Asianet Suvarna News Asianet Suvarna News

ಚಿಕ್ಕಮಗಳೂರಿನ ಹುಡುಗಿ ದಕ್ಷಿಣ ಭಾರತದ ಮೊದಲ ಫೈಟರ್ ಫೈಲಟ್

ಈಕೆ ಚಿಕ್ಕಮಗಳೂರಿನ ಮರ್ಲೆ ಎಂಬ ಹಳ್ಳಿಯ ಹುಡುಗಿ ಇಂದು ಭಾರತೀಯ ವಾಯುಸೇನೆಯಲ್ಲಿ ಫೈಟರ್  ಫೈಲಟ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಯಾರು ಆಕೆ? ಆಕೆಯ ಜೀವನದ ಯಶೋಗಾಥೆ ಏನು? ಮುಂದೆ ಓದಿ...

The Daredevil Girl from Chikmagalur who is IAF’s first woman fighter pilot from south India

ಚಿಕ್ಕಮಗಳೂರು, ಜೂನ್ 16: ಈಕೆ ಚಿಕ್ಕಮಗಳೂರಿನ ಮರ್ಲೆ ಎಂಬ ಹಳ್ಳಿಯ ಹುಡುಗಿ ಇಂದು ಭಾರತೀಯ ವಾಯುಸೇನೆಯಲ್ಲಿ ಫೈಟರ್  ಫೈಲಟ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೌದು ಚಿಕ್ಕಮಗಳೂರಿನ ಮೇಘನಾ ಶಾನ್ ಭೋಗ್ ತಮ್ಮ ತರಬೇತಿ ಮುಗಿಸಿ ಭಾರತದ 6ನೇ  ಮತ್ತು ದಕ್ಷಿಣ ಭಾರತದ ಮೊದಲ ಮಹಿಳಾ ಫೈಟರ್ ಫೈಲಟ್ ಎನ್ನುವ ಹಿರಿಮೆ ತಮ್ಮದಾಗಿರಿಸಿಕೊಂಡಿದ್ದಾರೆ.

ಉಡುಪಿಯ  ಶಾಲೆಯಲ್ಲಿ  ಪ್ರಾಥಮಿಕ ಶಿಕ್ಷಣ  ಓದುವಾಗಲೆ ಮೇಘನಾಗೆ ಫೈಲಟ್ ಆಗುವ ಆಸೆ ಚಿಗುರೊಡೆದಿತ್ತು.  ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮಾಡುವಾಗ ಮೇಘನಾ ಒಳಗೆ ಹುದುಗಿದ್ದ ದೇಶಸೇವೆಯ ಫೈಲಟ್ ಹೊರ ಬಂದಿದ್ದ. 

ವಾಯುಪಡೆಯ ಪುಟಗಳಲ್ಲಿ ದಾಖಲಾಯ್ತು ಹೊಸ ಇತಿಹಾಸ

ಇಂಜನಿಯರಿಂಗ್ ಎರಡನೇ ವರ್ಷದಲ್ಲಿದ್ದಾಗ ಮೇಘನಾ ಗೋವಾದ ವಿಮಾನದಿಂದ ಜಂಪ್ ಮಾಡಿ ಮೊದಲ ಬಾರಿ ಗಾಳಿಯಲ್ಲಿ ಹಾರಾಟ ಮಾಡಿ ತಮ್ಮ ಸಾಹಸ ಗುಣ ಸಾಬೀತು ಮಾಡಿದ್ದರು. 2015ರಲ್ಲಿ ಇಂಜಿನಿಯರಿಂಗ್ ಮುಗಿಸಿದ ನಂತರ ಅಸಮಾನ್ಯವಾದದನ್ನು ಏನಾದರೂ ಮಾಡಬೇಕು ಎಂಬುದನ್ನುತೀರ್ಮಾನಿಸಿದ್ದರು.

ಇದೇ ಸಂದರ್ಭದಲ್ಲಿ ಭಾರತೀಯ ವಾಯು ಸೇನೆ ಮಹಿಳಾ ಫೈಲಟ್ ಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಕರೆದಿತ್ತು. ಈ ಮೊದಲು ಮಹಿಳಾ ಫೈಲಟ್ ಗಳಾಗಿ ಸೇರಿದ್ದ ಮೋಹನಾ ಸಿಂಗ್, ಭಾವನಾ ಕಾಂತ್, ಅವಾನಿ ಛತುರ್ವೇದಿ ಅವರ ಸಾಧನೆಯಿಂದ ಪ್ರೇರಿತರಾದ ಮೇಘನಾ ತಾನು ವಾಯು ಸೇನೆ ಸೇರಬೇಕು ಎಂದು ಗಟ್ಟಿ ನಿರ್ಧಾರ ಮಾಡುತ್ತಾರೆ.ಆಗಸ್ಟ್ 2017 ರಲ್ಲಿ ವಾಯು ಸೇನೆಯ ತರಬೇತಿಗೆ ಆಯ್ಕೆಯಾಗುವ ಮೇಘನಾ ಹಿಂದೆ ಅಲ್ಲಿಂದ ಹಿಂದೆ ತಿರುಗಿ ನೋಡುವುದೇ ಇಲ್ಲ.

ಹೆಂಡತಿ ಮಕ್ಕಳೆ ಈ ರೈತನಿಗೆ ಎತ್ತುಗಳು!

ಪ್ರತಿಯೊಬ್ಬ ಯುವಕರು ಫೈಲಟ್  ಆಗುವ ಕನಸು ಕಂಡರೆ ಅದಕ್ಕಿಂತ ದೊಡ್ಡದು ಏನು ಇಲ್ಲ. ನಿಮ್ಮ ಆಯ್ಕೆ ಮತ್ತು ಅದಕ್ಕೆ ಬೇಕಾದ ಪರಿಶ್ರಮ ವಹಿಸುವುದು ನಿಮ್ಮದೇ ಜವಾಬ್ದಾರಿಯಾಗಿರುತ್ತದೆ ಎಂದು ಮೇಘನಾ ಹೇಳುತ್ತಾರೆ. ಬೀದರ್ ನಲ್ಲಿ ಇನ್ನೊಂದು ತಿಂಗಳ ನಂತರ ಆರಂಭವಾಗಲಿರುವ  ವಾಯು ಪಡೆಯ ಯುದ್ಧ ವಿಮಾನದ ತರಬೇತಿಯ ನೇತೃತ್ವವನ್ನು ಮೇಘನಾ ವಹಿಸಲಿದ್ದಾರೆ.  ಕರ್ನಾಟಕದ ಹುಡುಗಿ ಇದೀಗ ವಾಯು ಸೇನೆಯ ಪ್ರಮುಖ ಆಸ್ತಿಯಾಗಿದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

Follow Us:
Download App:
  • android
  • ios