Asianet Suvarna News Asianet Suvarna News

ಬಾಲಿವುಡ್ ನಟ ಸುಶಾಂತ್ ಸೂಸೈಡ್, ಮತ್ತೆ ಲಾಕ್‌ಡೌನ್‌ಗೆ ಮೋದಿ ಡಿಸೈಡ್?ಜೂ.14ರ ಟಾಪ್ 10 ಸುದ್ದಿ!

ನಟ ಚಿರಂಜೀವಿ ಸರ್ಜಾ ಅಗಲಿಕೆ ನೋವಿನಿಂದ ಯಾರೂ ಹೊರಬಂದಿಲ್ಲ, ಅಷ್ಟರಲ್ಲೇ ಕ್ರಿಕೆಟಿಗ ಎಂ.ಎಸ್.ಧೋನಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನಮನ್ನಣೆಗಳಿಸಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಡೋನಾಲ್ಡ್ ಟ್ರಂಪ್ ಕೆಂಗಣ್ಣು ಬೀರಿದ್ದಾರೆ. ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ಕರೆದಿರುವ ಬೆನ್ನಲ್ಲೇ ಮತ್ತೆ ಲಾಕ್‌ಡೌನ್ ಅನ್ನೋ ಅನಮಾನ ಹೆಚ್ಚಾಗತೊಡಗಿದೆ. ಮಾಸ್ಕ್ ಧರಿಸದಿದ್ದರೆ ದುಬಾರಿ ದಂಡ, ನರಿ ಬುದ್ದಿ ತೋರಿಸಿದ ಪಾಕ್ ಸೇರಿದಂತೆ ಜೂನ್ 14ರ ಟಾಪ್ 10 ಸುದ್ದಿ ಇಲ್ಲಿವೆ.


 

sushant singh rajput death TO lockdown TOP 10 news of june 14
Author
Bengaluru, First Published Jun 14, 2020, 4:59 PM IST | Last Updated Jun 14, 2020, 4:59 PM IST

'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!

sushant singh rajput death TO lockdown TOP 10 news of june 14

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್(34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಇಂದು ಬೆಳಗ್ಗೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸುಶಾಂತ್ ಪತ್ತೆಯಾಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು ಎಂಬುವುದು ಉಲ್ಲೇಖನೀಯ.


ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ಟ್ರಂಪ್‌ ಸಜ್ಜು

sushant singh rajput death TO lockdown TOP 10 news of june 14

ಕೊರೋನಾ ವೈರಸ್‌ ಹಾವಳಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶದ ಉದ್ಯೋಗಿಗಳ ಮೇಲೆ ಗದಾಪ್ರಹಾರ ಮಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಭಾರತೀಯ ಐಟಿ ಉದ್ಯೋಗಿಗಳ ಬಹುಬೇಡಿಕೆಯ ಎಚ್‌-1ಬಿ ಸೇರಿದಂತೆ ವಿವಿಧ ಔದ್ಯೋಗಿಕ ವೀಸಾಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವನ್ನು ಟ್ರಂಪ್‌ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಾಸ್ಕ್‌ ಧರಿಸದಿದ್ದರೆ 6 ತಿಂಗಳು ಜೈಲೂಟ, 5000 ರೂ. ದಂಡ!

sushant singh rajput death TO lockdown TOP 10 news of june 14

ಬಹಳ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುತ್ತಿರುವ ಕೊರೋನಾ ನಿಗ್ರಹಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ.  ಮಾಸ್ಕ್‌ ಧರಿಸದಿದ್ದರೆ 6 ತಿಂಗಳು ಜೈಲೂಟ, 5000 ರೂಪಾಯಿ ದಂಡ ವಿದಿಸಲು ಆದೇಶ ನೀಡಲಾಗಿದೆ.

ಪಿಒಕೆಗೆ ರೋಗಿಗಳ ಶಿಫ್ಟ್‌ ಮಾಡುತ್ತಿದೆ ಪಾಕ್‌!

sushant singh rajput death TO lockdown TOP 10 news of june 14

ಕೊರೋನಾ ವೈರಸ್‌ ನಿಯಂತ್ರಿಸಲು ಹೆಣಗಾಡುತ್ತಿರುವ ಪಾಕಿಸ್ತಾನ, ‘ಪಾಕ್‌ ಆಕ್ರಮಿತ ಕಾಶ್ಮೀರ’ (ಪಿಒಕೆ)ವನ್ನು ಕೊರೋನಾ ರೋಗಿಗಳ ಡಂಪಿಂಗ್‌ ಯಾರ್ಡ್‌ ಮಾಡಿಕೊಂಡಿರುವ ಸಂಗತಿ ಬಯಲಾಗಿದೆ. ಪಾಕಿಸ್ತಾನದ ಈ ನಡೆ ವಿರುದ್ಧ ಪಿಒಕೆಯಲ್ಲಿ ಬೃಹತ್‌ ಪ್ರತಿಭಟನೆಗಳು ನಡೆಯುತ್ತಿವೆ.

ಮತ್ತೆ ಲಾಕ್‌ಡೌನ್‌ ಮಾಡಲು ಪ್ರಧಾನಿ ಮೋದಿ ಚಿಂತಿಸಿದ್ದಾರಾ?

sushant singh rajput death TO lockdown TOP 10 news of june 14

ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆ ನಡೆಸಿರುವುದು, ಇನ್ನೆರಡು ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವುದು ನೋಡಿದ್ರೆ, ಮತ್ತೊಮ್ಮೆ ದಿಢೀರ್ ಲಾಕ್‌ಡೌನ್‌ ಘೋಷಣೆ ಮಾಡಲು ತಯಾರಿ ನಡೆಸಿದ್ದಾರಾ? ಎನ್ನುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ದುಬಾರಿ ಕಾಫಿಯಿಂದ ಬದಲಾಯ್ತು ಕ್ರಿಕೆಟ್: ಕೆಎಲ್ ರಾಹುಲ್!

sushant singh rajput death TO lockdown TOP 10 news of june 14

ಕಾಫಿ ವಿಥ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ದುಬಾರಿ ಕಾಫಿ ಕುಡಿದಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ಕಳೆದ ವರ್ಷ ಅಮಾನತು ಶಿಕ್ಷೆ ಅನುಭವಿಸಿದ್ದಾರೆ. ನಿಷೇಧದ ಬಳಿಕ ರಾಹುಲ್ ಕ್ರಿಕೆಟ್ ಹೇಗೆ ಬದಲಾಯ್ತು ಅನ್ನೋದನ್ನು ಸ್ವತಃ ಕೆಎಲ್ ವಿವರಿಸಿದ್ದಾರೆ.

ನಟಿ ರಮ್ಯಕೃಷ್ಣ ಕಾರಲ್ಲಿ 100 ಮದ್ಯದ ಬಾಟಲ್‌ ಪತ್ತೆ; ಅಕ್ರಮ ಸಾಗಾಟದ ಶಂಕೆ ?

sushant singh rajput death TO lockdown TOP 10 news of june 14

 ಬಹುಭಾಷಾ ನಟಿ ರಮ್ಯಕೃಷ್ಣ ತನ್ನದೇ ವಿಭಿನ್ನ ಶೈಲಿಯಲ್ಲಿ ಅಭಿನಯಿಸುತ್ತಾ ಸುಮಾರು 100ಕ್ಕೂ  ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿ ರಮ್ಯಕೃಷ್ಣ ವಿರುದ್ಧ ದೂರೊಂದು  ಕೇಳಿ ಬರುತ್ತಿರುವುದು...

8 ವಾರಗಳಲ್ಲಿ 10 ಹೂಡಿಕೆ! ರಿಲಯನ್ಸ್‌ ಜೊತೆ ಕೈಜೋಡಿಸಿದ ಎಲ್‌ಕ್ಯಾಟರ್‌ಟನ್...

sushant singh rajput death TO lockdown TOP 10 news of june 14

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 1,894.50 ಕೋಟಿ ರೂ. ಹೂಡಿಕೆ ಮಾಡಲಿರುವ ಎಲ್ ಕ್ಯಾಟರ್‌ಟನ್ ; ಕಳೆದ 8 ವಾರಗಳಲ್ಲಿ ಜಾಗತಿಕ ಹೂಡಿಕೆದಾರರಿಂದ 1,04,326.95 ಕೋಟಿ ರೂ. ಹೂಡಿಕೆ ಪಡೆದಿರುವ ಜಿಯೋ ಪ್ಲಾಟ್‌ಫಾರ್ಮ್ಸ್! ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿಯಿಂದ ಹೂಡಿಕೆ.


ಟಾಟಾ ಅಲ್ಟ್ರೋಜ್ ಕಾರಿಗೆ ಬಂಪರ್ ಆಫರ್, EMI ಕೇವಲ 5,555 ರೂಪಾಯಿ!...

sushant singh rajput death TO lockdown TOP 10 news of june 14

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಆಟೋಮೊಬೈಲ್ ಕಂಪನಿಗಳು ಸುಲಭ ಸಾಲ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಟಾಟಾ ಮೋಟಾರ್ಸ್ ವಿಶೇಷ ಆಫರ್ ಘೋಷಿಸಿದೆ. ಇದೀಗ ಟಾಟಾ ಅಲ್ಟ್ರೋಜ್ ಕಾರಿಗೆ EMI ನೀಡಲಾಗಿದೆ. 

ಡಿಕೆಶಿಗೆ ನಾಣ್ಯ ನೀಡಿ ಹರಸಿದ ಮಂಗಳಮುಖಿಯರು

sushant singh rajput death TO lockdown TOP 10 news of june 14

ವಿಘ್ನ ನಿವಾರಣೆಗಾಗಿ ಡಿಕೆ ಶಿವಕುಮಾರ್ ಕೆಪಿಸಿಸಿ ಕಟ್ಟಡದಲ್ಲಿ ವಿಶೇಷ ಹೋಮ, ಹವನಾದಿಗಳನ್ನು ಮಾಡಿಸಿ ದೇವರ ಮೊರೆ ಹೋದರು. ಅಲ್ಲಿಗೆ ಬಂದಿದ್ದ ಮಂಗಳಮುಖಿಯರಿಂದ ನಾಣ್ಯ ಪಡೆದು ಆಶೀರ್ವಾದ ಪಡೆದರು. ಮಂಗಳಮುಖಿಯರಿಂದ ನಾಣ್ಯ ಪಡೆಯುವುದು ಶುಭ ಸಂಕೇತ ಎಂಬ ನಂಬಿಕೆಯಿದ್ದು ಅದರಂತೆ ಮಂಗಳಮುಖಿಯರು ಡಿಕೆಶಿಗೆ ನಾಣ್ಯ ನೀಡಿ ಹರಸಿದರು.   

Latest Videos
Follow Us:
Download App:
  • android
  • ios