ನವದೆಹಲಿ(ಸೆ. 23) ಆರ್ಥಿಕ ವಿಚಾರ ಮತ್ತು ಕೊರೋನಾ ವೈರಸ್ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತಿದ್ದ ರಾಹುಲ್ ಗಾಂಧಿ ಈ  ಬಾರಿ ವಿದೇಶಾಂಗ ವಿಚಾರದಲ್ಲಿ ಮೋದಿ ನಡೆಯನ್ನು ಟೀಕೆ ಮಾಡಿದ್ದಾರೆ.

ಹಲವು ದಶಕಗಳಿಂದ ಕಾಂಗ್ರೆಸ್‌ ಪಕ್ಷ ಭಾರತದೊಂದಿಗೆ ಬೆಸೆದಿದ್ದ ನೆರೆ–ಹೊರೆಯ ರಾಷ್ಟ್ರಗಳ ಬಾಂಧವ್ಯ ಮತ್ತು ಸಂಬಂಧಗಳನ್ನು ನರೇಂದ್ರ ಪ್ರಧಾನಿ ಹಾಳು ಮಾಡಿದ್ದಾರೆ ಎಂದು  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮೋದಿ ನಿರ್ಮಿತ ವಿಪತ್ತುಗಳ ಪಟ್ಟಿ ಕೊಟ್ಟ ರಾಹುಲ್ ಗಾಂಧಿ

ಮಾಧ್ಯಮವೊಂದರ ಸುದ್ದಿ ತುಣುಕನ್ನು ಶೇರ್ ಮಾಡಿಕೊಂಡಿದ್ದು ಬಾಂಗ್ಲಾದೇಶದೊಂದಿಗೆ ಸಂಬಂಧ ಬಿಗಡಾಯಿಸಿದೆ.   ಇನ್ನೊಂದು ಕಡೆ ಬಾಂಗ್ಲಾದೇಶ ಚೀನಾದೊಂದಿಗೆ ಸಂಬಂಧ ಗಟ್ಟಿಗೊಳಿಸಿಕೊಳ್ಳುತ್ತಿದೆ.

ಬಿಜೆಪಿ ನೇತೃತ್ವದ ಎನ್ ಡಿಎ ವಿದೇಶಾಂಗ ನೀತಿಯಲ್ಲಿ ಅನೇಕ ನಿಯಮಗಳನ್ನು ಮುರಿದಿದ್ದಾರೆ. ಇದು ನಿಧಾನವಾಗಿ ಪರಿಣಾಮ ಉಂಟುಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕೊರೋನಾ ವೈರಸ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದ ಅರ್ಧವ್ಯವಸ್ಥೆ ಹಳ್ಳ ಹಿಡಿದಿದೆ ಎಂದು ಮತ್ತೆ ದಾಳಿ ಮಾಡಿದ್ದಾರೆ.  ರೈತರ ದನಿ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರೈತರ ಪರವಾಗಿ ಮಾತನಾಡಿದ ಎಂಟು ಜನ ಸಂಸದರನ್ನು ಅಮಾನತು ಮಾಡಿ ಸರ್ವಾಧಿಕಾರದ ಧೋರಣೆ ಮೆರೆದಿದೆ ಎಂದು ಆರೋಪಿಸಿದ್ದಾರೆ.