ಇಸ್ಲಮಾಬಾದ್(ಸೆ.23): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಮಗಳು ಹಾಗೂ ರಾಜಕಾರಣಿ ಮರಿಯಂ ನವಾಜ್ ಷರೀಫ್ ಅಲ್ಲಿನ ಸೇನೆ ಬಗ್ಗೆ ಸಾರ್ವಜನಿಕವಾಗೇ ಕಿಡಿ ಕಾರಿದ್ದಾರೆ. 

4 ವರ್ಷ ಅವಧಿಯಲ್ಲಿ 2120 ಪಾಕಿಸ್ತಾನಿಗಳಿಗೆ ಭಾರತ ಪೌರತ್ವ: ಕೇಂದ್ರ

ಹೌದು ಗಿಲ್ಗಿಟ್‌–ಬಾಲ್ಟಿಸ್ತಾನವನ್ನು ಪಾಕಿಸ್ತಾನದ ಪ್ರಾಂತ್ಯವನ್ನಾಗಿಸುವ ಇಲ್ಲಿನ ಸೇನೆಯ ನಿರ್ಧಾರವನ್ನು ಖಂಡಿಸಿರುವ  ಮರಿಯಂ ನವಾಜ್ ಷರೀಫ್ ಸಾರ್ವಜನಿಕವಾಗೇ ಸೇನೆ ವಿರುದ್ಧ ಹರಿ ಹಾಯ್ದಿದ್ದಾರೆ. ಸ್ವಾತಂತ್ರ್ಯ ಇಲ್ಲಿನ ಸ್ಥಳೀಯರ ಹಕ್ಕು. ಆದರೆ ಸೇನೆಯ ನಿರ್ಧಾರದಿಂದ ಇಲ್ಲಿನ ಜನರಿಗೆ ಅನ್ಯಾಯವಾಗಲಿದೆ ಎಂದಿದ್ದಾರೆ. ಮರಿಯಂರವರ ಈ ಮಾತುಗಳು ಜನರಲ್ ಬಾಜ್ವಾಗೆ ತೀವ್ರ ಮುಜುಗರವುಂಟು ಮಾಡಿದೆ.

ಅಲ್ಲದೇ ಇದೊಂದು ರಾಜಕೀಯ ವಿಚಾರವಾಗಿದ್ದು, ಸಂಸತ್ತಿನಲ್ಲಿ ನಾಯಕರು ಈ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಈ ಬಗ್ಗೆ  GHQನಲ್ಲಿ ಚರ್ಚೆ ನಡೆಸಿದ್ದು ಸರಿಯಲ್ಲ ಎಂದೂ ಅವರು ತಿಳಿಸಿದ್ದಾರೆ.