ಮುಂಬಯಿ (ಜೂ. 13): ಪ್ರಪಂಚದ ಅತಿದೊಡ್ಡ ಖಾಸಗಿ ಈಕ್ವಿಟಿ ಸಂಸ್ಥೆಗಳಲ್ಲೊಂದಾದ ಎಲ್ ಕ್ಯಾಟರ್‌ಟನ್‌ ಕಂಪನಿಯು, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್‌ಗಳಲ್ಲಿ 1894.50 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ ಎಂದು ಕಂಪನಿ ಪ್ರಕಟಣೆಯು ತಿಳಿಸಿದೆ.

ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಎಲ್ ಕ್ಯಾಟರ್‌ಟನ್‌ನ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ 0.39% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. 

ಇದನ್ನೂ ಓದಿ | ಜಿಯೋ ಮಾರ್ಟ್:‌ ಕಿರಾಣಿ ಮಾರಾಟ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ವಿಸ್ತರಣೆ...

ಈ ಹೂಡಿಕೆಯೊಂದಿಗೆ, ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 104,326.95 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ.
 
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್‌ಗೆ 388 ದಶಲಕ್ಷಕ್ಕೂ ಹೆಚ್ಚಿನ ಮೊಬೈಲ್  ಚಂದಾದಾರರಿದ್ದಾರೆ. ಜೊತೆಗೆ,  ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ತಂತ್ರಜ್ಞಾನಗಳಲ್ಲಿ ಜಿಯೋ ಛಾಪು ಮೂಡಿಸಿದೆ.

ಇದನ್ನೂ ಓದಿ | ಎಫ್‌ಬಿ ನಂತರ ಜಿಯೋಗೆ ಮತ್ತೊಬ್ಬ ಗೆಳೆಯ ಕೆಕೆಆರ್, ದೊಡ್ಡ ಹೂಡಿಕೆ...

1989ರಲ್ಲಿ ಸ್ಥಾಪನೆಯಾದ ಎಲ್ ಕ್ಯಾಟರ್ಟನ್, ವಿಶ್ವದೆಲ್ಲೆಡೆಯ ಪ್ರಮುಖ ಗ್ರಾಹಕ-ಕೇಂದ್ರಿತ ಬ್ರಾಂಡ್‌ಗಳ ಮೆಚ್ಚಿನ ಹೂಡಿಕೆ ಪಾಲುದಾರ ಸಂಸ್ಥೆಯಾಗಿದೆ. 

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮಾತನಾಡಿ, “ಗ್ರಾಹಕರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುವ ಹಾಗೂ ಡಿಜಿಟಲ್ ಶಕ್ತಿಯ ಸಾಮರ್ಥ್ಯವನ್ನು ಭಾರತಕ್ಕೆ ಪರಿಚಯಿಸುವ ನಮ್ಮ ಪ್ರಯಾಣದಲ್ಲಿ ಪಾಲುದಾರರಾಗಿ ಎಲ್ ಕ್ಯಾಟರ್‌ಟನ್ ಅನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಗ್ರಾಹಕ-ಕೇಂದ್ರಿತ ವ್ಯವಹಾರಗಳನ್ನು ರೂಪಿಸುವಲ್ಲಿ ಎಲ್ ಕ್ಯಾಟರ್ಟನ್‌ನ ಅಮೂಲ್ಯ ಅನುಭವದ ಪ್ರಯೋಜನ ಪಡೆದುಕೊಳ್ಳುವುದನ್ನು ನಾನು ವಿಶೇಷವಾಗಿ ಎದುರು ನೋಡುತ್ತಿದ್ದೇನೆ, ಏಕೆಂದರೆ ಭಾರತವನ್ನು ಡಿಜಿಟಲ್ ನಾಯಕತ್ವದತ್ತ ಕೊಂಡೊಯ್ಯಲು ತಂತ್ರಜ್ಞಾನ ಮತ್ತು ಗ್ರಾಹಕ ಅನುಭವಗಳೆರಡೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.” ಎಂದು ಹೇಳಿದ್ದಾರೆ.