ಕೋಲ್ಕತ್ತಾ(ಜು.04): ಪ.ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಇಸ್ಕಾನ್ ಏರ್ಪಡಿಸಿದ್ದ ರಥಯಾತ್ರೆಯಲ್ಲಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹಣೆಗೆ ಕುಂಕುಮ ಇಟ್ಟು, ಬಳೆ ಮತ್ತು ಸಿಂಧೂರ ತೊಟ್ಟು ಭಾಗವಹಿಸಿ ಗಮನ ಸೆಳೆದಿದ್ದಾರೆ.

ಇಸ್ಕಾನ್ ಏರ್ಪಡಿಸಿದ್ದ ರಥಯಾತ್ರೆಯನ್ನು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಉದ್ಘಾಟಿಸಿದ್ದು, ಈ ವೇಳೆ ನುಸ್ರತ್ ಅಪ್ಪಟ ಹಿಂದೂ ಸಂಪ್ರದಾಯದ ಉಡುಗೆಯಲ್ಲಿ ಮಿಂಚಿದರು.

ಸಂಸತ್ತಿನಲ್ಲಿ ಕುಂಕುಮ, ಮಂಗಳಸೂತ್ರ ಉಟ್ಟು ಬಂದಿದಕ್ಕೆ ಕೆಲವು ಮೌಲ್ವಿಗಳು ನುಸ್ರತ್ ಜಹಾನ್ ವಿರುದ್ಧ ಫತ್ವಾ ಹೊರಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನುಸ್ರತ್ ಇಸ್ಕಾನ್ ರಥಯಾತ್ರೆಯಲ್ಲಿ ಹಿಂದೂ ಸಂಪ್ರದಾಯದಂತೆ ಉಡುಗೆ ತೊಟ್ಟು ಗಮನ ಸೆಳೆದರು.

ಮಮತಾ ಕೂಡಾ ಭಾಗಿ!

"