ಮುಂಗಾರು ಮಳೆ ಶೂಟಿಂಗ್​ನಲ್ಲೇ ಸತ್ತೋಗಿ​ಬಿಟ್ರೆ ಅಂತ ಭಯ ಆಗೋಗಿತ್ತು.. ಜಿಗಣೆ ಕಾಟ ಬೇರೆ.. ಆ ದಿನ ನೆನೆದ ಪೂಜಾ ಗಾಂಧಿ

ಮುಂಗಾರು ಮಳೆ ಶೂಟಿಂಗ್​ ವೇಳೆ ಸತ್ತೋಗಿ​ಬಿಟ್ರೆ ಅಂತ ಭಯ ಆಗೋಗಿತ್ತು ಎನ್ನುತ್ತಲೇ ಸಿನಿಮಾದ ಶೂಟಿಂಗ್​ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಮಳೆ ಹುಡುಗಿ ಪೂಜಾ ಗಾಂಧಿ.
 

Pooja Gandhi about Mungaru Male shooting days and how she afraid of death in Jog falls suc

ಗೋಲ್ಡನ್​ ಸ್ಟಾರ್​ ಗಣೇಶ್​ ಮತ್ತು ಪೂಜಾ ಗಾಂಧಿ ಅಭಿನಯದ ಮುಂಗಾರು ಮಳೆ ಚಿತ್ರ ಬಿಡುಗಡೆಗೊಂಡು 18 ವರ್ಷಗಳೇ ಆಗೋದವು ಎಂದರೆ ಬಹುಶಃ ಯಾರಿಂದಲೂ ನಂಬಲು ಸಾಧ್ಯವೇ ಇಲ್ಲ!  2006ರ ಡಿ.29ರಂದು ಬಿಡುಗಡೆಯಾದ ಈ ಸಿನಿಮಾ ಸೃಷ್ಟಿಸಿದ ಹಲ್​ಚಲ್​ ಅಷ್ಟಿಷ್ಟಲ್ಲ.  ಯೋಗರಾಜ್‌ ಭಟ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಮುಂಗಾರು ಮಳೆ ದೊಡ್ಡ ಜಾದೂ ಮಾಡಿರುವುದು ಸುಳ್ಳಲ್ಲ. 80-90ರ ದಶಕಗಳ ಚಿತ್ರಗಳು, ಅದರಲ್ಲಿನ ಹಾಡುಗಳು ಇಂದಿಗೂ ಜನಮಾನಸದಲ್ಲಿ ನೆಲೆಯೂರಿವೆ. ಆದರೆ ಆ ಬಳಿಕ ಬಂದಿರುವ ಹಲವು ಚಿತ್ರಗಳಲ್ಲಿ ಅರ್ಥಗಳೇ ಇಲ್ಲದ ಹಾಡುಗಳು, ಕೂಗಾಟ, ಕಿರುಚಾಟ, ಅಬ್ಬರದ ಹಾಡುಗಳೆಲ್ಲವೂ ಕ್ಷಣಿಕವಾಗಿ ಮರೆಯಾಗಿ ಬಿಟ್ಟವು. ಅವುಗಳ ನಡುವೆಯೇ ಅಲ್ಲೊಂದಿಲ್ಲೊಂದು ಸಿನಿಮಾಗಳ ಹಾಡು ಮಾತ್ರ ಹಚ್ಚ ಹಸಿರಾಗಿಯೇ ಉಳಿದಿವೆ. ಅವುಗಳಲ್ಲಿ ಒಂದು ಮುಂಗಾರು ಮಳೆ ಚಿತ್ರ ಹಾಗೂ ಅವುಗಳ ಸುಮಧುರ ಗೀತೆಗಳು. 
 
ಮನೋಮೂರ್ತಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಮುಂಗಾರು ಮಳೆಯ ಹಾಡುಗಳಿಗೆ ಮನಸೋಲದವರೇ ಇಲ್ಲವೇನೋ.  ಜಯಂತ ಕಾಯ್ಕಿಣಿ, ಕವಿರಾಜ್‌, ಹೃದಯಶಿವ, ಯೋಗರಾಜ್‌ ಭಟ್‌ ಬರೆದ  ಸಾಹಿತ್ಯಕ್ಕೆ ಸೋನು ನಿಗಮ್‌, ಶ್ರೇಯಾ ಘೋಷಾಲ್‌, ಹೇಮಂತ್‌ ಕುಮಾರ್‌, ಉದಿತ್‌ ನಾರಾಯಣ್‌, ಸುನಿಧಿ ಚವ್ಹಾಣ್‌, ಹೇಮಂತ್‌ ಕುಮಾರ್‌ ತಮ್ಮ ಕಂಠಮಾಧುರ್ಯದಿಂದ ಜೀವ ತುಂಬಿದವರು. ಅದರಲ್ಲಿನ ಎಲ್ಲಾ ಹಾಡುಗಳು ಹಿಟ್​ ಆಗಿದ್ದರೂ ಕುಣಿದು ಕುಣಿದು ಬಾರೆ ಮತ್ತು  ಅನಿಸುತಿದೆ ಯಾಕೋ ಇಂದು ಸಾರ್ವಕಾಲಿಕ ಹಿಟ್‌ ಗೀತೆಯಾಗಿ ಹೊರಹೊಮ್ಮಿದೆ. ಈ ಹಾಡಿನ ಶೂಟಿಂಗ್​ ಸಮಯದಲ್ಲಿ ಆದ ಘಟನೆಯನ್ನು ಮಳೆಹುಡುಗಿ ಎಂದೇ ಖ್ಯಾತಿ ಪಡೆದಿರುವ ಪೂಜಾ ಗಾಂಧಿ ಹೇಳಿದ್ದಾರೆ.

ಹಿಟ್ಲರ್​ ಕಲ್ಯಾಣದ ಅಂತರಾ ಪಾತ್ರಧಾರಿ ರಜನಿ WANTED! ಅಭಿಮಾನಿಗಳಿಗೆ ಶಾಕ್​ ಕೊಟ್ಟ ನಟಿ

ರ್ಯಾಪಿಡ್​ ರಶ್ಮಿ ಷೋನಲ್ಲಿ ನಟಿ ಪೂಜಾ, ಕುಣಿದು ಕುಣಿದು ಬಾರೆ ಚಿತ್ರದ ಶೂಟಿಂಗ್​ ಸಮಯದಲ್ಲಿ ಜೋಗ್​ಫಾಲ್ಸ್​ಗೆ ಕರೆದುಕೊಂಡು ಹೋದ ಅನುಭವ ಬಿಚ್ಚಿಟ್ಟಿದ್ದಾರೆ. ಕೆಲವೊಂದು ಸಲ ಮಳೆ ಬರ್ತಿತ್ತು, ಕೆಲವೊಮ್ಮೆ ಕೃತಕ ಮಳೆ ಸೃಷ್ಟಿ ಮಾಡಲಾಗಿತ್ತು. ನಮ್ಮನ್ನು ಜೋಗ್​ಫಾಲ್ಸ್​ಗೆ ಕರೆದುಕೊಂಡು ಹೋದರು. ಇವೆಲ್ಲಾ ಮೊದಲೇ ಗೊತ್ತಿರಲಿಲ್ಲ. ಫಾಲ್ಸ್​ನಲ್ಲಿ ಇಳಿಯೋಕೆ ಸಿಕ್ಕಾಪಟ್ಟೆ ಭಯವಾಯ್ತು. ಎಲ್ಲಿ ಬಿದ್ದೋದ್ರೆ, ಎಲ್ಲಿ ಸತ್ತೋದ್ರೆ ಅಂತೆಲ್ಲಾ ಭಯ ಆಗೋಯ್ತು. ಈ ಹಾಡಿನ ಶೂಟಿಂಗ್​ ಮಾಡೋ ಸಮಯದಲ್ಲಿ ಜಿಗಣೆ ಕಾಟ ಬೇರೆ. ಕೈಗೆಲ್ಲಾ ಕಚ್ಚುತ್ತಿತ್ತು. ಆದರೆ, ಈ ಸಿನಿಮಾ ಇಷ್ಟು ಫೇಮಸ್​  ಆಗುತ್ತದೆ ಎಂದು ಅಂದುಕೊಂಡೇ ಇರಲಿಲ್ಲ ಎಂದಿದ್ದಾರೆ ಪೂಜಾ ಗಾಂಧಿ.

ಅದೇ ರೀತಿ ಕುಣಿದು ಕುಣಿದು ಬಾರೆ ಹಾಡಿನ ಶೂಟಿಂಗ್​ನಲ್ಲಿ ಗಣೇಶ್​ ಮೈಮೇಲೆ ಕಾಲಿಡುವ ದೃಶ್ಯ ಅಥವಾ ಶಾಕುಂತಲಾ ರೀತಿ ಬಟ್ಟೆ ತೊಡುವುದು ಇವ್ಯಾವುದೂ ಮೊದಲೇ ಗೊತ್ತಿರಲಿಲ್ಲ. ಯೋಗರಾಜ್​ ಭಟ್​ ಸರ್​ ಅದನ್ನೆಲ್ಲಾ ಮೊದಲೇ  ಹೇಳಿರುವುದಿಲ್ಲ. ಅವರ ಕೆಲಸದ ರೀತಿಯೇ ವಿಭಿನ್ನವಾಗಿರುತ್ತದೆ. ಈ ಡಾನ್ಸ್​ ಸ್ಟೆಪ್​ ಮಾಡುವಾಗ ಡಾನ್ಸ್​ ರೀತಿ ಮಾಡಬೇಡಿ, ಎಂಜಾಯ್​ ಮಾಡಿ ಮಾಡಿ ಎನ್ನುತ್ತಿದ್ದರು. ಹೀಗೆ ಸ್ಫೂರ್ತಿ ತುಂಬಿದರು. ಶೂಟಿಂಗ್​ ಸಮಯದಲ್ಲಿ ತುಂಬಾ ಎಂಜಾಯ್​ ಮಾಡಿದ್ವಿ ಎಂದು ನಟಿ ಹೇಳಿದ್ದಾರೆ. ಸಿನಿಮಾ ಈ ಲೆವೆಲ್​ಗೆ ಹೋಗತ್ತೆ ಎಂದು ಗೊತ್ತಿರಲಿಲ್ಲ ಎಂದೂ ಪೂಜಾ ಹೇಳಿದ್ದಾರೆ. 

ಒಂದೇ ಬಾರಿಗೆ ಹೆಚ್ಚು ಕಾಂಡೋಮ್​ ಬಳಸಿದ್ರೆ ಏನಾಗತ್ತೆ? 'ಗಿಲ್ಲಿ' ನಟಿ ರಾಕುಲ್​ ಉತ್ತರ ಕೇಳಿ...

Latest Videos
Follow Us:
Download App:
  • android
  • ios