Asianet Suvarna News Asianet Suvarna News

ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ, ರಾಯಲ್ಸ್ ಕೊರಳಿಗೆ ಜಯದ ಮಾಲೆ: ಸೆ.23 ಟಾಪ್ 10 ನ್ಯೂಸ್!

ದೇಶದಲ್ಲಿ ಕೊರೋನಾ ವೈರಸ್ ಹಾವಳಿ ಮಿತಿ ಮೀರಿದ್ದು, ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಲಾರಂಭಿಸಿದೆ. ಹೀಗಾಗಿ ಜನ ಸಾಮಾನ್ಯರು ಕೊಂಚ ನಿರಾಳರಾಗಿದ್ದಾರೆ. ಹೀಗಿದ್ದರೂ ಬೆಂಗಳೂರಿನ IISc ಸಂಸ್ಥೆ ಆಘಾತಕಾರಿ ವರದಿ ಬಯಲು ಮಾಡಿದ್ದು, ಏಪ್ರಿಲ್‌ನಲ್ಲಿ ಕರ್ನಾಟಕಲ್ಲಿ ಕೊರೋನಾ ತಾರಕಕ್ಕೇರಲಿದೆ ಎಂದು ಹೇಳಿದೆ. ಇನ್ನು ಇತ್ತ ಪಾಕಿಸ್ತಾನ ಸೇನೆ ಪರ ಅಲ್ಲಿನ ಮಾಜಿ ಪ್ರಧಾನಿ ನವಾಜ್ ಶರೀಫ್ ಮಗಳು ಮರಿಯಂ ಕಿಡಿ ಕಾರಿದ್ದಾರೆ. ಇತ್ತ ಕೇಂದ್ರ ಹಾಗೂ ವಿಪಕ್ಷಗಳ ನಡುವಿನ ಗುದ್ದಾಟ ಮುಂದುವರೆದಿದ್ದು, ಮತ್ತೆ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇಷ್ಟೇ ಅಲ್ಲದೇ ಇಂದು ಸೆ. 23ರ ಟಾಪ್ ಹತ್ತು ಸುದ್ದಿಗಳು.

Top 10 News of 23rd September 2020
Author
Bangalore, First Published Sep 23, 2020, 6:25 PM IST

ಅಪಾಯ ಮರೆಯುತ್ತಿರುವ ಕರ್ನಾಟಕ, ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ!
Top 10 News of 23rd September 2020
ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ತಾರಕಕ್ಕೇರುವುದು ಅಕ್ಟೋಬರ್- ನವೆಂಬರ್‌ನಲ್ಲಿ ಅಲ್ಲ. ಬದಲಿಗೆ 2021ರ ಮಾರ್ಚ್, ಏಪ್ರಿಲ್‌ಗೆ ಎಂಬ ಆಘಾತಕಾರಿ ವಿಷಯ ಐಐಎಸ್‌ಸಿ ಅಧ್ಯಯನದಲ್ಲಿ ಬಹಿರಂಗವಾಗಿದೆ. ಮುಂದಿನ ಮಾರ್ಚ್‌ವರೆಗೂ ಸೋಂಕು ಏರುಗತಿಯಲ್ಲೇ ಸಾಗಲಿದ್ದು, ಏಪ್ರಿಲ್ ಮೊದಲ ವಾರದಲ್ಲಿ 25.7 ಲಕ್ಷ ಮುಟ್ಟಲಿದೆ. ಅದೇ ವೇಳೆ ರಾಜ್ಯದಲ್ಲಿ ಸುಮಾರು 25 ಸಾವಿರ ಮಂದಿ ಸೋಂಕಿಗೆ ಬಲಿಯಾಗಲಿದ್ದಾರೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಸದನದಲ್ಲಿ ಮಾಜಿ ಸಿಎಂ ಪುತ್ರನಿಗೆ ಸ್ಪೀಕರ್ ವಾರ್ನ್...!
Top 10 News of 23rd September 2020
ಕೊರೋನಾ ಭೀತಿಯ ನಡುವೆಯೂ ವಿಧಾನಮಂಡಲ ಅಧಿವೇಶನ ಸೆ.21ರಿಂದ ಆರಂಭಗೊಂಡಿದ್ದು, ಕಾಂಗ್ರೆಸ್ ಹಾಗೂ ಆಡಳಿತರೂಢ ಬಿಜೆಪಿ  ನಡುವೆ ಸದನದಲ್ಲಿ ವಾಕ್ಸಮರ ನಡೆಯುತ್ತಿದೆ.

ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಆ ಒಂದು ಪದ ಬಳಸಿದ್ದಕ್ಕೆ ಸದನ ಅಲ್ಲೋಲ-ಕಲ್ಲೋಲ
Top 10 News of 23rd September 2020
ಕೊರೋನಾ ಭ್ರಷ್ಟಾಚಾರದ ಕುರಿತಾಗಿ ಬುಧವಾರ ಸದನದಲ್ಲಿ ನಿಯಮ 69 ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಳಕೆಯಾದ ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಅವರು ಬಳಸಿದಂತ ಆ ಒಂದು ಪದ  ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿತು.

ನಿಯಂತ್ರಣಕ್ಕೆ ಬಂದಿಲ್ಲ ಕೊರೋನಾ; ಟಫ್‌ ರೂಲ್ಸ್‌ ಜಾರಿಗೆ ಮುಂದಾಗ್ತಾರಾ ಮೋದಿ?
Top 10 News of 23rd September 2020
ಲಾಕ್‌ಡೌನ್ ಸಡಿಲಿಕೆಯಾದ ಮೇಲೆ ಕೊರೊನಾ ಹೋಗಿದೆ ಎಂದು ನಾವು ಓಡಾಡುತ್ತಿದ್ದೇವೆ. ಆದರೆ ಕೋವಿಡ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಅತೀ ಹೆಚ್ಚು ಕೇಸ್ ದಾಖಲಾಗುತ್ತಿರುವ ಕರ್ನಾಟಕ ಸೇರಿದಂತೆ 7 ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. 

ಆರ್ಥಿಕತೆಯ ನಂತರ ಕೇಂದ್ರ ಸರ್ಕಾರಕ್ಕೆ ರಾಹುಲ್ ವಿದೇಶಾಂಗ ನೀತಿ ಪಾಠ!
Top 10 News of 23rd September 2020
ಆರ್ಥಿಕ ವಿಚಾರ ಮತ್ತು ಕೊರೋನಾ ವೈರಸ್ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತಿದ್ದ ರಾಹುಲ್ ಗಾಂಧಿ ಈ  ಬಾರಿ ವಿದೇಶಾಂಗ ವಿಚಾರದಲ್ಲಿ ಮೋದಿ ನಡೆಯನ್ನು ಟೀಕೆ ಮಾಡಿದ್ದಾರೆ.

ಐಪಿಎಲ್ 2020: CSK vs RR ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆ; ರಾಯಲ್ಸ್ ಕೊರಳಿಗೆ ಜಯದ ಮಾಲೆ
Top 10 News of 23rd September 2020
ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ರಾಜಸ್ಥಾನ ತಂಡ 16 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಪಾಕ್‌ ಆರ್ಮಿಗೆ ಸಾರ್ವಜನಿಕವಾಗೇ ಮಂಗಳಾರತಿ ಎತ್ತಿದ ಮಾಜಿ ಪ್ರಧಾನಿ ಪುತ್ರಿ!
Top 10 News of 23rd September 2020
 ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಮಗಳು ಹಾಗೂ ರಾಜಕಾರಣಿ ಮರಿಯಂ ನವಾಜ್ ಷರೀಫ್ ಅಲ್ಲಿನ ಸೇನೆ ಬಗ್ಗೆ ಸಾರ್ವಜನಿಕವಾಗೇ ಕಿಡಿ ಕಾರಿದ್ದಾರೆ. 

7 ವರ್ಷದ ನಂತ್ರ ಟಾಲಿವುಡ್‌ಗೆ ಮರಳ್ತಿದ್ದಾರೆ ನಟ ಸಿದ್ಧಾರ್ಥ್
Top 10 News of 23rd September 2020
ತಮಿಳು ನಟ ಸಿದ್ಧಾಥ್ ಬರೋಬ್ಬರಿ 7 ವರ್ಷದ ನಂತರ ಟಾಲಿವುಡ್‌ಗೆ ಮರಳ್ತಾ ಇದ್ದಾರೆ. ಯಾವ ಸಿನಿಮಾ..? ಯಾರ ಜೊತೆ..? ಇಲ್ಲಿ ನೋಡಿ

ಸಿಇಒ ಸ್ಯಾಲರಿ ಎಷ್ಟಿರಬೇಕು? ಇದು ನಾರಾಯಣ ಮೂರ್ತಿ ಕೊಟ್ಟ ಲೆಕ್ಕಾಚಾರ!
Top 10 News of 23rd September 2020
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಎಂದರೆ ಕನ್ನಡಿಗರಿಗೆ ವಿಶೇಷ ಅಭಿಮಾನ, ಸದ್ಯ ಇವರು ಕಂಪನಿಯೊಂದರ ಸಿಇಒ ವೇತನ ಹೇಗಿರಬೇಕೆಂಬ ಕುರಿತು ಕೆಲ ಸಲಹೆ ನೀಡಿದ್ದಾರೆ. ಇದೇ ವೇಳೆ ಕಾರ್ಪೋರೇಟ್‌ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ಕೊರತೆ ಕಾಣುತ್ತಿರುವ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಸತತ 3ನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ: ಇಲ್ಲಿದೆ ಸೆ. 23ರ ರೇಟ್!
Top 10 News of 23rd September 2020
ಇಂದು ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 550 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 47,500 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  610 ರೂಪಾಯಿ ಇಳಿಕೆ ಕಂಡಿದ್ದು, 51,810 ರೂಪಾಯಿ ಆಗಿದೆ. 

Follow Us:
Download App:
  • android
  • ios