ಬೆಂಗಳೂರು(ಸೆ.23): ಕೊರೋನಾ... ಕಣ್ಣಿಗೆ ಕಾಣದ ಪುಟ್ಟ ವೈರಸ್ ಇಡೀ ಮನುಕುಲವನ್ನೇ ಕಂಗಾಲಾಗಿಸಿದೆ. ಜನರ ಅನಾವಾಶ್ಯಕ ಓಡಾಟಕ್ಕೆ ಬ್ರೇಕ್ ಹಾಕಿದೆ. ಅತ್ತ ಉದ್ಯಮಗಳೂ ನೆಲ ಕಚ್ಚಿವೆ. ಈ ನಡುವೆ ಚಿನ್ನದ ಬೇಡಿಕೆ ಕುಸಿದಿದೆ. ಆದರೆ ದರ ಇಳಿಕಯಾಗಬಹುದೆಂದು ಭಾವಿಸಿದ್ದವರಿಗೆ ಮಾತ್ರ ದಿನೇ ದಿನೇ ಆಟವಾಡುತ್ತಿರುವ ಚಿನ್ನದ ದರ ಶಾಕ್ ಕೊಟ್ಟಿದೆ. ನೋಡ ನೋಡುತ್ತಿದ್ದಂತೆಯೇ ಹಳದಿ ಲೋಹ ದಾಖಲೆಯ ಏರಿಕೆ ಕಂಡಿತ್ತು. ಹೀಗಿದ್ದರೂ ಈ ಏರಿಳಿತದ ಮಧ್ಯೆ ಕಳೆದ ಮೂರು ದಿನದಿಂದ ಚಿನ್ನದ ದರ ಇಳಿಕೆಯ ಹಾದಿ ಕಂಡಿದೆ.  ಇಂದು ಸೆ. 23ರಂದೂ ಚಿನ್ನದ ದರ ಕುಸಿದಿದೆ. ಇಲ್ಲಿದೆ ಇಂದಿನ ಗೋಲ್ಡ್ ರೇಟ್.

ಚಿನ್ನದ ದರ ಭಾರೀ ಇಳಿಕೆ, ಗ್ರಾಹಕರಿಗೆ ಖುಷಿಯೋ ಖುಷಿ: ಇಲ್ಲಿದೆ ಸೆ. 22ರ ಚಿನ್ನದ ಬೆಲೆ!

ಇಂದು ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 550 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 47,500 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  610 ರೂಪಾಯಿ ಇಳಿಕೆ ಕಂಡಿದ್ದು, 51,810 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲೂ 1,600ರೂ. ಇಳಿಕೆಯಾಗಿದ್ದು, ಒಂದು ಕೆ. ಜಿ ಬೆಳ್ಳಿಯ ಬೆಲೆ 59,000 ರೂ ಆಗಿದೆ.

ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಲ್ಲಿದೆ ಸೆ. 21ರ ಬೆಲೆ!

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.