ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಪೈಲಟ್’ಗಳಾಗಿ ಮೂವರು ಮಹಿಳಾ ಸಿಬ್ಬಂದಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾದಂತಾಗಿದೆ.

ನವದೆಹಲಿ(ಡಿ.18): ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಪೈಲಟ್’ಗಳಾಗಿ ಮೂವರು ಮಹಿಳಾ ಸಿಬ್ಬಂದಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾದಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಯುಪಡೆಯ ವಿವಿಧ ಹುದ್ದೆಯಲ್ಲಿ ಹಿಂದಿನಿಂದಲೂ ಮಹಿಳಾ ಸಿಬ್ಬಂದಿ ಇದ್ದರಾದರೂ, ಯುದ್ಧವಿಮಾನಗಳನ್ನು ಹಾರಿಸುವ ಪೈಲಟ್’ಗಳು ಇರಲಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಅವನಿ ಸಿಂಗ್, ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್ ಯುದ್ಧ ವಿಮಾನಗಳ ಪೈಲಟ್ ಹುದ್ದೆಗೆ ಆಯ್ಕೆಯಾಗಿದ್ದರು.

ಅವರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕದ ಬೀದರ್ ನಂತರ ಬಂಗಾಳದ ವಾಯುನೆಲೆಗಳಲ್ಲಿ ವಿವಿಧ ರೀತಿಯ ಯುದ್ಧ ವಿಮಾನಗಳ ಹಾರಾಟದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಭಾನುವಾರ ತಮ್ಮ ತಮ್ಮ ಸ್ವ್ಕಾಡ್ರನ್ ಸೇರಿಕೊಂಡಿದ್ದಾರೆ.