Asianet Suvarna News Asianet Suvarna News

ಹೊಗೆಯಾಗುವ ಮುನ್ನ ಆವಿ: ಸಿಂಧ್ ವಿಮೋಚನೆಗೆ ಮೋದಿಗೆ ಮನವಿ!

ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ| ಹೂಸ್ಟನ್ ನಲ್ಲಿ ಬಿಡುವಿರದ ಕಾರ್ಯಕ್ರಮದಲ್ಲಿ ಮೋದಿ ಭಾಗಿ| ಕಾಶ್ಮೀರಿ ಪಂಡಿತರೊಂದಿಗೆ ಪ್ರಧಾನಿ ಮೋದಿ ಸಮಾಲೋಚನೆ| ಮೋದಿ ಭೇಟಿಯಾಗಲು ಯತ್ನಿಸಿದ ಸಿಂಧ್ ಸ್ವಾತಂತ್ರ್ಯ ಹೋರಾಟಗಾರರು| ಸಿಂಧ್ ಸ್ವಾತಂತ್ರ್ಯಕ್ಕಾಗಿ ನೆರವಾಗುವಂತೆ ಪ್ರಧಾನಿ ಅವರಲ್ಲಿ ಮನವಿ| ಸಿಂಧ್ ಸ್ವಾತಂತ್ರ್ಯಕ್ಕಾಗಿ ಮೋದಿ ನೆರವಿನ ಭರವಸೆ ವ್ಯಕ್ತಪಡಿಸಿದ ಹೋರಾಟಗಾರರು| 

Sindh Activists Urge PM Modi To Help Attain Independence From Pakistan
Author
Bengaluru, First Published Sep 22, 2019, 5:54 PM IST

ಹೂಸ್ಟನ್(ಸೆ.22): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಹೂಸ್ಟನ್’ನಲ್ಲಿ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿ ಮಾಡಿರುವ ಪ್ರಧಾನಿ, ಹೊಸ ಕಾಶ್ಮೀರ ನಿರ್ಮಾಣದ ಭರವಸೆ ನೀಡಿದ್ದಾರೆ.

ಇನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿದ್ದು, ವಿಮೋಚನೆಗಾಗಿ ಸಿಂಧ್ ಹೋರಾಟಗಾರರು ಪ್ರಧಾನಿ ಮೋದಿ ಅವರಲ್ಲಿ ಸಹಾಯ ಬೇಡಿದ್ದಾರೆ. 

ಸಿಂಧ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಸ್ವಾತಂತ್ರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಸಿಂಧ್ ಹೋರಾಟಗಾರರು ಮೊರೆ ಇಟ್ಟಿದ್ದಾರೆ. 

ಹೂಸ್ಟನ್’ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಿಂಧ್  ಹೋರಾಟಗಾರರು, ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗಲು ನೆರವು ನೀಡಿದ ಹಾಗೆ ಸಿಂಧ್ ಪ್ರಾಂತ್ಯದ ಸ್ವಾತಂತ್ರ್ಯಕ್ಕೂ ನೆರವಾಗಬೇಕು ಎಂದು ಆಗ್ರಹಿಸಿದರು. 

ಸ್ವಾತಂತ್ರ್ಯಕ್ಕಾಗಿ ಭಾರತದ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಾಯ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಸಿಂಧ್ ವಿಮೋಚನಾ ಹೋರಾಟಗಾರ ಝಫರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ 1971 ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯ ಗಳಿಸಿಕೊಳ್ಳುವುದಕ್ಕೆ ಬಾಂಗ್ಲಾದೇಶಕ್ಕೆ ಸಹಾಯ ಮಾಡಿತ್ತು. ಈಗ ಸಿಂಧ್ ಸಮುದಾಯಕ್ಕೆ ಪಾಕಿಸ್ತಾನದಿಂದ ವಿಮೋಚನೆಗೊಳ್ಳುವುದಕ್ಕೆ ಸಹಾಯ ಮಾಡಬೇಕೆಂದು ಜಫರ್ ಹೇಳಿದ್ದಾರೆ.

Follow Us:
Download App:
  • android
  • ios