ನವದೆಹಲಿ[ಜೂ.26]: ತೃಣಮೂಲ ಕಾಂಗ್ರೆಸ್‌ನಿಂದ ಆಯ್ಕೆ ಆದ ಬಂಗಾಳಿ ನಟಿಯರಾದ ನುಸ್ರತ್ ಜಹಾನ್ ಹಾಗೂ ಮಿಮಿ ಚಕ್ರವರ್ತಿ ಮಂಗಳವಾರ ಲೋಕಸಭಾ ಸದಸ್ಯರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸದನ ಸೇರುತ್ತಿದ್ದಂತೆ ಬಂಗಾಳಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಇವರಿಬ್ಬರು, ವಂದೇ ಮಾತರಂ ಮತ್ತು ಜೈಹಿಂದ್ ಘೋಷಣೆಯೊಂದಿಗೆ ತಮ್ಮ ಪ್ರಮಾಣವಚನ ಅಂತ್ಯಗೊಳಿಸಿದರು. ಬಳಿಕ ಇವರಿಬ್ಬರೂ ಸ್ಪೀಕರ್ ಓಂ ಬಿರ್ಲಾ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡರು.

ಈ ಪೈಕಿ ಸೀರೆ ಉಟ್ಟು ಹಣೆಯಲ್ಲಿ ಕುಂಕುಮ ಇಟ್ಟುಕೊಂಡು ಬಂದಿದ್ದ ನುಸ್ರತ್ ಎಲ್ಲರ ಗಮನ ಸೆಳೆದರು. ಜೂ.19ರಂದು ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಆಗಿರುವ ನುಸ್ರತ್ ವಿವಾಹವಾಗಿದ್ದರು. ಈ ಕುರಿತ ವಿಡಿಯೋ ಭಾರೀ ವೈರಲ್ ಆಗಿದೆ.