ಬಡತನದ ಬೇಗೆ : ನೇಗಿಲಿಗೆ ಹೆಗಲು ಕೊಟ್ಟ ರೈತ

First Published 15, Jun 2018, 3:13 PM IST
Poverty force farm family to plough field by itself
Highlights

ಚಿಕ್ಕಮಗಳೂರಿನಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮುಂಗಾರು ಸುರಿಯುತ್ತಿದ್ದು, ರೈತರು ಕೃಷಿ ಕಾರ್ಯಗಳನ್ನು ಆರಂಭ ಮಾಡಿದ್ದಾರೆ. ಇತ್ತ ಒಂದು ಕುಟುಂಬ ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು ಹೊಲವನ್ನು ಉಳಲು ಎತ್ತುಗಳನ್ನು ತರುವ ಶಕ್ತಿಯೂ ಇಲ್ಲದೇ, ಸ್ವತಃ ನೇಗಿಲನ್ನು ಹೆಗಲ ಮೇಲೆ ಹೊತ್ತು ಹೊಲ ಉಳುಮೆ ಮಾಡುತ್ತಿde.

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮುಂಗಾರು ಸುರಿಯುತ್ತಿದ್ದು, ರೈತರು ಕೃಷಿ ಕಾರ್ಯಗಳನ್ನು ಆರಂಭ ಮಾಡಿದ್ದಾರೆ. 

ಇತ್ತ ಒಂದು ಕುಟುಂಬ ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು ಹೊಲವನ್ನು ಉಳಲು ಎತ್ತುಗಳನ್ನು ತರುವ ಶಕ್ತಿಯೂ ಇಲ್ಲದೇ, ಸ್ವತಃ ನೇಗಿಲನ್ನು ಹೆಗಲ ಮೇಲೆ ಹೊತ್ತು ಹೊಲ ಉಳುಮೆ ಮಾಡುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಡೆದಿದೆ.  

ಸ್ವತಃ ಕೊರಳಿಗೆ ಹಗ್ಗ ಕಟ್ಟಿ ನೊಗಕ್ಕೆ ಈ ರೈತ ಹೆಲುಕೊಟ್ಟಿದ್ದಾರೆ. ಎತ್ತುಗಳಿಲ್ಲದ ಕಾರಣ ತಾಯಿ, ಮಗ, ಮೊಮ್ಮಗನೇ ಸ್ವತಃ ನೇಗಿಲು ಹಿಡಿದು ಹೊಲವನ್ನು ಉತ್ತು ಬೇಸಾಯಕ್ಕೆ ಅಣಿಗೊಳಿಸುತ್ತಿದ್ದಾರೆ. ಕಳೆದ ಮೂರು ದಿನದಿಂದ ಇದೇ ರೀತಿ ಬೇಸಾಯದಲ್ಲಿ ಈ ಕುಟುಂಬ ತೊಡಗಿದೆ. 

ಕಳೆದ ಬಾರಿಯೆಲ್ಲಾ ಕಡೂರು ತಾಲೂಕು ಹೆಚ್ಚಿನ ಬರಗಾಲವನ್ನು ಎದುರಿಸಿತ್ತು. ಆದರೆ ಈ ಬಾರಿ ಇಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗಿದ್ದು,  ಬೇಸಾಯವನ್ನು ಪ್ರಾರಂಭ ಮಾಡಿದ್ದಾರೆ.  

loader