸಾಕಷ್ಟು ಜೀವಿಗಳ ಬಗ್ಗೆ ಗಮನೆ ಗೊತ್ತಿದ್ದರೂ ಅವರು ಬಗ್ಗೆ, ಅವುಗಳ ಲಕ್ಷಣದ ಬಗ್ಗೆ ಅಷ್ಟಾಗಿ ಮಾಹಿತಿ ಇರೋದಿಲ್ಲ. ಇದರಲ್ಲಿ ಒಂದು ಜೀವಿಯ ಬಗ್ಗೆ ನಿಮಗೆ ತಿಳಿಸಲೇಬೇಕು. ಇದು ನಮ್ಮ ನಡುವೆಯೇ ಇರುವಂಥ ಜೀವಿ, ಪರಾವಲಂಬಿ ಹುಳು. ಆದರೆ, ಇದರ ಬಗ್ಗೆ ಇರುವ ಅತ್ಯಂತ ಕುತೂಹಲಕಾರಿ ಅಂಶ ಏನೆಂದರೆ, ಈ ಜೀವಿಗೆ 32 ಮೆದುಳುಗಳಿವೆ, ತಲಾ 10 ಹೊಟ್ಟೆ ಹಾಗೂ ಕಣ್ಣುಗಳು ಇದಕ್ಕಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಜೀವಿಗೆ 300 ಹಲ್ಲುಗಳು ಇದಕ್ಕಿವೆ. ಈ ಪರಾವಲಂಬಿ ಹುಳು 'ಜಿಗಣೆ..'
ಜಿಗಣೆಗಳ ಬಗ್ಗೆ ನಮಗೆ ಗೊತ್ತಿಲ್ಲದ ಹಲವಾರು ಅಂಶಗಳಿವೆ, ಜಿಗಣೆಗಳು ಅನೆಲಿಡಾ (Annelida) ಗುಂಪಿಗೆ ಸೇರಿದ ಕಶೇರುಕಗಳಲ್ಲದ ಪ್ರಾಣಿಗಳು. ಜಿಗಣೆಗಳು ಸಿಹಿನೀರಿನ ಕೊಳಗಳು, ಕೆರೆಗಳು, ಜೌಗು ಪ್ರದೇಶಗಳು ಮತ್ತು ನಿಧಾನವಾಗಿ ಹರಿಯುವ ತೊರೆಗಳಲ್ಲಿ ಕಾಣಸಿಗುತ್ತದೆ.
ಜಿಗಣೆ ಕಚ್ಚಿದಾಗ ರಕ್ತ ಹೆಪ್ಪುಗಟ್ಟೋದು ವಿಳಂಬ ಯಾಕೆ: ಇನ್ನು ಇವುಗಳ ದೇಹ ಅತ್ಯಂತ ಮೃದು. ಆದರೆ, ಅನೇಖ ಖಂಡಗಳಿಂದ ಕೂಡಿದೆ. ಅವುಗಳ ದೇಹದ ಎರಡೂ ತುದಿಗಳಲ್ಲಿ ಹೀರುಬಟ್ಟಲುಗಳಿದ್ದು, ಇವು ಚಲಿಸಲು ಮತ್ತು ಬಲಿಪಶುವಿಗೆ ಅಂಟಿಕೊಳ್ಳಲು ಸಹಾಯ ಮಾಡುತ್ತವೆ. ಜಿಗಣೆಗಳು ರಕ್ತವನ್ನು ಹೀರುವಾಗ, ಅವು ತಮ್ಮ ಲಾಲಾರಸದಲ್ಲಿರುವ ಹಿರುಡಿನ್ (hirudin) ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಈ ರಾಸಾಯನಿಕವು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ, ಇದರಿಂದ ಜಿಗಣೆಗಳು ಸುಲಭವಾಗಿ ರಕ್ತವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ತೂಕಕ್ಕಿಂತ 10 ಪಟ್ಟು ಹೆಚ್ಚು ರಕ್ತ ಹೀರಿಕೊಳ್ಳುತ್ತದೆ: ಹೌದು ಜಿಗಣೆಗಳು ತಮ್ಮ ತೂಕಕ್ಕಿಂತ ಹತ್ತು ಪಟ್ಟು ಹೆಚ್ಚು ರಕ್ತವನ್ನು ಹೀರಿಕೊಳ್ಳಬಲ್ಲವು. ರಕ್ತವನ್ನು ಹೀರಿಕೊಂಡ ನಂತರ, ಅವು ತಿಂಗಳುಗಳ ಕಾಲ ಆಹಾರವಿಲ್ಲದೆ ಬದುಕಬಲ್ಲವು. ಜಿಗಣೆಗಳು ವೈದ್ಯಕೀಯ ಕ್ಷೇತ್ರದಲ್ಲಿಯೂ ಬಳಕೆಯಾಗುತ್ತವೆ. ಅವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಕೆಲವು ಜಿಗಣೆಗಳು ಮಾಂಸಾಹಾರಿಗಳಾಗಿದ್ದು, ಅವು ಸಣ್ಣ ಕೀಟಗಳು, ಹುಳುಗಳು ಮತ್ತು ಇತರ ಜಲಚರ ಪ್ರಾಣಿಗಳನ್ನು ತಿನ್ನುತ್ತವೆ. ಜಿಗಣೆಗಳು ಬೇಟೆಯಾಡಲು ವಿಶೇಷವಾದ ಬಾಯಿಯ ರಚನೆಯನ್ನು ಹೊಂದಿವೆ.
ಮುಂಗಾರು ಮಳೆ ಶೂಟಿಂಗ್ನಲ್ಲೇ ಸತ್ತೋಗಿಬಿಟ್ರೆ ಅಂತ ಭಯ ಆಗೋಗಿತ್ತು.. ಜಿಗಣೆ ಕಾಟ ಬೇರೆ.. ಆ ದಿನ ನೆನೆದ ಪೂಜಾ ಗಾಂಧಿ
ಜಿಗಣೆಗಳು ತಮ್ಮ ಸಂತಾನೋತ್ಪತ್ತಿಯನ್ನು ಲೈಂಗಿಕವಾಗಿ ಮಾಡುತ್ತವೆ. ಅವು ಹರ್ಮಾಫ್ರೊಡೈಟ್ಗಳು (hermaphrodites), ಅಂದರೆ ಅವು ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುತ್ತವೆ. ಜಿಗಣೆಗಳು ತಮ್ಮ ಮೊಟ್ಟೆಗಳನ್ನು ನೆಲದಲ್ಲಿ ಅಥವಾ ನೀರಿನಲ್ಲಿ ಇಡುತ್ತವೆ. ಮೊಟ್ಟೆಗಳು ಮರಿಗಳಾಗಿ ಹೊರಬಂದ ನಂತರ, ಅವು ಸ್ವತಂತ್ರವಾಗಿ ಬದುಕಲು ಪ್ರಾರಂಭಿಸುತ್ತವೆ.
Jamaligudda ಚಿತ್ರೀಕರಣದಲ್ಲಿ ಜಿಗಣೆ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡೆ
